ಮುಂಬೈ : ಮೀನಾಕ್ಷಿ ಸುಂದರೇಶ್ವರ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸನ್ಯಾ ಮಲ್ಹೋತ್ರಾ ಮತ್ತು ಅಭಿಮನ್ಯು ದಸ್ಸಾನಿ ಭಾಗವಹಿಸಿದ್ದರು.
ಚಿತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ ಸನ್ಯಾ, ಮೀನಾಕ್ಷಿ ಸುಂದರೇಶ್ವರ್ ಜೊತೆ ನೆಟ್‌ಫ್ಲಿಕ್ಸ್‌ಗೆ ಹಿಂತಿರುಗುವುದು ಪಗ್‌ಲೈಟ್ ಮತ್ತು ಲುಡೋ ನಂತರ ನನಗೆ ಮನೆಗೆ ಮರಳಿದಂತಾಗಿದೆ. ವಿವೇಕ್ ನಿರ್ದೇಶನದಲ್ಲಿ ಅಭಿಮನ್ಯು ಜೊತೆ ಕೆಲಸ ಮಾಡಿರುವುದು ಉತ್ತಮ ಅನುಭವ ನೀಡಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ಚಿತ್ರವು ಪ್ರೇಕ್ಷರಿಗೆ ಏನನ್ನಾದರೂ ನೀಡುತ್ತದೆ ಎಂದರು.
ಸನ್ಯಾ ಮತ್ತು ವಿವೇಕ್ ಜೊತೆ ತುಂಬಾ ಆನಂದದಿಂದ ಕೆಲಸ ಮಾಡಿದ್ದೇನೆ. ಈ ಚಿತ್ರದಿಂದ ನನಗೆ ಪರಿವರ್ತನೆಯ ಅನುಭವವಾಗಿದೆ. ಸಿನಿಮಾವು ಪ್ರೀತಿ, ಮದುವೆ, ನಂತರದ ಹೋರಾಟಗಳ ಬಗ್ಗೆ ಸುಂದರವಾಗಿ ಚಿತ್ರಿಸಲಾಗಿದೆ.
ಪ್ರತಿಯೊಬ್ಬರು ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಾರೆ ಎಂದು ಅಭಿಮನ್ಯು ದಸ್ಸಾನಿ ಹೇಳಿದರು. ವಿವೇಕ್ ಸೋನಿ ಚಿತ್ರವನ್ನು ನಿರ್ದೇಶಿಸಿದ್ದು, ಕರಣ್ ಜೋಹರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರ ನವೆಂಬರ್ 5ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಸಮಂತಾ..