ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹೆಸರಿನ ಸಿನಿಮಾಗಳು ತೆರೆಗೆ ಬರುತ್ತಿವೆ. 1998 ರಲ್ಲಿ ಉಪೇಂದ್ರ ಅವರ 'ಎ' ಚಿತ್ರ ಬಿಡುಗಡೆಯಾದ ಮೇಲೆ ವಿಭಿನ್ನ ಟೈಟಲ್ಗಳ ಸಿನಿಮಾಗಳ ಶೆಕೆ ಆರಂಭವಾಯ್ತು. 2013 ರಲ್ಲಿ 6-5=2 ಎಂಬ ಸಿನಿಮಾ ತೆರೆಕಂಡಿತ್ತು. ಇದೀಗ ವ್ಯಕ್ತಿಯ ಎತ್ತರವನ್ನು ಹೇಳುವ '5 ಅಡಿ 7 ಅಂಗುಲ' ಎಂಬ ಹೆಸರಿನ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
![5 Adi 7 Angula got U/A certificate](https://etvbharatimages.akamaized.net/etvbharat/prod-images/5-feet-7-inches-kannada-film-11580264303107-3_2901email_1580264314_1082.jpg)
ಈಗಾಗಲೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ. 'ಬಿಯಾನ್ ಡ್ರೀಮ್ಸ್ ಕ್ರಿಯೇಷನ್ಸ್' ಬ್ಯಾನರ್ ಅಡಿ ನಂದಲಿಕೆ ನಿತ್ಯಾನಂದ ಪ್ರಭು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಚಿತ್ರಕ್ಕಾಗಿ ಬಂಡವಾಳ ಕೂಡಾ ಹೂಡಿದ್ದಾರೆ. ಚಿತ್ರಕ್ಕೆ ರುದ್ರಮುನಿ ಬೆಳಗರೆ ಛಾಯಾಗ್ರಹಣ ಇದೆ. ಚಿತ್ರದ ಹಾಡುಗಳಿಗೆ ರಘು ತಾಣೆ ಸಂಗೀತ ಒದಗಿಸಿದ್ದಾರೆ. ಹಿರಿಯ ತಂತ್ರಜ್ಞ ಬಿ.ಎಸ್. ಕೆಂಪರಾಜ್ ಸಂಕಲನ ಮಾಡಿದ್ದಾರೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾವಸ್ತು ಇರುವ ಚಿತ್ರವನ್ನು ಬೆಂಗಳೂರು, ನೆಲಮಂಗಲ, ಶುಂಠಿ ಕೊಪ್ಪ, ಮಡಿಕೇರಿ ಹಾಗೂ ಸುತ್ತ ಮಾಡಲಾಗಿದೆ. ರಾಸಿಕ್ ಕುಮಾರ್, ಭುವನ್, ಅದಿತಿ, ವೀಣಾ ಸುಂದರ್, ಸತ್ಯನಾಥ್, ಪ್ರಣವ ಮೂರ್ತಿ, ಚಕ್ರವರ್ತಿ, ಮಹಾದೇವ್, ಪವನ್ ಕುಮಾರ್ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.
![5 Adi 7 Angula movie](https://etvbharatimages.akamaized.net/etvbharat/prod-images/5-feet-7-inches-kannada-film1580264303108-18_2901email_1580264314_1080.jpg)