ETV Bharat / sitara

ಲೂಪ್​​ ಲಪೇಟ ಚಿತ್ರೀಕರಣಕ್ಕಾಗಿ ನನ್ನಿಂದ ಕಾಯಲು ಆಗ್ತಿಲ್ಲ: ತಹೀರ್​​​ ರಾಜ್​​ ಭಶಿನ್​​​ - ತಹೀರ್​​​ ರಾಜ್​​ ಭಶಿನ್​​​

ತಹೀರ್​​​ ರಾಜ್​​ ಭಶಿನ್​​​ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲೂಪ್​​ ಲಪೇಟ ಎಂದು ನಾಮಕರಣ ಮಾಡಿದ್ದು, ಈ ಸಿನಿಮಾ ಚಿತ್ರೀಕರಣಕ್ಕಾಗಿ ಕಾಯಲು ಸಾಧ್ಯವಿಲ್ಲ. ಅಷ್ಟು ಉತ್ಸುಕನಾಗಿದ್ದೇನೆ..

Tahir Raj Bhasin 'can't wait to get started on Looop Lapeta' with Taapsee Pannu
ಲೂಪ್​​ ಲಪೇಟ ಚಿತ್ರೀಕರಣಕ್ಕಾಗಿ ನನ್ನಿಂದ ಕಾಯಲು ಆಗ್ತಿಲ್ಲ : ತಹೀರ್​​​ ರಾಜ್​​ ಭಶಿನ್​​​
author img

By

Published : Oct 31, 2020, 4:47 PM IST

ಬಾಲಿವುಡ್​​​ ನಟ ತಹೀರ್​​​ ರಾಜ್​​ ಭಶಿನ್​​​ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಲೂಪ್​​ ಲಪೇಟ ಎಂದು ನಾಮಕರಣ ಮಾಡಿದ್ದು, ಈ ಸಿನಿಮಾ ಚಿತ್ರೀಕರಣಕ್ಕಾಗಿ ಕಾಯಲು ಸಾಧ್ಯವಿಲ್ಲ. ಅಷ್ಟು ಉತ್ಸುಕನಾಗಿದ್ದೇನೆ ಎಂದು ನಟ ತಹೀರ್​​​ ರಾಜ್​​ ಭಶಿನ್ ಹೇಳಿದ್ದಾರೆ.

ಸಿನಿಮಾ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂದು ಕಾಯುತ್ತಿದ್ದೇನೆ. ಇದೊಂದು ಅದ್ಭುತ ಕಥೆಯನ್ನು ಹೊಂದಿರುವ ಸಿನಿಮಾ. ಅಲ್ಲದೇ ಈ ಸಿನಿಮಾ ಕಥೆಗೂ ನನಗೂ ನಿಕಟ ಸಂಬಂಧವಿದೆ ಅನ್ನಿಸುತ್ತಿದೆ. ಚಿತ್ರದಲ್ಲಿ ನಾನೇ ಬದುಕುತ್ತಿದ್ದೇನೆ ಅನ್ನಿಸುತ್ತಿದೆ.

ಲಾಕ್​​ಡೌನ್​ ವೇಳೆಯಲ್ಲಿ ಸಿನಿಮಾ ಕಥೆಯಲ್ಲಿ ಬದಲಾವಣೆಯಾಗಿದ್ದು, ಆ ಬದಲಾವಣೆಗೆ ಸಂಬಂಧಿಸದಂತೆ ನಾನು ತಯಾರಿ ನಡೆಸಿದ್ದೇನೆ. ಇದು ನನಗೆ ಖುಷಿಯ ಜೊತೆ ಚಾಲೆಂಜಿಂಗ್​ ಆಗಿದೆ ಎಂದು ತಹೀರ್​​​ ರಾಜ್​​ ಭಶಿನ್​​​ ಹೇಳಿದ್ದಾರೆ. ಈ ಚಿತ್ರಕ್ಕೆ ಆಕಾಶ್​ ಭಾಟಿಯ ಆ್ಯಕ್ಷನ್​ ಕಟ್​​ ಹೇಳುತ್ತಿದ್ದಾರೆ.

ಲೂಪ್​​ ಲಪೇಟ ಚಿತ್ರದಲ್ಲಿ ತಹೀರ್​​​ ರಾಜ್​​ ಭಶಿನ್​​​ ಜೊತೆ ತಾಪ್ಸಿ ಪನ್ನು ಲೀಡ್​​ ರೋಲ್​ ಪ್ಲೇ ಮಾಡಲಿದ್ದಾರೆ. ತಾಪ್ಸಿ ಪನ್ನು ಬಗ್ಗೆ ಹೇಳಿರುವ ತಹೀರ್​​​ ರಾಜ್​​ ಭಶಿನ್​​​, ತಾಪ್ಸಿ ಪನ್ನು ಅದ್ಭುತ ಡ್ಯಾನ್ಸರ್​​. ನನ್ನ ಮತ್ತು ತಾಪ್ಸಿಯ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂದು ಹೇಳಿದ್ದಾರೆ.

ಬರೋಬ್ಬರಿ ಆರು ತಿಂಗಳು ಸ್ತಬ್ದವಾಗಿದ್ದ ಚಿತ್ರರಂಗ ಇದೀಗ ಮೆಲ್ಲಗೆ ಆರಂಭವಾಗಿರುವುದಕ್ಕೆ ತಹೀರ್​​​ ರಾಜ್​​ ಭಶಿನ್​​​ ಹರ್ಷ ವ್ಯಕ್ತಪಡಿಸಿದ್ದಾರೆ. ಲಾಕ್​​ಡೌನ್​ ಸಮಯ ಎಲ್ಲರಿಗೂ ತಮ್ಮನ್ನು ತಾವು ಮೌಲ್ಯಮಾಪನ ಮಾಡಿಕೊಳ್ಳಲು ಅವಕಾಶ ಕೊಟ್ಟಿದೆ.

ಇದ್ರಿಂದಾಗಿ ಹಲವು ಕೆಲಸಗಳ ಸುಧಾರಣೆ ಕಂಡಿದ್ದು, ಕಥೆಯಲ್ಲಿ ಕೆಲವೊಂದು ಬದಲಾವಣೆಗಳಾಗಿದೆ. ಈ ಲಾಕ್​​ಡೌನ್​​​ ಜನರಲ್ಲಿ ಆರೋಗ್ಯ ಮತ್ತು ಸುರಕ್ಷತೆ ಬಗ್ಗೆ ಹೆಚ್ಚು ಒತ್ತು ನೀಡುವುದನ್ನು ತಿಳಿಸಿಕೊಟ್ಟಿದೆ ಎಂದು ತಹೀರ್​​​ ರಾಜ್​​ ಭಶಿನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.