ವಾರಣಾಸಿ: ನಕ್ಸಲ್ ಪೀಡಿತ ಗ್ರಾಮಗಳ ಬಾಲಕಿಯರಿಗೆ ಸೈಕಲ್ ವಿತರಿಸಲು ನೆರವಾದ ವಾರಣಾಸಿಯ ಹೋಪ್ ವೆಲ್ಫೇರ್ ಟ್ರಸ್ಟ್ ಸದಸ್ಯರಿಗೆ ನಟ ಸೋನು ಸೂದ್ ಧನ್ಯವಾದ ಹೇಳಿದ್ದಾರೆ.
ವಾರಣಾಸಿ ಮಿರ್ಜಾಪುರದ ಅಹ್ರಾರಾ ಪೊಲೀಸ್ ಠಾಣೆಯ ನಕ್ಸಲ್ ಪೀಡಿತ ಗ್ರಾಮಗಳಾದ ಸರ್ದಾ, ಬಾರ್ಹಿ ಮತ್ತು ಗೋಬರ್ಧ ಗ್ರಾಮಗಳ ಬಾಲಕಿಯರು ಶಾಲೆಗೆ ತೆರಳಲು 10 ರಿಂದ 15 ಕಿ.ಮೀ ದೂರ ಕ್ರಮಿಸಬೇಕಾಗಿತ್ತು. ವೆಲ್ಫೇರ್ ಟ್ರಸ್ಟ್ ಸದಸ್ಯ ಸಂತೋಷ್ ಚೌಹಾಣ್ ಟ್ವೀಟ್ ಮಾಡಿ ಮಾಡಿ ಬಾಲಕಿಯರ ಸಮಸ್ಯೆಯ ಬಗ್ಗೆ ನಟ ಸೋನು ಸೂದ್ ಗಮನಕ್ಕೆ ತಂದಿದ್ದರು. ಬಾಲಕಿಯರಿಗೆ ಸೈಕಲ್ ವಿತರಿಸುವ ಭರವಸೆ ನೀಡಿದ್ದ ಸೋನು, ನಿತಿ ಗೋಯಲ್ ಎಂಬವರ ಜೊತೆಗೂಡಿ ವೆಲ್ಫೇರ್ ಟ್ರಸ್ಟ್ ಮೂಲಕ 25 ಬಾಲಕಿಯರಿಗೆ ಸೈಕಲ್ ವಿತರಿಸಿದ್ದಾರೆ. ಸೈಕಲ್ ಪಡೆದ ಬಾಲಕಿಯರ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟ ಸೂದ್ಗೆ ಸೈಕಲ್ ವಿತರಿಸಲು ನೆರವಾದ ಹೋಪ್ ವೆಲ್ಫೇರ್ ಟ್ರಸ್ಟ್ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ.
ವಾರಣಾಸಿಯಿಂದ ಸುಮಾರು 70-80 ಕಿ.ಮೀ ದೂಡ ಕ್ರಮಿಸಿ ಬಾಲಕಿಯರಿಗೆ ಸೈಕಲ್ ವಿತರಿಸಲು ನೆರವಾದ ಹೋಪ್ ವೆಲ್ಫೇರ್ ಟ್ರಸ್ಟ್ನ ಸದಸ್ಯರಾದ ದಿವ್ಯಾಂಶು ಮತ್ತು ರವಿ ಮಿಶ್ರಾ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮಂತಹ ಯೋಧರು ನಮ್ಮ ಕುಟುಂಬದ ಭಾಗವಾಗಿದ್ದಕ್ಕೆ ಧನ್ಯವಾದಗಳು. ಹಳ್ಳಿ ಪ್ರದೇಶಗಳಿಗೆ ನೀವು ಯಾವುದೇ ರೀತಿಯ ಸಹಾಯ ಬೇಕಾದರು ಕೇಳಿ, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಸೋನು ಸೂದ್ ವಿಡಿಯೋದಲ್ಲಿ ಹೇಳಿದ್ದಾರೆ.