ಹೈದರಾಬಾದ್: ಮಾಲ್ಡೀವ್ಸ್ನ ಸಮುದ್ರದಲ್ಲಿ ನಟಿ ಶ್ರದ್ಧಾ ಕಪೂರ್ ಸ್ಕೂಬಾ ಡೈವಿಂಗ್ ಮಾಡುವ ವಿಡಿಯೋವೊಂದನ್ನು ಭಾನುವಾರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಶ್ರದ್ಧಾ, ಇದಕ್ಕೆ "ಲೈಫ್ ಅಂಡರ್ ವಾಟರ್" ಎಂದು ಶೀರ್ಷಿಕೆ ನೀಡಿದ್ದಾರೆ. ಶ್ರದ್ಧಾ ತಮ್ಮ ಪೋಷಕರಾದ ಶಕ್ತಿ ಕಪೂರ್ ಮತ್ತು ಶಿವಂಗಿ ಕೊಲ್ಹಾಪುರೆ ಅವರೊಂದಿಗೆ ಮಾಲ್ಡೀವ್ಸ್ಗೆ ಹೋಗಿದ್ದರು. ಅವರ ಸೋದರ ಸಂಬಂಧಿ ಪ್ರಿಯಾಂಕ್ ಶರ್ಮಾ ಅವರ ಮದುವೆ ಇರುವ ಹಿನ್ನೆಲೆ ಅಲ್ಲಿಗೆ ಹೋಗಿದ್ದರು.
ಓದಿ:'ನಾವು ಚುಂಬಿಸಬಹುದೇ?' ಎಂದು ಕೇಳಿದ ಫ್ಯಾನ್ಸ್ಗೆ ಜಾಹ್ನವಿ ಕಪೂರ್ ಏನಂದ್ರು ಗೊತ್ತಾ?
ಅಲ್ಲಿ ತೆಗೆದ ಸೂರ್ಯೋದಯದ ಫೋಟೋದಿಂದ ಹಿಡಿದು ಅವರ ಎಲ್ಲಾ ಉತ್ತಮವಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ದೆಹಲಿಯಲ್ಲಿ ರಣಬೀರ್ ಕಪೂರ್ ನಟಿಸಿದ ನಿರ್ದೇಶಕ ಲವ್ ರಂಜನ್ ಅವರ ಹೆಸರಿಲ್ಲದ ಚಿತ್ರದ ಚಿತ್ರೀಕರಣದ ಒಂದು ಭಾಗವನ್ನು ಶ್ರದ್ಧಾ ಮುಗಿಸಿದ್ದಾರೆ ಮತ್ತು ಅವರ ಮುಂದಿನ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.