ಹೈದರಾಬಾದ್: ಸೌತ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ಗೆ ಲಗ್ಗೆಇಟ್ಟಿದ್ದು, ಚಿತ್ರ ನಿರ್ಮಾಪಕ ವಿಕಾಸ್ ಬಹ್ಲ್ ಅವರ ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದು ಅವರ ಎರಡನೇ ಬಾಲಿವುಡ್ ಸಿನಿಮಾವಾಗಲಿದ್ದು, ಈ ಸಿನಿಮಾದಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
- " class="align-text-top noRightClick twitterSection" data="
">
ರಶ್ಮಿಕಾ ಮುಂದಿನ ವರ್ಷ ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ. ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ವಿಷಯ ಹಂಚಿಕೊಂಡ ಕೆಲವೇ ದಿನಗಳಲ್ಲಿ ರಶ್ಮಿಕಾ ಮತ್ತೊಂದು ಹಿಂದಿ ಚಿತ್ರದಲ್ಲಿ ನಟಿಸಲಿರುವ ಸುದ್ದಿ ರೌಂಡ್ಸ್ ಹೊಡೆಯಲು ಶುರುವಾಗಿದೆ.
ಎರಡನೇ ಬಾಲಿವುಡ್ ಚಿತ್ರಕ್ಕೆ ರಶ್ಮಿಕಾ ಸಹಿ ಹಾಕಿದ್ದು, ಇದರಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ. ತಾತ್ಕಾಲಿಕವಾಗಿ ಡೆಡ್ಲಿ ಎಂದು ಹೆಸರಿಡಲಾಗಿರುವ ಈ ಚಿತ್ರಕ್ಕೆ ಕ್ವೀನ್ ಖ್ಯಾತಿಯ ನಿರ್ದೇಶಕ ವಿಕಾಸ್ ಬಹ್ಲ್ ಆಕ್ಷನ್ ಕಟ್ ಹೇಳಲಿದ್ದಾರೆ.
- " class="align-text-top noRightClick twitterSection" data="
">
ಏಕ್ತಾ ಕಪೂರ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಾಣದಡಿ ಡೆಡ್ಲಿ ಮಾರ್ಚ್ 2021 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಚಿತ್ರವು ತಂದೆ-ಮಗಳ ಕಥೆಯಾಧಾರಿತವಾಗಿದೆ.
ಮಿಷನ್ ಮಜ್ನು ಮತ್ತು ಡೆಡ್ಲಿ ಜೊತೆಗೆ, ರಶ್ಮಿಕಾ ಅವರು ತೆಲುಗಿನಲ್ಲಿ ಪುಷ್ಪಾ, ಆಡಾಲ್ಲೂ ಮೀಕು ಜೋಹಾರ್ಲು ಹಾಗೂ ಕನ್ನಡದ ಪೊಗರು ಚಿತ್ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.