ETV Bharat / sitara

ವಿಕ್ಕಿ-ಕತ್ರಿನಾ ಕಲ್ಯಾಣೋತ್ಸವ.. ಮದುವೆ ಸಿದ್ಧತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ - ವಿಕ್ಕಿ-ಕತ್ರಿನಾ ವಿವಾಹ ಸಂಭ್ರಮ

ನಟಿ ಕತ್ರಿನಾ ಕೈಫ್​ ಮತ್ತು ನಟ ವಿಕ್ಕಿ ಕೌಶಲ್​ ಜೋಡಿಯ ವಿವಾಹ ಸಮಾರಂಭ ಆಯೋಜನೆಯಾಗಿರುವ ಬಾರ್ವಾರಾ ಕೋಟೆಯ ಪ್ರಸಿದ್ಧ ಸಿಕ್ಸ್​ ಸೆನ್ಸ್​ ಹೋಟೆಲ್​ನಲ್ಲಿ ಮದುವೆಯ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಮದುವೆ ಸಿದ್ಧತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

vicky katrina wedding video
ಮದುವೆ ಸಿದ್ಧತೆಯ ವಿಡಿಯೋ
author img

By

Published : Dec 6, 2021, 4:57 PM IST

Updated : Dec 6, 2021, 5:21 PM IST

ಸವಾಯಿ ಮಧೋಪುರ(ರಾಜಸ್ಥಾನ): ಬಾಲಿವುಡ್​ ತಾರಾ ಜೋಡಿಯಾದ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್ ಅವರ ಮದುವೆ ಸಮಾರಂಭದ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದ್ದು, ಈ ಜೋಡಿಯ ಮದುವೆ ವಿಚಾರ ಎಲ್ಲರ ಬಾಯಲ್ಲೂ ಗುನುಗುತ್ತಿದೆ.

ವಿಕ್ಕಿ-ಕತ್ರಿನಾ ಮದುವೆ ಸಿದ್ಧತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​

ವಿವಾಹ ಸಮಾರಂಭ ಆಯೋಜನೆಯಾಗಿರುವ ಇಲ್ಲಿನ ಬಾರ್ವಾರಾ ಕೋಟೆಯ ಪ್ರಸಿದ್ಧ ಸಿಕ್ಸ್​ ಸೆನ್ಸ್​ ಹೋಟೆಲ್​ನಲ್ಲಿ ಮದುವೆಯ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಮದುವೆ ಸಿದ್ಧತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಕಾಣುವಂತೆ ಮದುವೆಯ ಆಯೋಜಕರು ದೊಡ್ಡದಾದ 2 ಚೆಂಡುಗಳಿಗೆ ಬಂಗಾರದ ಬಣ್ಣದ ಹರಳುಗಳನ್ನು ಒಪ್ಪ ಮಾಡುತ್ತಿದ್ದಾರೆ. ಈ ಹರಳುಗಳನ್ನು ವಿದೇಶದಿಂದ ತರಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಇಂದು ಪಿಂಕ್​ ಸಿಟಿಗೆ ಬರುವ ವಿಕ್ಕಿ-ಕತ್ರಿನಾ ಜೋಡಿಗೆ ಭವ್ಯ ಸ್ವಾಗತ.. ನಾಳೆಯಿಂದ ವಿವಾಹ ಕಾರ್ಯಕ್ರಮಗಳು ಶುರು

ಅಲ್ಲದೇ, ಕತ್ರಿನಾ ಮತ್ತು ವಿಕ್ಕಿ ಕುಟುಂಬಸ್ಥರೊಂದಿಗೆ ಪಿಂಕ್​ ಸಿಟಿಯತ್ತ ಪಯಣ ಬೆಳೆಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂದು ರಾತ್ರಿಯಿಂದ ಮದುವೆ ಸಮಾರಂಭ ಕಳೆಗಟ್ಟಲಿದೆ.

Last Updated : Dec 6, 2021, 5:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.