ETV Bharat / sitara

King is Back: ಮಗನಿಗೆ ಜಾಮೀನು ಸಿಕ್ಕ ಬಳಿಕ ಶಾರುಖ್ ಹರಿಬಿಟ್ಟ ಮೊದಲ ಪೋಸ್ಟ್! - ಬಾಲಿವುಡ್​ ನಟ ಶಾರೂಖ್​ ಖಾನ್​ ಸುದ್ದಿ

ಡ್ರಗ್ಸ್ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಜಾಮೀನು ಪಡೆದ ನಂತರ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಆ್ಯಕ್ಟಿವ್​ ಆಗಿದ್ದಾರೆ.

shah rukh khan first post  Shah Rukh Khan first post since son aryan arrest  shah rukh news  shah rukh viral video  ಶಾರೂಖ್​ ಖಾನ್​ ಮೊದಲ ಪೋಸ್ಟ್​ ಮಗನ ಜಾಮೀನಿನ ಬಳಿಕ ಶಾರೂಖ್​ ಖಾನ್​ ಮೊದಲ ಪೋಸ್ಟ್​ ಬಾಲಿವುಡ್​ ನಟ ಶಾರೂಖ್​ ಖಾನ್​ ಸುದ್ದಿ  ಬಾಲಿವುಡ್​ ನಟ ಶಾರೂಖ್​ ಖಾನ್​ ವಿಡಿಯೋ ವೈರಲ್​
ಮಗನ ಜಾಮೀನಿನ ಬಳಿಕ ಶಾರುಖ್ ಖಾನ್ ಹರಿಯಬಿಟ್ಟ ಮೊದಲ ಪೋಸ್ಟ್
author img

By

Published : Jan 20, 2022, 9:04 AM IST

ಅಕ್ಟೋಬರ್ 3 ರಂದು ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಮಗ ಆರ್ಯನ್​ ಖಾನ್​ನನ್ನು ಬಂಧಿಸಲಾಗಿತ್ತು. ಆಗ ಶಾರುಖ್ ಖಾನ್ ಕೆಟ್ಟ ಸಮಯವನ್ನು ಎದುರಿಸಬೇಕಾಯಿತು. ಮೂರು ವಾರಗಳ ನಂತರ ಮಗ ಆರ್ಯನ್​ ಖಾನ್​ ಜಾಮೀನಿನ ಮೇಲೆ ಹೊರಬಂದರೂ ನಟ ಜನಮನದಿಂದ ದೂರವಿದ್ದರು.

ಆದರೆ, ಶಾರುಖ್ ಈಗ ನಿಧಾನವಾಗಿ ತಮ್ಮ ಕೆಲಸಕ್ಕೆ ಮರಳುತ್ತಿದ್ದಾರೆ. ಕಳೆದ ತಿಂಗಳು ಈವೆಂಟ್‌ವೊಂದರಲ್ಲಿ ಕಾಣಿಸಿಕೊಂಡ ನಂತರ ಹಾಗೂ ಆರ್ಯನ್‌ಗೆ ಜಾಮೀನು ಸಿಕ್ಕ ಬಳಿಕ ಮೊದಲ ಬಾರಿಗೆ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ.

ಮಗನ ಜಾಮೀನಿನ ಬಳಿಕ ಶಾರುಖ್ ಖಾನ್ ಮೊದಲ ಪೋಸ್ಟ್​ ಏನು ಗೊತ್ತಾ

ತಮ್ಮ ಮಗ ಆರ್ಯನ್ ಖಾನ್ ಜೈಲಿನಲ್ಲಿದ್ದಾಗ ಶಾರುಖ್ ಖಾನ್ ತೀವ್ರ ಚಿಂತಿತರಾಗಿದ್ದರು. ಆದರೆ ಮಗನಿಗೆ ಜಾಮೀನು ದೊರೆತ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಶಾರುಖ್ ಆ್ಯಕ್ಟಿವ್​ ಆಗಿದ್ದಾರೆ. ಜನವರಿ 19ರಂದು ನಟ ತನ್ನ ಪತ್ನಿ ಗೌರಿ ಖಾನ್ ಜೊತೆಗಿನ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ಆರ್ಯನ್ ಜಾಮೀನಿನ ನಂತರ ಇದು ಅವರ ಮೊದಲ ಪೋಸ್ಟ್ ಆಗಿದೆ. ಈ ಮೂಲಕ ಅಭಿಮಾನಿಗಳು ಅವರನ್ನು ಇನ್ನೂ ಹೆಚ್ಚು ಹೆಚ್ಚಾಗಿ ಬೆಂಬಲಿಸುತ್ತಿದ್ದಾರೆ ಎಂದು ತೋರುತ್ತದೆ. ಅಭಿಮಾನಿಗಳು ಅವರ ಪೋಸ್ಟ್​ಗೆ ಹೃದಯದ ಎಮೋಜಿಗಳನ್ನು ಹಾಕಿದ್ರೆ, ಇತರರು ಕಾಮೆಂಟ್‌ಗಳ ವಿಭಾಗದಲ್ಲಿ ಕಿಂಗ್ ಖಾನ್ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು. ಆ ಬಳಿಕ ಕಿಂಗ್​ ಖಾನ್​ ಮಂಕಾಗಿದ್ದು, ಸಾಮಾಜಿಕ ಜಾಲತಾಣದಿಂದ ಅಂತರ ಕಾಪಾಡಿಕೊಂಡಿದ್ದರು. ಈಗ ಅವರ ಪುತ್ರನಿಗೆ ಜಾಮೀನು ಸಿಕ್ಕಿದ್ದು, ಶಾರುಖ್​​ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.

ಓದಿ: ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಸಾರಾ ಅಲಿ ಖಾನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.