ETV Bharat / sitara

'ಚುರಾ ಕೆ ದಿಲ್​ ಮೇರಾ'... ಕರಾವಳಿ ಬೆಡಗಿಗೆ 46ರ ಸಂಭ್ರಮ - ಈಗಲೂ ಅದೇ ಬ್ಯೂಟಿ, ಅದೇ ಫಿಟ್ನೆಸ್​​! - ಕರಾವಳಿ ಬೆಡಗಿಗೆ 46ರ ಸಂಭ್ರಮ

'ಚುರಾ ಕೆ ದಿಲ್​ ಮೇರಾ' ಹಾಡಿನಿಂದ ಮೋಡಿ ಮಾಡಿದ್ದ 'ಧಡಕನ್' ಚೆಲುವೆ ಶಿಲ್ಪಾ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

author img

By

Published : Jun 8, 2021, 11:10 AM IST

ಹೈದರಾಬಾದ್​: ಮಂಗಳೂರು ಮೂಲದ ಬಾಲಿವುಡ್​ ನಟಿ, ನಿರ್ಮಾಪಕಿ ಶಿಲ್ಪಾ ಶೆಟ್ಟಿ ಇಂದು ತಮ್ಮ 46ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿಗೂ ಅದೇ ಬ್ಯೂಟಿ, ಅದೇ ಫಿಟ್ನೆಸ್​ ಕಾಪಾಡಿಕೊಂಡು ಸದಾ ಖುಷ್​ ಆಗಿರುತ್ತಾರೆ ಬಳುಕುವ ಬಳ್ಳಿ.

Shilpa shetty
ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ

1975 ಜೂನ್ 8ರಂದು ಮಂಗಳೂರಿನ ಸುರೇಂದ್ರ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ದಂಪತಿಗೆ ಶಿಲ್ಪಾ ಶೆಟ್ಟಿ ಜನಿಸಿದರು. ಮುಂಬೈನಲ್ಲಿ ಔಷಧ ಕಂಪನಿಯೊಂದನ್ನು ಶಿಲ್ಪಾ ಪೋಷಕರು ನಡೆಸುತ್ತಿದ್ದರಿಂದ ಇವರೂ ಮುಂಬೈನಲ್ಲೇ ವಿದ್ಯಾಭ್ಯಾಸ ನಡೆಸಿ, ಮಾಡೆಲಿಂಗ್​​​ ಲೋಕಕ್ಕೆ ಹೆಜ್ಜೆ ಹಾಕಿದರು.

Shilpa shetty
ಇಂದಿಗೂ ಅದೇ ಫಿಟ್ನೆಸ್​
Shilpa shetty
ಸೀರೆಯೊಂದಿಗೆ ಮಿಂಚುವ ನಟಿ

1993ರಲ್ಲಿ ಶಾರುಕ್​ ಖಾನ್​ ನಟನೆಯ 'ಬಾಜಿಗರ್' ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ನಟಿ, ಧಡಕನ್, ಮೈ ಕಿಲಾಡಿ ತು ಅನಾರಿ, ರಿಶ್ತೆ, ಫಿರ್​ ಮಿಲೇಂಗೆನಂತಹ ಹಿಟ್​ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Shilpa shetty
ಎವರ್​ ಗ್ರೀನ್​ ಬ್ಯೂಟಿ

ಇವರ 'ಚುರಾ ಕೆ ದಿಲ್​ ಮೇರಾ' ಹಾಡಿಗೆ ಹುಡುಗರು ಫಿದಾ ಆಗಿದ್ದರು. ಹಿಂದಿ ಮಾತ್ರವಲ್ಲ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲೂ ಇವರು ಬಣ್ಣ ಹಚ್ಚಿದ್ದಾರೆ.

Shilpa shetty
ಪತಿ ರಾಜ್​ಕುಂದ್ರಾರೊಂದಿಗೆ ಶಿಲ್ಪಾ

ಕನ್ನಡದ 'ಪ್ರೀತ್ಸೋದ್​ ತಪ್ಪಾ' ಹಾಗೂ 'ಒಂದಾಗೋಣ ಬಾ' ಸಿನಿಮಾಗಳಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಜೊತೆ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು. ರಿಯಲ್ ಸ್ಟಾರ್​ ಉಪೇಂದ್ರ ಅವರೊಂದಿಗೆ 'ಆಟೋ ಶಂಕರ್' ಚಿತ್ರದಲ್ಲೂ ನಟಿಸಿದ್ದಾರೆ.

Shilpa shetty
ಪ್ರತಿನಿತ್ಯ ಯೋಗ ಮಾಡುವ ಶಿಲ್ಪಾ
Shilpa shetty
2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ

2009ರಲ್ಲಿ ಉದ್ಯಮಿ ರಾಜ್​ಕುಂದ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ​ಕುಂದ್ರಾ- ಶೆಟ್ಟಿ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Shilpa shetty
ಚೆಂದುಳ್ಳಿ ಚೆಲುವೆ ಶಿಲ್ಪಾ

ಯೋಗ ಮತ್ತು ಡಯೆಟ್​ ಇವರ ಯೌವನದ ರಹಸ್ಯವಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಕುಟುಂಬದೊಂದಿಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

Shilpa shetty
ಕುಟುಂಬದೊಂದಿಗ ಹೋಳಿ ಹಬ್ಬ ಆಚರಣೆ

ಝಲಕ್​ ದಿಕಲಾಜಾ, ನಚ್​ ಬಲಿಯೇ ಎಂಬ ಡ್ಯಾನ್ಸ್​ ಶೋಗಳಿಗೆ ತೀರ್ಪುಗಾರ್ತಿಯಾಗಿದ್ದ ಶಿಲ್ಪಾ ಇದೀಗ ಸೂಪರ್ ಡ್ಯಾನ್ಸರ್​ ಶೋಗೆ ಜಡ್ಜ್​ ಆಗಿದ್ದಾರೆ.

Shilpa shetty
ತಂಗಿ ಶಮಿತಾ ಶೆಟ್ಟಿ ಜೊತೆ ಶಿಲ್ಪಾ

ಇತ್ತೀಚೆಗಷ್ಟೇ ಇವರ ಕುಟುಂಬ ವೈರಸ್​ ಸುಳಿಯಲ್ಲಿ ಸಿಲುಕಿತ್ತು. ಪತಿ, ಮಗ ಮತ್ತು ಒಂದು ವರ್ಷದ ಮಗಳು, ಪೋಷಕರಿಗೆ ಕೊರೊನಾ ಸೋಂಕು ತಗುಲಿತ್ತು.

Shilpa shetty
ತಂದೆ ಸುರೇಂದ್ರ ಶೆಟ್ಟಿಯೊಂದಿಗೆ ನಟಿ
Shilpa shetty
ತಾಯಿ ಸುನಂದಾ ಶೆಟ್ಟಿ ಜೊತೆ ಶಿಲ್ಪಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.