ETV Bharat / sitara

'ಶಿಕಾರ' ನನ್ನ ಅತ್ಯುತ್ತಮ ಚಿತ್ರ: ನಿರ್ದೇಶಕ ವಿಧು ವಿನೋದ್​ ಚೋಪ್ರಾ ಬಣ್ಣನೆ - ನಿರ್ದೇಶಕ ವಿಧು ವಿನೋದ್​ ಚೋಪ್ರಾ

ನಿರ್ದೇಶಕ ವಿಧು ವಿನೋದ್​ ಚೋಪ್ರಾ ಅವರು ಶಿಕಾರ ನನ್ನ ಅತ್ಯುತ್ತಮ ಚಿತ್ರ. ಈ ಚಿತ್ರ ಮಾಡಲು 11 ವರ್ಷಗಳನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

Shikara is my best film
ನಿರ್ದೇಶಕ ವಿಧು ವಿನೋದ್​ ಚೋಪ್ರಾ
author img

By

Published : Feb 10, 2020, 9:29 AM IST

ಕೋಲ್ಕತ್ತಾ: ನಿರ್ಮಾಪಕ, ನಿರ್ದೇಶಕ ವಿಧು ವಿನೋದ್​ ಚೋಪ್ರಾ ಅವರು 'ಶಿಕಾರ' ಮತ್ತು 'ದಿ ಅನ್​ ಟೋಲ್ಡ್​​​ ಸ್ಟೋರಿ ಆಫ್​​ ಕಾಶ್ಮೀರಿ ಪಂಡಿತ್​​​' ಸಿನಿಮಾ ಪ್ರಚಾರಕ್ಕಾಗಿ ಕೋಲ್ಕತ್ತಾಕ್ಕೆ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಅವರು, ತಾವು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಶಿಕಾರ ಅತ್ಯುತ್ತಮ ಚಿತ್ರ. ಈ ಚಿತ್ರ ಮಾಡಲು 11 ವರ್ಷಗಳನ್ನು ತೆಗೆದುಕೊಂಡಿದ್ದೇನೆ ಎಂದರು. ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಅವರ ಜೊತೆ ಸಿನಿಮಾದಲ್ಲಿ ನಟಿಸಿದ್ದ ಆದಿಲ್​ ಖಾನ್​ ಮತ್ತು ಸಾದಿಯ ಕೂಡ ಇದ್ದರು.

ನಿರ್ದೇಶಕ ವಿಧು ವಿನೋದ್​ ಚೋಪ್ರಾ

ಇನ್ನು ಕಾಶ್ಮೀರಿ ಸಂಸ್ಕೃತಿಯ ಪರಿಚಯವಾಗಲು ಆದಿಲ್ ಮತ್ತು ಸಾದಿಯಾ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದರು. ಇವರು ಕಾಶ್ಮೀರದಲ್ಲಿ ಆರು ತಿಂಗಳು ಕಳೆದಿದ್ದಾರೆ ಎಂದರು.

'ದಿ ಅನ್​​ಟೋಲ್ಡ್​​​ ಸ್ಟೋರಿ ಆಫ್​​ ಕಾಶ್ಮೀರಿ ಪಂಡಿತ್​​​' ಸಿನಿಮಾವೂ ಕಾಶ್ಮೀರಿ ಪಂಡಿತರ ಕತೆಯನ್ನ ಹೇಳುವ ಚಿತ್ರವಾಗಿದೆ. ಈ ಸಮುದಾಯ ಎಂತಹ ಕಠಿಣ ಪರಿಸ್ಥಿತಿ ಬಂದರೂ ಗನ್ ಎತ್ತಿಕೊಳ್ಳಲಿಲ್ಲ, ದ್ವೇಷವನ್ನು ಮಾಡಿಲ್ಲ. ಈ ಚಿತ್ರ ಸಂಪೂರ್ಣವಾಗಿ ಅವರ ಜೀವನ- ಸಂಸ್ಕೃತಿಯ ಕುರಿತದ್ದಾಗಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇನ್ನು 'ಶಿಕಾರ' ಸಿನಿಮಾವೂ ನಾವು ದ್ವೇಷ ಮಾಡುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ದ್ವೇಷದಿಂದ ನಮ್ಮನ್ನು ನಾವೇ ನಾಶಮಾಡಿಕೊಳ್ಳುತ್ತೇವೆ ಎಂಬುದು ಈ ಸಿನಿಮಾದ ಸಾರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.