ETV Bharat / sitara

ತವರು ಮನೆಗೆ ಭೇಟಿ ನೀಡಿ ಮತ್ತೆ ಮುಂಬೈ ಸೇರಿದ ದೀಪಿಕಾ ಪಡುಕೋಣೆ - ಮುಂಬೈ ಏರ್​​​ಪೋರ್ಟ್​ನಲ್ಲಿ ದೀಪಿಕಾ ಪಡುಕೋಣೆ

ಬಹಳ ದಿನಗಳಿಂದ ಅಪ್ಪ-ಅಮ್ಮನನ್ನು ನೋಡದೆ ಬೇಸರದಿಂದ್ದ ದೀಪಿಕಾ ಪಡುಕೋಣೆ ಪತಿ ರಣ್ವೀರ್ ಜೊತೆ ಬೆಂಗಳೂರಿಗೆ ಭೇಟಿ ನೀಡಿ ಇಂದು ಮತ್ತೆ ಮುಂಬೈ ಸೇರಿದ್ದಾರೆ. ಮುಂಬೈ ಏರ್​​​​ಪೋರ್ಟ್​ನಲ್ಲಿ ಪತಿ-ಪತ್ನಿ ಇಬ್ಬರೂ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

Ranveer, Deepika
ದೀಪಿಕಾ ಪಡುಕೋಣೆ
author img

By

Published : Aug 25, 2020, 6:13 PM IST

ಮುಂಬೈ: ಬಾಲಿವುಡ್​ ನಟ ದೀಪಿಕಾ ಪಡುಕೋಣೆ, ಪತಿ ರಣ್ವೀರ್ ಸಿಂಗ್ ಜೊತೆ ಇಂದು ಮುಂಬೈ ಏರ್​​​​ಪೋರ್ಟ್​ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ದೀಪಿಕಾ ಹಾಗೂ ರಣ್ವೀರ್ ಬೆಂಗಳೂರಿನಿಂದ ಮುಂಬೈಗೆ ವಾಪಸಾಗಿದ್ದಾರೆ.

ಸಿಂಪಲ್ ಆಗಿ ಕಾಣುತ್ತಿದ್ದ ದೀಪಿಕಾ ಹಾಗೂ ರಣ್ವೀರ್ ಮಾಸ್ಕ್​ ಧರಿಸಿದ್ದರೂ ಅಭಿಮಾನಿಗಳು ಅವರನ್ನು ಕಂಡುಹಿಡಿದಿದ್ದಾರೆ. ಆದರೂ ಫೋಟೋ ಅಥವಾ ಆಟೋಗ್ರಾಫ್​​​ಗಾಗಿ ಯಾರೂ ಅವರ ಹಿಂದೆ ಬಿದ್ದಿಲ್ಲ. ಲಾಕ್ ಡೌನ್ ಆರಂಭವಾದಾಗಿನಿಂದ ಮುಂಬೈನಲ್ಲೇ ಉಳಿದಿದ್ದ ಈ ಜೋಡಿ ಬಹಳ ದಿನಗಳ ನಂತರ ಬೆಂಗಳೂರಿಗೆ ಬಂದು ಮತ್ತೆ ಮುಂಬೈಗೆ ವಾಪಸಾಗಿದೆ. ದೀಪಿಕಾ ಬೆಂಗಳೂರಿನ ತನ್ನ ತವರು ಮನೆಗೆ ಪತಿಯೊಂದಿಗೆ ಭೇಟಿ ನೀಡಿದ್ದರು. ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿದಿದ್ದು ದೀಪ್​​ವೀರ್ ಇಬ್ಬರೂ ಮತ್ತೆ ಮುಂಬೈಗೆ ವಾಪಸ್ ತೆರಳಿದ್ದಾರೆ.

ಮುಂಬೈ ಏರ್​​​ಪೋರ್ಟ್​ ಬಂದಿಳಿಯುತ್ತಿದ್ದಂತೆ ರಣ್ವೀರ್, ಪತ್ನಿ ದೀಪಿಕಾ ಕೈ ಹಿಡಿದು ಕಾರಿನವರೆಗೂ ಹೆಜ್ಜೆ ಹಾಕಿದ್ದಾರೆ. ಸಾಮಾನ್ಯವಾಗಿ ದೀಪ್​​ವೀರ್ ಸಾರ್ವಜನಿಕವಾಗಿ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡರೆ ಕ್ಯಾಮರಾಗೆ ಪೋಸ್ ನೀಡದೆ ಹೋಗುವುದಿಲ್ಲ. ಆದರೆ ಈ ಬಾರಿ ಇಬ್ಬರೂ ಕಾರಿನವರೆಗೂ ತಲೆ ತಗ್ಗಿಸಿಕೊಂಡೇ ಹೋಗಿ ಕಾರು ಹತ್ತಿ ಅಲ್ಲಿಂದ ಹೊರಟಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳೊಂದಿಗೆ ಒಂದು ಮಾತು ಕೂಡಾ ಆಡಿಲ್ಲ. ರಣ್ವೀರ್​ ಮಾತ್ರ ಕಾರು ಹತ್ತುವಾಗ ಕ್ಯಾಮರಾ ಕಡೆ ನೋಡದೆ ಥಮ್ಸ್​ ಅಪ್ ತೋರಿದ್ದಾರೆ.

ಲಾಕ್​ ಡೌನ್ ಮುಗಿದ ಕೂಡಲೇ ನೀವು ಮಾಡುವ ಕೆಲಸ ಏನು ಎಂದು ಕೆಲವು ದಿನಗಳ ಹಿಂದೆ ದೀಪಿಕಾ ಅವರನ್ನು ಅಭಿಮಾನಿಗಳು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ದೀಪಿಕಾ ಬೆಂಗಳೂರಿಗೆ ತೆರಳಿ ಅಪ್ಪ, ಅಮ್ಮ, ತಂಗಿಯನ್ನು ನೋಡಿ ಬರುತ್ತೇನೆ ಎಂದು ಉತ್ತರಿಸಿದ್ದರು. ಅದರಂತೆ ದೀಪಿಕಾ ಬೆಂಗಳೂರಿಗೆ ಬಂದು ಹೋಗಿದ್ದಾರೆ.

ಕಬೀರ್ ಖಾನ್ ನಿರ್ದೇಶನದ 83 ಚಿತ್ರದಲ್ಲಿ ದೀಪ್​​ವೀರ್ ಇಬ್ಬರೂ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣ್ವೀರ್ ಕಪಿಲ್ ದೇವ್ ಆಗಿ ದೀಪಿಕಾ ಕಪಿಲ್ ಪತ್ನಿ ರೋಮಿ ಆಗಿ ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.