ಹೈದರಾಬಾದ್: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ತಮ್ಮ ಮಕ್ಕಳಾದ ಅಬ್ರಾಮ್ ಖಾನ್ ಹಾಗೂ ಆರ್ಯನ್ ಖಾನ್ ಫೋಟೋವನ್ನ ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಸಹೋದರರು ಗ್ಯಾಜೆಟ್ನಲ್ಲಿ ಗೇಮ್ ಆಡುತ್ತಿದ್ದ ವೇಳೆ ಗೌರಿ ಫೋಟೋ ತೆಗೆದು ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಬಾಯ್ಸ್ ನೈಟ್ ಔಟ್ ಅಂತ ಬರೆದುಕೊಂಡಿದ್ದಾರೆ. ಈ ಕ್ಯೂಟ್ ಫೋಟೋಗೆ ಬಾಲಿವುಡ್ ಸೆಲೆಬ್ರಿಟಿಗಳು ರಿಯಾಕ್ಟ್ ಮಾಡುತ್ತಿದ್ದು, ಸ್ವತಃ ಶಾರುಖ್ ಖಾನ್ ಸಹ ಫೋಟೋಗೆ ಕಮೆಂಟ್ ಮಾಡಿದ್ದಾರೆ.
ಗೇಮ್ಗಳು ಜೊತೆಗಿರುವಂತೆ ಮಾಡುವ ಹೊಸ ಫೋರ್ಸ್ ಆಗಿದೆ. ಜೊತೆಗೆ ಆಟವಾಡುತ್ತಿರುವ ಸಹೋದರರು ಮುಂದೆಯೂ ಜೊತೆಗಿರುತ್ತಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
- " class="align-text-top noRightClick twitterSection" data="
">
ಇವರಲ್ಲದೇ ಬಾಲಿವುಟ್ ಸ್ಟಾರ್ಗಳಾದ ಫರ್ಹಾನ್ ಅಕ್ತರ್, ಅಮೃತಾ ಅರೋರಾ, ಭಾವನಾ ಪಾಂಡೆ ಈ ಪೋಟೋಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ನಲ್ಲಿ ಶಾರುಖ್ ಮಗ ಆರ್ಯನ್ ಸಿನಿಮಾ ಎಂಟ್ರಿ ಮಾಡಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಜೊತೆಗೆ ‘ಕಬಿ ಖುಷಿ ಕಬಿ ಘಮ್’ ಚಿತ್ರದಲ್ಲಿ ಬಾಲನಟನಾಗಿ ಹಾಗೂ ಹಾಲಿವುಡ್ನ ‘ದಿ ಲಯನ್ ಕಿಂಗ್’ ಸಿನಿಮಾದ ‘ಸಿಂಬಾ’ ಪಾತ್ರಕ್ಕೆ ಹಿಂದಿ ವಾಯ್ಸ್ ಡಬ್ ಸಹ ಮಾಡಿದ್ದಾರೆ. ಈ ನಡುವೆ ಆರ್ಯನ್ ಬಾಲಿವುಡ್ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಕಳೆದೆರಡು ವರ್ಷದಿಂದ ಈ ಸುದ್ದಿ ಇದ್ದು, ಆರ್ಯನ್ ಬಾಲಿವುಡ್ ಎಂಟ್ರಿ ತಡವಾಗುತ್ತಲೇ ಇದೆ. ಆದರೆ ಇದೀಗ ಮತ್ತೆ ಸುದ್ದಿಯಾಗುತ್ತಿದ್ದು, ಸದ್ಯದಲ್ಲೇ ಶಾರುಖ್ ಶುಭ ಸುದ್ದಿ ನೀಡಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: 51ನೇ ಜನ್ಮದಿನಕ್ಕೆ ಕಾಲಿಟ್ಟ ‘ರಣಧೀರೆ’ ಖುಷ್ಬೂ.. ಈಗಲೂ ಅವರು ಸುಂದರ.. ಅತೀ ಸುಂದರ...!