ETV Bharat / sitara

ಪಂಜಾಬ್​ನಿಂದ ರಾಜ್ಯಸಭೆಗೆ ಆಯ್ಕೆಯಾದ ಯಂಗ್​ಮ್ಯಾನ್​ ರಾಘವ್​ ಚಡ್ಡಾ ಲ್ಯಾಕ್ಮೆ ಫ್ಯಾಷನ್​ ವೀಕ್​ನಲ್ಲಿ ಮಿಂಚಿಂಗ್​

author img

By

Published : Mar 28, 2022, 1:01 PM IST

Updated : Mar 28, 2022, 1:12 PM IST

ಪಂಜಾಬ್​ನಿಂದ ರಾಜ್ಯಸಭೆಗೆ ಆಯ್ಕೆಯಾದ ಅತಿ ಕಿರಿಯ ಸದಸ್ಯ ರಾಘವ್​ ಚಡ್ಡಾ ಅವರು ದೆಹಲಿಯಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್​ ವೀಕ್​ನಲ್ಲಿ ರ್‍ಯಾಂಪ್‌​ ವಾಕ್​ ಮಾಡಿ ಗಮನ ಸೆಳೆದಿದ್ದಾರೆ..

raghav-chadha
ರಾಘವ್​ ಚಡ್ಡಾ

ನವದೆಹಲಿ : ಇತ್ತೀಚೆಗಷ್ಟೇ ಎಎಪಿಯಿಂದ ರಾಜ್ಯಸಭೆಗೆ ಆಯ್ಕೆಯಾದ ಅತಿ ಕಿರಿಯ ಸದಸ್ಯ ರಾಘವ್​ ಚಡ್ಡಾ ಅವರು ಭಾನುವಾರ ನಡೆದ ಲ್ಯಾಕ್ಮೆ ಫ್ಯಾಶನ್​ ವೀಕ್​ನಲ್ಲಿ ರ್‍ಯಾಂಪ್‌ ವಾಕ್​ ಮಾಡಿ ಗಮನ ಸೆಳೆದಿದ್ದಾರೆ. ಅಲ್ಲದೇ, ಕಾರ್ಯಕ್ರಮದ ಶೋ​ಟಾಪರ್​ ಆಗಿದ್ದಾರೆ. ರಾಘವ್​ ಚಡ್ಡಾರ ರ್‍ಯಾಂಪ್‌ ವಾಕ್​ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಪಂಜಾಬ್‌ನ ಅತಿ ಕಿರಿಯ ರಾಜ್ಯಸಭಾ ಸದಸ್ಯ ರಾಘವ್​ ಚಡ್ಡಾ ಅವರು ಡಿಸೈನರ್​ ಪವನ್ ಸಚ್ದೇವ್​ ರೂಪಿಸಿದ ಕಪ್ಪು ಸೂಟ್​ನಲ್ಲಿ ನಟ ಅಪರಶಕ್ತಿ ಖುರಾನಾ ಅವರ ಜೊತೆ ರ್‍ಯಾಂಪ್‌​ ವಾಕ್​ ಮಾಡಿ ಮಿಂಚಿದ್ದಾರೆ. ತಮ್ಮ ಈ ವಿಡಿಯೋವನ್ನು ಚಡ್ಡಾ ಅವರೇ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್​ ಆಗಿವೆ.

ಆಮ್​ ಆದ್ಮಿ ಪಕ್ಷವು 33 ವರ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸೇರಿದಂತೆ ಅಶೋಕ್ ಕುಮಾರ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್ ಮತ್ತು ಸಂಜೀವ್ ಅರೋರಾರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿದೆ. ಇನ್ನು ರಾಘವ್​ ಚಡ್ಡಾ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ ದೆಹಲಿ ಶಾಸಕರಾಗಿದ್ದರು. ಇದೀಗ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆಯ ವೇಳೆ ಪಕ್ಷವು ಅವರನ್ನು ಪಂಜಾಬ್ ಘಟಕದ ಸಹ-ಪ್ರಭಾರಿಯಾಗಿ ನೇಮಕ ಮಾಡಿತ್ತು.

ಓದಿ: ದೆಹಲಿಯಲ್ಲಿ ಮನುಷ್ಯರಿಗೆ ಮಾತ್ರವಲ್ಲ, ಮರಗಳಿಗೂ ಉಚಿತ ಆ್ಯಂಬುಲೆನ್ಸ್​ ಸೇವೆ!

Last Updated : Mar 28, 2022, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.