ETV Bharat / sitara

'ಸುಖಿ' ಚಿತ್ರೀಕರಣ ಆರಂಭಿಸಿದ ಶಿಲ್ಪಾ ಶೆಟ್ಟಿ.. 'ಆಲ್ ದಿ ಬೆಸ್ಟ್ ಮುಂಕಿ' ಎಂದ ತಂಗಿ ಶಮಿತಾ - 'ಸುಖಿ' ಚಿತ್ರೀಕರಣ ಆರಂಭಿಸಿದ ಶಿಲ್ಪಾ ಶೆಟ್ಟಿ

'ಧಡಕನ್' ಖ್ಯಾತಿಯ ಬಳುಕುವ ಗೊಂಬೆ ಶಿಲ್ಪಾ ಶೆಟ್ಟಿ ತಮ್ಮ ಮುಂಬರುವ ಮಹಿಳಾ ಪ್ರಧಾನ ಚಿತ್ರ 'ಸುಖಿ' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ಸುಖಿ
ಸುಖಿ
author img

By

Published : Mar 4, 2022, 12:03 PM IST

ನಟಿ ಶಿಲ್ಪಾ ಶೆಟ್ಟಿ ಅವರು ಮುಂಬರುವ ಮಹಿಳಾ ಪ್ರಧಾನ ಚಿತ್ರ 'ಸುಖಿ' ಚಿತ್ರದ ಚಿತ್ರೀಕರಣವನ್ನು ಕಿಕ್‌ಸ್ಟಾರ್ಟ್ ಮಾಡಿದ್ದಾರೆ. ತಮ್ಮನ್ನು ತಾವು 'ಸುಖಿ' ಎಂದು ಹೇಳುತ್ತಾ ಶಿಲ್ಪಾ ಇನ್‌ಸ್ಟಾಗ್ರಾಮ್‌ನಲ್ಲಿ ಬೂಮರಾಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ,

ಈ ವಿಡಿಯೋದಲ್ಲಿ ಅವರು ಕ್ಲಾಪ್‌ಬೋರ್ಡ್ ಹಿಡಿದುಕೊಂಡು ಚಿತ್ರದ ಮೊದಲ ಶಾಟ್ ಅನ್ನು ಪೂರ್ಣಗೊಳಿಸಿದ್ದಾರೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸುತ್ತಾರೆ. "ಹೊಸ ಚಿತ್ರ, ಹೊಸ ಪಾತ್ರ, ಹೊಸ ಪ್ರಯಾಣ: ಸುಖಿ" ಎಂದು ಬರೆದುಕೊಂಡಿದ್ದಾರೆ.

ಇದನ್ನು ವೀಕ್ಷಿಸಿದ ಅಭಿಮಾನಿಗಳು 'ಧಡಕನ್' ಖ್ಯಾತಿಯ ಬಳುಕುವ ಗೊಂಬೆ ಶಿಲ್ಪಾ ಶೆಟ್ಟಿಗೆ ಶುಭ ಹಾರೈಸಿದರು. ಅವರ ತಂಗಿ ಶಮಿತಾ ಶೆಟ್ಟಿ ಕೂಡ ವಿಶ್​ ಮಾಡಿದ್ದು, 'ಆಲ್ ದಿ ಬೆಸ್ಟ್ ಮುಂಕಿ' ಎಂದು ಕಮೆಂಟ್​ ಮಾಡಿದ್ದಾರೆ. ಹಿರಿಯ ನಟ ಅನಿಲ್ ಕಪೂರ್ 'ಆಲ್ ದಿ ಬೆಸ್ಟ್ ಮೈ ಫ್ರೆಂಡ್' ಎಂದು ಬರೆದಿದ್ದಾರೆ.

ಇದನ್ನೂ ಓದಿ: ನಟಿ ಸಂಜನಾಗೆ ತಡರಾತ್ರಿ ಅಶ್ಲೀಲ ಮೆಸೇಜ್ ಕಳಿಸಿದ ಆರೋಪ; ಫ್ಯಾಷನ್ ಡಿಸೈನರ್‌ ಪುತ್ರ ಅರೆಸ್ಟ್​

ಈ ಹಿಂದೆ 'ಧೂಮ್ 3' ಮತ್ತು 'ಜಬ್ ಹ್ಯಾರಿ ಮೆಟ್ ಸೇಜಲ್' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸೋನಾಲ್ ಜೋಶಿ ಅವರು 'ಸುಖಿ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. 2007ರಲ್ಲಿ ತೆರೆಕಂಡ 'ಅಪ್ನೆ' ಸಿನಿಮಾ ಬಳಿಕ ದೀರ್ಘಕಾಲ ವಿರಾಮ ನೀಡಿ ಶಿಲ್ಪಾ ಶೆಟ್ಟಿ 2021 ರ 'ಹಂಗಾಮಾ 2' ರಲ್ಲಿ ಕಾಣಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.