ಹೈದರಾಬಾದ್: ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಆಗಸ್ಟ್ 14 ರಂದು ಮುಂಬೈನಲ್ಲಿ ಬಹುಕಾಲದ ಗೆಳೆಯ ಕರಣ್ ಬೂಲಾನಿಯ ಜೊತೆ ವಿವಾಹವಾಗಿದ್ದಾರೆ. ಮದುವೆಯ ಎರಡು ದಿನದ ನಂತರ ರಿಯಾ ಅದ್ಭುತ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಂನಲ್ಲಿ 'ನಾನು ಉದ್ದೇಗಕ್ಕೆ ಒಳಗಾಗಬಾರದಿತ್ತು. ಅದು 12 ವರ್ಷಗಳ ಸುದೀರ್ಘ ಪಯಣದ ನಂತರ. ನೀವು ನನ್ನ ಅತ್ಯುತ್ತಮ ಸ್ನೇಹಿತ. ಆದ್ರೆ ನಾನು ಬಾವುಕಳಾದೆ ಕಾರಣ ಮುಂದಿನ ದಿನಗಳನ್ನು ನೆನೆದು. ಹೆಚ್ಚಾಗಿ ನಾನು ರಾತ್ರಿ 11 ಗಂಟೆಗೆ ಮನೆಗೆ ಬರುವಂತಹ ಹುಡುಗಿ. ನಾನು ಎಷ್ಟು ಅದೃಷ್ಟವಂತೆ ಅಂತ ನನಗೆ ತಿಳಿದಿಲ್ಲ.
ಮುಂದಿನ ದಿನಗಳಲ್ಲಿ ನಮ್ಮ ಕುಟುಂಬ ಇಷ್ಟೇ ಪ್ರೀತಿಯಿಂದ ಇರುತ್ತದೆ ಎಂದು ಭಾವಿಸುತ್ತೇನೆ' ಎಂದು ಬರೆದು ಫೋಟೊ ಹಂಚಿಕೊಂಡಿದ್ದು, ಅಪ್ಪ ಅಮ್ಮ ಹಾಗೂ ಸಹೋದರಿ ಸೋನಂ ಕಪೂರ್ ಸೇರಿದಂತೆ ಇತರ ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ.
ಅನಿಲ್ ಕಪೂರ್ ಮತ್ತು ವಸ್ತ್ರ ವಿನ್ಯಾಸಕಿ ಪತ್ನಿ ಸುನಿತಾ ಅವರ ಕಿರಿಯ ಮಗಳು ರಿಯಾ, ಈಗಾಗಲೇ ಆಯಿಷಾ. ಖೂಬ್ಸೂರತ್, ವೀರ್ ದಿ ವೆಡ್ಡಿಂಗ್ ಸೇರಿದಂತೆ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕರಣ್ ಬೂಲಾನಿ ಅನಿಲ್ ಕಪೂರ್ ಅವರ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಇತ್ತೀಚೆಗೆ ಅರವಿಂದ ಅಡಿಗ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ ನೆಟ್‌ಫ್ಲಿಕ್ಸ್ ಸರಣಿ ಆಯ್ಕೆ ದಿನವನ್ನು ಸಹ ನಿರ್ದೇಶಿಸಿದ್ದಾರೆ.