ಮುಂಬೈ: ಉದಯೋನ್ಮುಖ ನಟ ವರ್ಧನ್ ಪುರಿ ಅವರ ಅಜ್ಜ, ನಟ ಅಮ್ರೀಶ್ ಪುರಿ ಅವರ ಜನ್ಮದಿನದಂದು ಅವರ ಕೆಲವು ಪ್ರೀತಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
1932 ಜೂನ್ 22ರಂದು ಜನಿಸಿದ ಅಮ್ರೀಶ್ ಪುರಿ ಬಾಲಿವುಡ್‌ನಲ್ಲಿ ಅನೇಕ ಸ್ಮರಣೀಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕಲಾತ್ಮಕ ಚಿತ್ರಗಳಾದ ನಿಶಾಂತ್, ಮಂಥನ್ ಮತ್ತು ಭೂಮಿಕಾದಲ್ಲಿ ನಟಿಸಿರುವ ಅವರು, ದಿಲ್ವಾಲೆ ದುಲ್ಹಾನಿಯಾ ಲೆ ಜಾಯೆಂಗೆ, ಕರಣ್ ಅರ್ಜುನ್, ನಾಯಕ್: ದಿ ರಿಯಲ್ ಹೀರೋ, ಮಿಸ್ಟರ್ ಇಂಡಿಯಾ ಮುಂತಾದ ವಾಣಿಜ್ಯ ಸಿನೆಮಾಗಳಲ್ಲೂ ಅಭಿನಯಿಸಿದ್ದಾರೆ.
ಸ್ಟೀವನ್ ಸ್ಪೀಲ್ಬರ್ಗ್ ಅವರ 'ಇಂಡಿಯನ್ ಜೋನ್ಸ್ ಅಂಡ್ ದಿ ಟೆಂಪಲ್ ಆಫ್ ಡೂಮ್' ಚಿತ್ರದಲ್ಲಿ ಮೋಲಾ ರಾಮ್ ಪಾತ್ರವನ್ನು ನಿರ್ವಹಿಸಿ, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಿತರಾಗಿದ್ದರು.
"ನಾನು ಮತ್ತು ಅವರು ಉತ್ತಮ ಸ್ನೇಹಿತರಾಗಿದ್ದೆವು. ಅವರು ನನ್ನೊಂದಿಗೆ ಇದ್ದಾಗ ನನಗೆ ಬೇರೆಯವರ ಅಗತ್ಯವಿರಲಿಲ್ಲ. ಅವರು ಎಲ್ಲ ಮಕ್ಕಳೊಂದಿಗೆ ತುಂಬಾ ಸೌಮ್ಯವಾಗಿರುತ್ತಿದ್ದರು. ನಾವು ಕ್ಲಾಸಿಕ್ ಸಿನೆಮಾ, ಡಿಸ್ಕವರಿ ಚಾನೆಲ್ ಮತ್ತು ವ್ಯಂಗ್ಯಚಿತ್ರಗಳ ಕುರಿತು ಚರ್ಚಿಸುತ್ತಿದ್ದೆವು. ಅವರು ನಾನು ಕಂಡ ಅತ್ಯಂತ ಪ್ರೀತಿಯ ವ್ಯಕ್ತಿ" ಎಂದು ವರ್ಧನ್ ಪುರಿ ನೆನಪು ಮಾಡಿಕೊಂಡಿದ್ದಾರೆ.
"ಅವರು ದಯೆ ಹಾಗೂ ಸಹಾನುಭೂತಿ ಹೊಂದಿದ್ದರು. ಅವರಿಗೆ ಅದ್ಭುತವಾದ ಹಾಸ್ಯಪ್ರಜ್ಞೆ ಇತ್ತು. ಅವರು ಕೋಪಗೊಂಡಿರುವುದನ್ನು ನಾನು ಕೇಳಿಲ್ಲ, ಕಂಡಿಲ್ಲ. ಅವರು ತುಂಬಾ ನೆನಪಾಗುತ್ತಾರೆ" ಎಂದು ವರ್ಧನ್ ಹೇಳಿದರು.
ಅಮ್ರೀಶ್ ಪುರಿ ಜನವರಿ 12, 2005ರಂದು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾಗಿದ್ದರು.