ETV Bharat / sitara

ಮದುವೆ ಸಮಾರಂಭದಲ್ಲಿ ವಿಕ್ಕಿ ಕೌಶಲ್​ ಆಡಿದ ಮಾತಿಗೆ ಕಣ್ಣೀರು ಹಾಕಿದ ಕತ್ರಿನಾ ಕೈಫ್​.. ಯಾಕಂದ್ರೆ, - ವಿಕ್ಕಿ ಮಾತಿಗೆ ಭಾವುಕಳಾದ ಕತ್ರಿನಾ

ಮದುವೆ ಮುಗಿದ ಬಳಿಕ ವಿಕ್ಕಿ-ಕೈಫ್‌​ ಇದೀಗ ಮುಂಬೈನ ಮನೆಗೆ ಆಗಮಿಸಿದ್ದಾರೆ. ರಾಜಸ್ತಾನದಲ್ಲಿ ಅತಿ ಗೌಪ್ಯವಾಗಿ ನಡೆದ ಮದುವೆಗೆ ಅತ್ಯಾಪ್ತರನ್ನು ಬಿಟ್ಟರೆ ಯಾರಿಗೂ ಆಹ್ವಾನ ಇರದ ಕಾರಣ ಮುಂದಿನ ದಿನಗಳಲ್ಲಿ ಸಿನಿಮಾ ರಂಗದವರಿಗಾಗಿ ಆರತಕ್ಷತೆ ಕೂಟ ಆಯೋಜಿಸಲಿದ್ದಾರೆ ಎಂದು ತಿಳಿದು ಬಂದಿದೆ..

vicky kaushals
ಕತ್ರಿನಾ ಕೈಫ್​
author img

By

Published : Dec 12, 2021, 3:57 PM IST

ಹೈದರಾಬಾದ್ (ತೆಲಂಗಾಣ): ಕೆಲವು ದಿನಗಳಿಂದ ಬಾಲಿವುಡ್​ನಲ್ಲಿ ಭಾರೀ ಗುಲ್ಲೆಬ್ಬಿಸಿದ್ದ ವಿಷಯ ಅಂದ್ರೆ ಅದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್​ ಮದುವೆ. ಈ ವಿವಾಹ ಸಮಾರಂಭದಲ್ಲಿ ವರ ವಿಕ್ಕಿ ಕೌಶಲ್ ಆಡಿದ ಭಾವನಾತ್ಮಕ ಮಾತುಗಳಿಗೆ ವಧು ಕತ್ರಿನಾ ಕೈಫ್​ ಭಾವುಕರಾದರು ಎಂದು ತಿಳಿದು ಬಂದಿದೆ.

ಮದುವೆ ಸಮಾರಂಭದಲ್ಲಿ ಕತ್ರಿನಾಳ ಬಗ್ಗೆ ವಿಕ್ಕಿ ಕೌಶಲ್​ ಮಾತನಾಡುತ್ತಿರುವಾಗ ಕತ್ರಿನಾ ಕೈಫ್​ ತನ್ನ ಜೀವನದಲ್ಲಿ ಎಂಟ್ರಿ ಕೊಟ್ಟ ಬಳಿಕ ಏನೆಲ್ಲಾ ಬದಲಾವಣೆಯಾದವು, ಜೀವನ ಎಷ್ಟು ಸುಂದರ ಅನ್ನಿಸಿತು ಎಂದೆಲ್ಲಾ ಹೇಳಿಕೊಂಡಿದ್ದಾರೆ. ಈ ವೇಳೆ ವಿಕ್ಕಿ ಮಾತಿಗೆ ಕತ್ರಿನಾ ಕಣ್ಣಂಚು ಒದ್ದೆಯಾಯಿತಂತೆ. ಅಲ್ಲದೇ, ವಿಕ್ಕಿಯ ಮಾತುಗಳು ಅಲ್ಲಿದ್ದವರ ಗಮನ ಸೆಳೆಯಿತು ಎನ್ನಲಾಗಿದೆ.

ಇದಲ್ಲದೇ, ಮದುವೆ ಸಮಾರಂಭದ ಮೆಹಂದಿ ಕಾರ್ಯಕ್ರಮದಲ್ಲಿ ಚೆಲುವೆ ಕತ್ರಿನಾಗೆ, ವಿಕ್ಕಿ ಕೌಶಲ್​ ಬಾಲಿವುಡ್​ ಸಿನಿಮಾ ಹಾಡಿಗೆ ಹೆಜ್ಜೆ ಹಾಕುತ್ತಾ ಸಿನಿಮಾ ಮಾದರಿಯಲ್ಲೇ ಪ್ರಪೋಸ್​ ಮಾಡಿದ್ದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಇದನ್ನೂ ಓದಿ: 71ನೇ ವಸಂತಕ್ಕೆ ಕಾಲಿಟ್ಟ 'ಕಬಾಲಿ' : ಸೂಪರ್​ಸ್ಟಾರ್​ ಅಪರೂಪದ ಫೋಟೋಗಳನ್ನು ನೋಡಿ

ಮದುವೆ ಮುಗಿದ ಬಳಿಕ ವಿಕ್ಕಿ-ಕೈಫ್‌​ ಇದೀಗ ಮುಂಬೈನ ಮನೆಗೆ ಆಗಮಿಸಿದ್ದಾರೆ. ರಾಜಸ್ತಾನದಲ್ಲಿ ಅತಿ ಗೌಪ್ಯವಾಗಿ ನಡೆದ ಮದುವೆಗೆ ಅತ್ಯಾಪ್ತರನ್ನು ಬಿಟ್ಟರೆ ಯಾರಿಗೂ ಆಹ್ವಾನ ಇರದ ಕಾರಣ ಮುಂದಿನ ದಿನಗಳಲ್ಲಿ ಸಿನಿಮಾ ರಂಗದವರಿಗಾಗಿ ಆರತಕ್ಷತೆ ಕೂಟ ಆಯೋಜಿಸಲಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.