'ಕಿತಾಬೆ ಬಹುತ್ ಸಿ' ಎಂದು ಕುಣಿಯುತ್ತಾ 'ಬಾಜಿಗರ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ, ಬಳುಕುವ ಸೊಂಟದ ಸುಂದರಿ ಎಂದೇ ಹೆಸರಾದ ಮಂಗಳೂರಿನ ಚೆಲುವೆ ಶಿಲ್ಪಾಶೆಟ್ಟಿಗೆ ಇಂದು 45ನೇ ವರ್ಷದ ಹುಟ್ಟುಹಬ್ಬ.
ಶಿಲ್ಪಾ ಈ ಬಾರಿ ಪತಿ, ಅಮ್ಮ, ಪುತ್ರ, ತಂಗಿಯೊಂದಿಗೆ ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಬಾಲಿವುಡ್ ಸೆಲಬ್ರಿಟಿಗಳು ಶಿಲ್ಪಾಶೆಟ್ಟಿಗೆ ಬರ್ತ್ಡೇ ಶುಭ ಕೋರಿದ್ದಾರೆ. ಶಿಲ್ಪಾ ಪತಿ ರಾಜ್ಕುಂದ್ರಾ ಕೂಡಾ ಪತ್ನಿಗೆ ಪ್ರೀತಿಪೂರ್ವಕ ಶುಭ ಕೋರಿದ್ದು ಪತ್ನಿ ಜೊತೆಗಿನ ಕೆಲವು ಸುಂದರ ಕ್ಷಣಗಳ ಪೋಟೋಗಳನ್ನು ವಿಡಿಯೋ ಮಾಡಿ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ' ನಿನ್ನ ಪ್ರೀತಿಯಿಂದ ನನ್ನ ಕೆಲವೊಂದು ಕುಂದುಕೊರೆತಗಳನ್ನು ಸರಿಪಡಿಸಿದ್ದೀಯ, ನಿನ್ನ ನಗು ನೋಡಿದರೆ ಸಾಕು ನಾನು ಕತ್ತಲಿನಿಂದ ಬೆಳಕಿಗೆ ಬಂದಂತಾಗುತ್ತದೆ. ನೀನು ನನ್ನ ಮಕ್ಕಳ ತಾಯಿ ಮಾತ್ರವಲ್ಲ ನನ್ನ ಜೀವನ ಹಾಗೂ ಹೃದಯಕ್ಕೆ ರಾಣಿ. ಐ ಲವ್ ಯು, ಹ್ಯಾಪಿ ಬರ್ತಡೇ ಜಾನ್' ಎಂದು ಕ್ಯಾಪ್ಷನ್ ನೀಡಿದ್ದಾರೆ.
- " class="align-text-top noRightClick twitterSection" data="
">
1975 ಜೂನ್ 8 ರಂದು ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ಜನಿಸಿದರು. ತಂದೆ ಸುರೇಂದ್ರ ಶೆ್ಟ್ಟಿ ಹಾಗೂ ಸುನಂದ ಶೆಟ್ಟಿ ಮಂಗಳೂರಿನವರು. ಮುಂಬೈನಲ್ಲಿ ಫಾರ್ಮಾಸ್ಯುಟಿಕಲ್ ಕಂಪನಿ ನಡೆಸುತ್ತಿದ್ದರಿಂದ ಶಿಲ್ಪಾ ಪೋಷಕರು ಮುಂಬೈನಲ್ಲೇ ನೆಲೆಸಿದ್ದರು. ಮುಂಬೈನಲ್ಲಿ ಶಿಕ್ಷಣ ಮುಗಿಸಿದ ಶಿಲ್ಪಾ ಶೆಟ್ಟಿ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ನತ್ತ ಹೆಜ್ಜೆ ಹಾಕಿದರು. ಇದು ಬಾಲಿವುಡ್ಗೆ ಬರಲು ಸಹಾಯಕವಾಯ್ತು.
ಶಾರುಖ್ ಖಾನ್ ಜೊತೆ 'ಬಾಜಿಗರ್' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಬಾಲಿವುಡ್ಗೆ ಕಾಲಿಟ್ಟ ಶಿಲ್ಪಾ ನಂತರ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡಾ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಪ್ರೀತ್ಸೊದ್ ತಪ್ಪಾ, ಒಂದಾಗೋಣ ಬಾ ಚಿತ್ರಗಳಲ್ಲಿ ರವಿಚಂದ್ರನ್ ಜೊತೆ ಹಾಗೂ ಆಟೋಶಂಕರ್ ಚಿತ್ರದಲ್ಲಿ ಉಪೇಂದ್ರ ಜೊತೆ ಶಿಲ್ಪಾ ಆ್ಯಕ್ಟ್ ಮಾಡಿದ್ದಾರೆ.
ರಾಜ್ಕುಂದ್ರಾ ಅವರನ್ನು ಕೈ ಹಿಡಿದಿರುವ ಶಿಲ್ಪಾಶೆಟ್ಟಿಗೆ ವಿಯಾನ್ ರಾಜ್ಕುಂದ್ರಾ ಹಾಗೂ ಶಮಿಶಾ ಶೆಟ್ಟಿ ಕುಂದ್ರಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇತ್ತೀಚೆಗೆ ಶಿಲ್ಪಾ ತಮ್ಮ ಪತಿಯೊಂದಿಗೆ ಟಿಕ್ಟಾಕ್ನಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದು ಸೋಷಿಯಲ್ ಮೀಡಿಯಾದಲ್ಲಿ ಟಿಕ್ಟಾಕ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">