ETV Bharat / sitara

ಸುಶಾಂತ್​​ ಆತ್ಮಹತ್ಯೆ: ದೂರು ದಾಖಲಾಗ್ತಿದ್ದಂತೆ ನಟಿ ರಿಯಾ ಚಕ್ರವರ್ತಿ ಗಾಯಬ್? - ಸುಶಾಂತ್​​ ಆತ್ಮಹತ್ಯೆ

ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾಗಿರುವ ಬಾಲಿವುಡ್‌ನ ಯುವ​ ನಟ ಸುಶಾಂತ್​ ಸಿಂಗ್​ ರಜಪೂತ್​​ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ನಿನ್ನೆ ಪ್ರಕರಣ ದಾಖಲಾಗಿದ್ದು, ನಟನ ತಂದೆ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Rhea Chakraborty
Rhea Chakraborty
author img

By

Published : Jul 29, 2020, 5:50 PM IST

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಾಗಿದ್ದು, ತಮ್ಮ ಮಗನ ಸಾವಿಗೆ ಅವರೇ ಕಾರಣ ಎಂದು ಪೋಷಕರು ಆರೋಪಿಸಿದ್ದರು.

ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ತಂದೆಯಿಂದ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲು

ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ಕೇಸು ದಾಖಲಾದ ಒಂದೇ ದಿನದಲ್ಲಿ ರಿಯಾ ಅವರು ಮುಂಬೈ ಅಪಾರ್ಟ್​ಮೆಂಟ್​​ನಿಂದ ಕಾಣೆಯಾಗಿದ್ದಾರೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ. ಸುಶಾಂತ್​​ ಅವರ ಪ್ರಿಯತಮೆ​ ಎಂದು ಹೇಳಲಾಗುತ್ತಿರುವ ಈ ಬಾಲಿವುಡ್ ನಟಿ ಕಳೆದ ಕೆಲ ದಿನಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸುತ್ತಿದ್ದರು.

Rhea Chakraborty
ಸುಶಾಂತ್ ಮತ್ತು ರಿಯಾ (ಸಂಗ್ರಹ ಚಿತ್ರ)

ಇದಾದ ಬಳಿಕ ನಿನ್ನೆ ಸುಶಾಂತ್​ ಸಿಂಗ್​ ರಜಪೂತ್​ ತಂದೆ ನಟಿ ವಿರುದ್ಧ ದೂರು ದಾಖಲು ಮಾಡಿ, ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳಲು ರಿಯಾ ಪ್ರಚೋದನೆ ನೀಡಿದ್ದಾರೆ. ಜೊತೆಗೆ ಹಣಕಾಸು ವಿಚಾರವಾಗಿಯೂ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಬೆನ್ನಲ್ಲೇ ಪಾಟ್ನಾ ಪೊಲೀಸರು ಮುಂಬೈನಲ್ಲಿ ರಿಯಾ ವಾಸವಾಗಿದ್ದ ಅಪಾರ್ಟ್​ಮೆಂಟ್​ಗೆ ಆಗಮಿಸಿದ್ದಾರೆ. ಈ ವೇಳೆ ಆಕೆ ಮನೆಯಲ್ಲಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಈಗಾಗಲೇ ಪಾಟ್ನಾ ಹಾಗೂ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ರಿಯಾ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಕಳೆದ ಜೂನ್​ 14ರಂದು ಮುಂಬೈನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಮೃತದೇಹ ಪತ್ತೆಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.