ಮುಂಬೈ: ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯ ಸೀರೀಸ್ಗಳು ಹಿಂದಿಯಲ್ಲಿ ನಾಗಿನ್ ಹೆಸರಿನಲ್ಲಿ ಪ್ರಸಾರವಾಗಿತ್ತು. ಇ ಸೀರೀಸ್ಗಳ ಬೇಸ್ ಇಟ್ಟುಕೊಂಡು ಏಕ್ತಾ ಕಪೂರ್ ಅವರು ನಾಗಿನ್ ಎನ್ನುವ ಸಿನಿಮಾ ನಿರ್ದೇಶಿಸಲು ಯತ್ನಿಸಿದ್ದರು. ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಅಥವಾ ಕತ್ರೀನಾ ಕೈಫ್ ಅವರನ್ನು ನಾಯಕಿಯನ್ನಾಗಿ ಮಾಡುವ ಆಲೋಚನೆ ಅವರಿಗಿತ್ತಂತೆ.
ಈ ಸಿನಿಮಾದಲ್ಲಿ ನಟಿಸಲು ಕತ್ರಿನಾ ಕೈಫ್ ಒಪ್ಪಿಗೆ ಸೂಚಿಸಲಿಲ್ಲ. ಆದರೆ ನಟಿ ಪ್ರಿಯಾಂಕ ಚೋಪ್ರಾ ಒಪ್ಪಿಗೆ ಕೊಟ್ಟಿದ್ದರಾದರೂ ಅಷ್ಟೊತ್ತಿಗೆ ಅವರನ್ನು ಹಾಲಿವುಡ್ ಕೈ ಬೀಸಿ ಕರೆಯಿತು. ಅಲ್ಲಿ ಬಿಝಿಯಾದ ಪೀಕೀ ಅವರಿಗೆ ಇನ್ನೂ ಒಳ್ಳೊಳ್ಳೆ ಅವಕಾಶಗಳು ಸಿಕ್ಕಿದವು. ಆದರೆ, ನಾಗಿನ್ ಟೇಕ್ ಆಫ್ ಆಗಲಿಲ್ಲ ಎಂದು ಏಕ್ತಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ಕತ್ರಿನಾ ಹಾಗೂ ಪಿಗ್ಗಿ ಜೊತೆ ಮುಂದಿನ ದಿನಗಳಲ್ಲಿ ಆ ಸಿನಿಮಾ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಸ್ಟಾರ್ ನಟರ ಜೊತೆ ಕೆಲಸ ಮಾಡುವ ಇಂಗಿತ ಹೊಂದಿರುತ್ತಾರೆ. ಆದರೆ ನನಗೆ ಈ ಇಬ್ಬರು ಸ್ಮಾರ್ಟ್ ಮಹಿಳೆಯರ ಜೊತೆ ಸಿನಿಮಾ ಮಾಡುವ ಆಸೆ ಇದೆ ಎಂದು ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.