ಹೈದರಾಬಾದ್: ರಾಧೆ ಸಿನಿಮಾದ 'ದಿಲ್ ದೇ ದಿಯಾ' ಹಾಡಿನ ಟೀಸರ್ ಬಿಡುಗಡೆ ನಂತರ ನಟ ಸಲ್ಮಾನ್ ಖಾನ್, ಜಾಕ್ವೆಲಿನಾ ಫರ್ನಾಂಡಿಸ್ ಸಖತ್ ಸ್ಟೆಪ್ ಹಾಕಿರುವ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದ್ದಾರೆ.
- " class="align-text-top noRightClick twitterSection" data="">
ಬ್ಯಾಡ್ ಬಾಯ್ ಸಲ್ಮಾನ್ ಇನ್ಸ್ಸ್ಟಾಗ್ರಾಮ್ನಲ್ಲಿ ಈ ಹಾಡು ಹಂಚಿಕೊಂಡಿದ್ದಾರೆ. ನಿಮಗೆ ನಾನು ಮನಸು ಕೊಟ್ಟಿದ್ದೇನೆ. ಈ ಹಾಡನ್ನು ಕೂಡ ಈಗ ನಿಮಗೆ ಕೊಡುತ್ತಿದ್ದೇನೆ ಎಂದು ಬರೆದು ಕೊಂಡಿದ್ದಾರೆ. 'ದಿಲ್ ದೇ ದಿಯಾ' ವಿಡಿಯೋದಲ್ಲಿ ಸಲ್ಮಾನ್ ಮತ್ತು ಜಾಕ್ವೆಲಿನ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ರಿಚ್ ಆಗಿ ಈ ಹಾಡನ್ನು ಚೀತ್ರಿಕರಿಸಲಾಗಿದೆ.
'ದಿಲ್ ದೇ ದಿಯಾ' ಹಾಡನ್ನು ಸಂಗೀತ ನಿರ್ದೇಶಕ ಹಿಮೇಶ್ ರೇಷಮಿಯಾ ಸಂಯೋಜಿಸಿದ್ದಾರೆ. ಶಬ್ಬೀರ್ ಅಹ್ಮದ್ ಗೀತ ರಚನೆಕಾರರಾಗಿದ್ದಾರೆ. ಕಮಲ್ ಖಾನ್ ಮತ್ತು ಪಾಯಲ್ ದೇವ್ ಈ ಹಾಡಿಗೆ ಧ್ವನಿಯಾಗಿದ್ದು, ಶಬೀನಾ ಖಾನ್ ನೃತ್ಯ ಕೋರಿಯೊಗ್ರಫಿ ಮಾಡಿದ್ದಾರೆ. ಈ ವರ್ಷದ ಈದ್ಗೆ 40 ಕ್ಕೂ ಹೆಚ್ಚು ದೇಶಗಳಲ್ಲಿ ಚಲನಚಿತ್ರ ಬಿಡುಗಡೆಯಾಗಲಿದೆ. ಹಾಡಿನಲ್ಲಿ ಸಲ್ಮಾನ್ ಲುಕ್ ನೋಡಿದ ಅಭಿಮಾನಿಗಳು 55 ವರ್ಷವದ್ರೂ ಇಷ್ಟೊಂದು ಹ್ಯಾಂಡ್ಸಮ್ ಆಗಿದ್ದಾರೆ ಸಲ್ಲು ಎಂದು ಹಾಡಿ ಹೊಗಳಿದ್ದಾರೆ.