ಹೈದರಾಬಾದ್ (ತೆಲಂಗಾಣ) : ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದು, ಅದಕ್ಕೆ ಪೂರ್ವ ತಯಾರಿ ನಡೆದಿದೆ.
ಸ್ಟಾರ್ ನಟರ ಪುತ್ರಿಯಾಗಿರುವ ಸುಹಾನಾ ಖ್ಯಾತ ನಿರ್ಮಾಪಕರೊಬ್ಬರ ಚಿತ್ರದೊಂದಿಗೆ ಬಾಲಿವುಡ್ಗೆ ಪ್ರವೇಶ ಮಾಡಲಿದ್ದಾರೆಂಬ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಿದೆ. ಇತ್ತೀಚೆಗೆ ಖಾನ್ ಪುತ್ರಿ ನಿರ್ಮಾಪಕ ಜೋಯಾ ಅಖ್ತರ್ ಅವರ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿಂದ ಹೊರ ಬರುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಫೋಟೋ ಸದ್ಯದಲ್ಲೇ ಚಿತ್ರೀಕರಣಕ್ಕೆ ಧುಮುಕಲಿದ್ದಾರೆ ಎಂಬುದನ್ನು ಖಚಿತಪಡಿಸುತ್ತಿದೆ. ಇದು ಅಂತಾರಾಷ್ಟ್ರೀಯ ಕಾಮಿಕ್ ಪುಸ್ತಕ ಆರ್ಚಿಯ ರೂಪಾಂತರ ಕಥೆಯಾಗಿದ್ದು, ಭಾರತೀಯ ಆವೃತ್ತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ನಟಿಯಾಗಲಿ ಅಥವಾ ನಿರ್ಮಾಪಕರಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ, ಅವರ ಭೇಟಿ ಮಾತ್ರ ಖಚಿತಪಡಿಸಿದೆ.
ಫೆಬ್ರವರಿ 4ರಂದು ಸುಹಾನಾ ಮುಂಬೈನಲ್ಲಿರುವ ನಿರ್ಮಾಪಕ ಜೋಯಾ ಅಖ್ತರ್ ಅವರ ಕಚೇರಿಯಿಂದ ಹೊರ ಹೋಗುತ್ತಿವುದನ್ನು ಗಮನಸಿದರೆ ಅವರು ಸಿನಿಮಾದಲ್ಲಿ ನಟಿಸುವುದು ಖಚಿತ ಎನ್ನಲಾಗುತ್ತಿದೆ. ಓರ್ವ ಹುಡುಗನ ಜೊತೆ ಕಚೇರಿಯಿಂದ ಹೆಜ್ಜೆ ಹಾಕುತ್ತಿರುವ ಫೋಟೋ ಜಾಲತಾಣದಲ್ಲಿ ಈಗ ಅನುಮಾನ ಹುಟ್ಟು ಹಾಕಿದೆ.
ಮಾಹಿತಿ ಪ್ರಕಾರ ನಾಯಕಿ ಪಾತ್ರಕ್ಕೆ ಸುಹಾನಾ ಫೈನಲ್ ಆಗಿದ್ದು, ನಾಯಕನ ಪಾತ್ರಕ್ಕಾಗಿ ನಿರ್ಮಾಕರು ಹುಡುಕಾಟದಲ್ಲಿದ್ದಾರೆ. ಕೆಲವು ನಾಯಕರ ಹೆಸರನ್ನು ಶಾರ್ಟ್‌ಲಿಸ್ಟ್ ಸಹ ಮಾಡಲಾಗಿದ್ದು, ಶೀಘ್ರದಲ್ಲೇ ಫೈನಲ್ ಮಾಡಲಿದ್ದಾರಂತೆ. ಸುಹಾನಾ ಅಷ್ಟೇ ಅಲ್ಲದೇ ಜೋಯಾ ಅವರು ಇನ್ನೂ ಇಬ್ಬರು ಸ್ಟಾರ್ ಪುತ್ರರನ್ನು ಬಾಲಿವುಡ್ಗೆ ಪರಿಚಯ ಮಾಡಲಿದ್ದಾರಂತೆ.
ಆರ್ಚಿ ಕಾಮಿಕ್ಸ್ ಒಂದು ಆ್ಯಕ್ಷನ್ ಮತ್ತು ಥ್ರಿಲ್ಲಿಂಗ್ ಕಥೆಯಾಗಿದೆ. ಜೋಯಾ ಮತ್ತು ರೀಮಾ ಕಾಗ್ತಿ ಅವರ ಬ್ಯಾನರ್ ಟೈಗರ್ ಬೇಬಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಲಿದೆ. ರೀಮಾ ಕೂಡ ಈ ಹಿಂದೆ ಈ ಬಗ್ಗೆ ಹೇಳಿದ್ದರು. ಈಗ ಅಂದುಕೊಂಡಂತೆ ಸದ್ದಿಲ್ಲದೇ ಚಿತ್ರೀಕರಣದ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮಗನಿಗೆ ಬೀಳ್ಕೊಡುಗೆ ನೀಡಲು ಏರ್ಪೋರ್ಟ್ಗೆ ಬಂದ ಮಲೈಕಾ.. ಮಾಜಿ ಪತಿ ತಬ್ಬಿಕೊಂಡ ನಟಿ
ಬ್ರ್ಯಾಂಡೆಡ್ ಬದುಕು : ನಿರ್ಮಾಪಕ ಜೋಯಾ ಅಖ್ತರ್ ಕಚೇರಿಗೆ ಆಗಮಿಸಿದ್ದ ಸುಹಾನಾ ಖಾನ್, ನೋಡಲು ಸಿಂಪಲ್ ಆಗಿ ಕಾಣಿಸಿದ್ದರು. ಆದರೆ, ಅವರು ಧರಿಸಿದ್ದ ಬ್ರ್ಯಾಂಡೆಡ್ ಬಟ್ಟೆ, ಶೂಗಳು ದುಬಾರಿ ಬೆಲೆಯುಳ್ಳದ್ದಾಗಿದ್ದವು. ಅವರ ಬ್ರ್ಯಾಂಡೆಡ್ ಬದುಕಿನ ಬಗ್ಗೆಯೂ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.