ಮುಂಬೈ: ನಮ್ಮ ಹೊಸ ಕಾಲದ ಸಿನಿಮಾ ಕಥೆಗಳಲ್ಲಿ ಮಹಿಳೆಯರು ಅವಿಭಾಜ್ಯ ಅಂಗವಾಗಿದ್ದು, ಹಿಂದಿ ಚಿತ್ರರಂಗದ ವಿಕಾಸಕ್ಕೆ ಮಹಿಳೆಯರೇ ಕಾರಣ ಎಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮಹಿಳೆಯರನ್ನು ಹಾಡಿ ಹೊಗಳಿದ್ದಾರೆ.
ನಾವು ಪರದೆ ಮೇಲೆ ಕಥೆಗಳನ್ನು ಹೇಳುವ ರೀತಿಯಲ್ಲಿ ನಾವು ಸಂಪೂರ್ಣ ವಿಕಸನವನ್ನು ನೋಡುತ್ತಿದ್ದೇವೆ. ಮಹಿಳೆಯರು ಈ ಪ್ರಕ್ರಿಯೆಯಲ್ಲಿ ನಿರಂತರ ಭಾಗಿಯಾಗಿದ್ದಾರೆ. ನಾನು ನಮ್ಮ ಹಿಂದಿ ಚಿತ್ರರಂಗದ ಸಿನಿಮಾವನ್ನು ಮೆಚ್ಚಿಕೊಂಡು ಬೆಳೆದಿದ್ದೇನೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಚಿತ್ರರಂಗದ ಬೆಳವಣಿಗೆ ಪಥವನ್ನು ಹೇಗೆ ರೂಪಿಸಿದ್ದಾರೆ ಎಂಬುದನ್ನು ವೈಯಕ್ತಿಕವಾಗಿ ಗಮನಿಸಿದ್ದೇನೆ. ಅವರು ಕೇವಲ ಸಿನಿಮಾ ಮಾತ್ರವಲ್ಲದೇ ರಾಷ್ಟ್ರದ ಒಟ್ಟಾರೆ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಕೊಂಡಾಡಿದ್ದಾರೆ.
ಶ್ರದ್ಧಾ ಶೀಘ್ರದಲ್ಲೇ ಝೀ ಸಿನಿಮಾ ಮತ್ತು ಝೀ ಟಿವಿಯ 52ನೇ ಆವೃತ್ತಿಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ಪ್ರಸಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರದ್ಧಾ ಶಕ್ತಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಂಬಂಧ ಭಾರತೀಯ ಮಹಿಳೆಯರ ಶಕ್ತಿ ಮತ್ತು ಸಾಧನೆ ಹಾಗೂ ಸಿನಿಮಾ ಜಗತ್ತಿನಲ್ಲಿ ಅವರ ಪ್ರಾಮುಖ್ಯತೆ ಸೇರಿದಂತೆ ಮಹಿಳೆಯರ ಒಟ್ಟಾರೆ ವಿಕಾಸದ ಕುರಿತಂತೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಐಎಫ್‌ಎಫ್‌ಐನ 52ನೇ ಆವೃತ್ತಿಯನ್ನು ಜೀ ಸಿನಿಮಾ ಮತ್ತು ಜೀ ಟಿವಿಯಲ್ಲಿ ಜನವರಿ 2 ರಂದು ರಾತ್ರಿ 8 ಗಂಟೆಗೆ ಏಕಕಾಲದಲ್ಲಿ ಪ್ರಸಾರ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: ಬಾಯ್ ಹೇಳುವ ಮುನ್ನ ಪ್ರೀತಿಯ ಅಪ್ಪುಗೆ: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ