ಹೈದರಾಬಾದ್: ಬಾಲಿವುಡ್ನ ಬಹುನಿರೀಕ್ಷಿತ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪತನ್ ಸಿನಿಮಾ ನಿರ್ದೇಶಕ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗುತ್ತಾರೆ. ಇದೀಗ ಪತನ್ ಸಿನಿಮಾ ಸೆಟ್ನಲ್ಲಿ ಸಹಾಯಕರೊಂದಿಗೆ ಜಗಳವಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಸಿದ್ಧಾರ್ಥ್ ಪತನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಸಂದರ್ಭದಲ್ಲಿ ಹೆಚ್ಚಾಗಿ ರೇಗಾಡುತ್ತಾರಂತೆ. ಈ ಬಗ್ಗೆ ಅನೇಕರು ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಸಿದ್ಧಾರ್ಥ್ ಅವರ ಸಹಾಯಕರೊಬ್ಬರು ಶೂಟಿಂಗ್ ಸೆಟ್ನಲ್ಲಿ ಬೇಜವಾಬ್ದಾರಿಯುತ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅನೇಕ ಬಾರಿ ಮೊಬೈಲ್ ಬಳಸದಂತೆ ಸೂಚಿಸಿದ್ದಾರೆ. ಆದರೆ ಮನವಿಗೆ ಬಗ್ಗದ ಕಾರಣದಿಂದ ಸಹಾಯಕರೊಂದಿಗೆ ವಾದಕ್ಕಿಳಿದಿದ್ದಾರೆ. ಈ ಗಲಾಟೆಯಲ್ಲಿ ಸಹಾಯಕ ಸಿದ್ಧಾರ್ಥ್ಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದಾದ ಬಳಿಕವೂ ಸಿದ್ದಾರ್ಥ್ ಬೆನ್ನ ಹಿಂದೆ ಸಹಾಯಕ ಕೆಟ್ಟದಾಗಿ ಮಾತನಾಡುತ್ತಿದ್ದಂತೆ. ಇದರಿಂದ ಕೋಪಗೊಂಡ ಸಿದ್ದಾರ್ಥ್ ಮತ್ತೆ ತೆರಳಿ ಆತನ ಕಪಾಳಕ್ಕೆ ಬಾರಿಸಿದ್ದಾನೆ.
ಇನ್ನು ಘಟನೆ ನಡೆದ ಕೆಲ ದಿನಗಳವರೆಗೆ ಚಿತ್ರೀಕರಣವನ್ನು ರದ್ದುಗೊಳಿಸಿದ್ದಾರೆ. ಬಳಿಕ ಮುಂಬೈನ ವೈಆರ್ಎಫ್ ಸ್ಟುಡಿಯೋದಲ್ಲಿ ಶೂಟಿಂಗ್ ಪ್ರಾರಂಭಿಸಿದ್ದು, ಸಹಾಯಕನನ್ನು ವಜಾಗೊಳಿಸಲಾಗಿದೆ.