ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ಗೆ ಕಂಟಕದ ಮೇಲೆ ಕಂಟಕಗಳು ಎದುರಾಗುತ್ತಿವೆ. ನಿನ್ನೆ ಸಲ್ಮಾನ್ ಖಾನ್ ಮನೆ ಮುಂದೆ ಬಿಗ್ ಬಾಸ್ ಬ್ಯಾನ್ ಮಾಡುವಂತೆ ಪ್ರತಿಭಟನೆ ಮಾಡಲಾಗಿದ್ದು, 20 ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಎರಡು ವಾರಗಳ ಹಿಂದೆ ಪ್ರಾರಂಭವಾಗಿರುವ ಬಿಗ್ ಬಾಸ್-13, ಆರಂಭವಾಗಿನಿಂದಲೂ ವಿರೋಧವನ್ನು ಕಟ್ಟಿಕೊಂದಿದೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಈ ರಿಯಾಲಿಟಿ ಶೋವನ್ನು ಬ್ಯಾನ್ ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದು, ಈ ಹಿಂದೆ ಅಖಿಲ ಭಾರತ ವ್ಯಾಪಾರಿಗಳ ಸಂಘವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಬ್ಯಾನ್ ಮಾಡುವಂತೆ ಪತ್ರ ಬರೆದಿತ್ತು.
ಇನ್ನು, ಈ ಬಿಗ್ ಬಾಸ್ ಶೋನಲ್ಲಿ ಪ್ರಸಾರವಾಗುವ "ಬೆಡ್ ಫ್ರೆಂಡ್ಸ್ ಫಾರ್ ಎವರ್" ಎಂಬ ಕಾನ್ಸೆಪ್ಟ್ ಅಸಭ್ಯತೆಯಿಂದ ಕೂಡಿದೆ. ಇದು ಭಾರತೀಯ ನೈತಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪ ಮಾಡಲಾಗಿತ್ತು.
ಅಲ್ಲದೆ ಎರಡು ದಿನಗಳ ಹಿಂದೆ ಕರ್ಣಿ ಸೇನಾ ಸಂಘಟನೆಯು, ಮಾಹಿತಿ ಮತ್ತು ಪ್ರಾಸಾರ ಸಚಿವ ಪ್ರಕಾಶ್ ಜಾವಡೇಕರ್ಗೆ ಪತ್ರ ಬರೆದಿದ್ದು, ಬಿಗ್ ಬಾಸ್ ಹಿಂದೂ ಸಂಸ್ಕೃತಿಯನ್ನು ಅಪಮಾನ ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕೆಂದ ಆರೋಪ ಮಾಡಿದ್ದರು.
ಇನ್ನು, ಸಲ್ಮಾನ್ ಖಾನ್ ಮನೆ ಮುಂದೆ ಉಪದೇಶ್ ರಾಣ ಎಂಬುವರು ಪ್ರತಿಭಟನೆಯಲ್ಲಿ ತೊಡಗಿ ಬಿಗ್ ಬಾಸ್ ಮೂಲಕ ಅಶ್ಲೀಲತೆಯನ್ನು ಪ್ರಸಾರ ಮಾಡುತ್ತಿರುವುದನ್ನು ನಿಲ್ಲಿಸಿ ಎಂದು ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.