ETV Bharat / sitara

ಬೆಂಗಳೂರಲ್ಲೂ ಜರುಗಲಿದೆ 'ಸಾಹೋ' ಪ್ರೀ ರಿಲೀಸ್ ಈವೆಂಟ್​​​​​​​​ - jackie shroff

ಇದೇ ತಿಂಗಳ 31 ರಂದು 'ಸಾಹೋ' ಸಿನಿಮಾ ಬಿಡುಗಡೆಯಾಗಲಿದ್ದು ಬೆಂಗಳೂರು, ಹೈದರಾಬಾದ್ ಸೇರಿ ನಾಲ್ಕು ಪ್ರಮುಖ ನಗರಗಳಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಸಲು ಪ್ಲಾನ್ ಮಾಡಲಾಗಿದೆ. ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್​ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಸಾಹೋ'
author img

By

Published : Aug 2, 2019, 9:11 AM IST

ಪ್ರಭಾಸ್ ಅಭಿನಯದ 'ಸಾಹೋ' ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ. ಆಗಸ್ಟ್ 15 ರಂದು ನಿಗದಿಯಾಗಿದ್ದ ಸಿನಿಮಾ ಬಿಡುಗಡೆ ದಿನಾಂಕ ಆಗಸ್ಟ್​​ 31ಕ್ಕೆ ಹೋಗಿದೆ. ಆದರೆ ಆಗಸ್ಟ್​​ 15 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ಚಿತ್ರತಂಡ ಈಗ ಪ್ರಮೋಷನ್​ ಕೆಲಸದಲ್ಲಿ ಬ್ಯುಸಿ ಇದೆ. ಚೆನ್ನೈ, ಬೆಂಗಳೂರು, ಹೈದರಾಬಾದ್​​ ಹಾಗೂ ಮುಂಬೈನಂಥ ಪ್ರಮುಖ ನಗರಗಳಲ್ಲಿ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್​ ನಡೆಸಲು ಪ್ಲ್ಯಾನ್ ಮಾಡಿದೆ. ಆಗಸ್ಟ್​ 17 ರಂದು ಹೈದರಾಬಾದ್​​​ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮೂಲಗಳ ಪ್ರಕಾರ ಹೈದರಾಬಾದ್​ ಎಲ್​​​ಬಿ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮಕ್ಕೆ ಸ್ಥಳವನ್ನು ಬುಕ್ ಮಾಡಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರು ಹಾಗೂ ಇನ್ನಿತರ ನಗರಗಳಲ್ಲಿ ಯಾವ ದಿನ ಹಾಗೂ ಯಾವ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಚಿತ್ರತಂಡ ಶೀಘ್ರ ವಿವರ ನೀಡಲಿದೆ. ಯುವಿ ಕ್ರಿಯೇಶನ್ಸ್ ಅಡಿ ತಯಾರಾಗುತ್ತಿರುವ 'ಸಾಹೋ' ಚಿತ್ರವನ್ನು ಸುಜಿತ್ ನಿರ್ದೇಶಿಸಿದ್ದಾರೆ. ಪ್ರಭಾಸ್, ಶ್ರದ್ಧಾ ಕಪೂರ್, ನೀಲ್ ನಿತಿನ್ ಮುಖೇಶ್, ಚುಂಕಿ ಪಾಂಡೆ, ಜಾಕಿ ಶ್ರಾಫ್​ ಹಾಗೂ ಇನ್ನಿತರರು ನಟಿಸಿದ್ದಾರೆ.

Intro:Body:

saaho

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.