ETV Bharat / sitara

ಅಬ್ಬಬ್ಬಾ.. ವಿಕ್ಕಿ- ಕತ್ರಿನಾ ಮದುವೆ ಕಾರ್ಯ ಪ್ರಸಾರಕ್ಕಾಗಿ ಒಟಿಟಿಯಿಂದ ₹ 100 ಕೋಟಿ ಆಫರ್​..! - ವಿಕ್ಯಾಟ್​ ಮದುವೆ ಪ್ರಸಾರ ಹಕ್ಕು ಕೇಳಿದ ಒಟಿಟಿ

ಇಂದಿನಿಂದ ಡಿ. 9ರ ವರೆಗೆ ನಡೆಯುವ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್​ ಜೋಡಿ ಮದುವೆ ದೃಶ್ಯಗಳ ಪ್ರಸಾರ ಹಕ್ಕು ನೀಡಿದರೆ 100 ಕೋಟಿ ರೂಪಾಯಿ ನೀಡಲಾಗುವುದು ಎಂದು ಒಟಿಟಿಯೊಂದು ಆಫರ್​ ಮಾಡಿದೆ ಎಂದು ಮೂಲಗಳು ತಿಳಿಸಿವೆ.

vicky katrinas
ವಿಕ್ಕಿ- ಕತ್ರಿನಾ ಮದುವೆ
author img

By

Published : Dec 7, 2021, 4:35 PM IST

ಹೈದರಾಬಾದ್(ತೆಲಂಗಾಣ): ಬಾಲಿವುಡ್ ತಾರಾ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್​ರ ವಿವಾಹ ಕಾರ್ಯಕ್ರಮ ಪ್ರಸಾರಕ್ಕೆ ಕಡಿವಾಣ ಹಾಕಿರುವುದು ಜನರಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಈ ಮಧ್ಯೆ ಪ್ರಮುಖ ಒಟಿಟಿಯೊಂದು ವಿಕ್ಯಾಟ್​ ಮದುವೆ ಪ್ರಸಾರಕ್ಕಾಗಿ 100 ಕೋಟಿ ರೂಪಾಯಿ ನೀಡಲು ಮುಂದಾಗಿದೆ ಎಂದು ಗೊತ್ತಾಗಿದೆ.

ಇಂದಿನಿಂದ ಡಿಸೆಂಬರ್​ 9ರ ವರೆಗೆ ನಡೆಯುವ ಮದುವೆ ದೃಶ್ಯಗಳ ಪ್ರಸಾರ ಹಕ್ಕು ನೀಡಿದರೆ 100 ಕೋಟಿ ರೂಪಾಯಿ ನೀಡಲಾಗುವುದು ಎಂದು ಒಟಿಟಿಯೊಂದು ಮುಂದೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಗಳಲ್ಲಿ ವಿವಾಹ ಕಾರ್ಯಕ್ರಮದ ದೃಶ್ಯಗಳನ್ನು ವಾಹಿನಿಗಳಿಗೆ ಮಾರಾಟ ಮಾಡುವುದು ಪ್ರವೃತ್ತಿಯಾಗಿದೆ. ಇದೇ ರೀತಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ರ ವಿವಾಹದ ದೃಶ್ಯಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮವೊಂದು 100 ಕೋಟಿ ರೂಪಾಯಿ ಆಫರ್​ ನೀಡಿದೆ. ಇದಕ್ಕೆ ವಿಕ್ಯಾಟ್​ ಅನುಮತಿ ನೀಡುತ್ತಾರೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: KGF 2 ವಾಯ್ಸ್​ ಡಬ್ಬಿಂಗ್​ ಕಂಪ್ಲೀಟ್​.. ಸಂಜಯ್​ ದತ್​​ ಜೊತೆಗಿನ ಫೋಟೋ ಹಂಚಿಕೊಂಡ ಪ್ರಶಾಂತ್ ನೀಲ್

ಈ ಹಿಂದೆ ಬಾಲಿವುಡ್​ನ ಖ್ಯಾತ ಜೋಡಿಯಾದ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ವಿವಾಹದ ದೃಶ್ಯಗಳ ಮಾರಾಟಕ್ಕೆ ಇದೇ ರೀತಿಯ ಆಫರ್​ ಬಂದಿತ್ತು. ಆದರೆ, ಇದನ್ನು ದೀಪ್​​ವೀರ್​ ಜೋಡಿ ನಿರಾಕರಿಸಿತ್ತು.

ಇದಲ್ಲದೇ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಛೋಪ್ರಾ ಮದುವೆಯ ದೃಶ್ಯಗಳ ಪ್ರಸಾರ ಹಕ್ಕಿಗೆ ₹18 ಕೋಟಿ ನೀಡಲಾಗಿತ್ತು ಎಂಬುದರ ಬಗ್ಗೆ ವರದಿಯಾಗಿತ್ತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.