ETV Bharat / sitara

‘ನಿರ್ದಿಷ್ಟ ಜನರ ಏಕಸ್ವಾಮ್ಯ' ಮುರಿದು ಹಾಕಿದ OTT ಫ್ಲಾಟ್​ ಫಾರ್ಮ್​ಗಳು'

ಒಟಿಟಿ ಪ್ಲಾಟ್‌ಫಾರ್ಮ್‌ಗಳು ಭಾರತದ ಮನರಂಜನಾ ಉದ್ಯಮದಲ್ಲಿ "ನಿರ್ದಿಷ್ಟ ಸಂಖ್ಯೆಯ ಜನರ" ಏಕಸ್ವಾಮ್ಯವನ್ನು ಕಿತ್ತುಕೊಂಡಿವೆ ಎಂದು ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಅಭಿಪ್ರಾಯಪಟ್ಟಿದ್ದಾರೆ.

priyanka-chopra
ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ
author img

By

Published : Jun 23, 2021, 3:33 PM IST

ಹೈದರಾಬಾದ್​: ವಿಭಿನ್ನವಾದ ಕಥೆಗಳನ್ನು ಸವಿಯಲು ಪ್ರೇಕ್ಷಕರಿಗೆ ಅವಕಾಶ ನೀಡಿದ್ದಲ್ಲದೆ, ಚಿತ್ರರಂಗವನ್ನು ಪ್ರಜಾಪ್ರಭುತ್ವಗೊಳಿಸಿದ್ದರಿಂದ ಜನರು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಕರೆ ನೀಡಿದ್ದಾರೆ. ಈ ವರ್ಷ ನೆಟ್‌ಫ್ಲಿಕ್ಸ್ ಚಲನಚಿತ್ರ 'ದಿ ವೈಟ್ ಟೈಗರ್' ಮೂಲಕ ಡಿಜಿಟಲ್ ಫ್ಲಾಟ್​ಫಾರ್ಮ್​ಗೆ ಚೊಚ್ಚಲ ಪ್ರವೇಶ ಮಾಡಿರುವ ಚೋಪ್ರಾ ಜೊನಾಸ್, ಸ್ಟ್ರೀಮಿಂಗ್ ಸೇವೆಗಳಿಂದಾಗಿ ಕಲಾವಿದರನ್ನು ಬಾಲಿವುಡ್ ಚಿತ್ರದ "ಸೂತ್ರ" ದ ಹೊರಗೆ ಯೋಚಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಭಾರತೀಯ ಸಿನೆಮಾದಲ್ಲಿ ನೀವು ನೋಡುತ್ತಿರುವುದು ಅದನ್ನೇ - ಸ್ಟ್ರೀಮಿಂಗ್ ಸೇವೆಗಳ ಸ್ವಾತಂತ್ರ್ಯವು ಮೊದಲು ಅಸ್ತಿತ್ವದಲ್ಲಿದ್ದ ಸೂತ್ರಕ್ಕಿಂತ ದೊಡ್ಡ ಆಲೋಚನೆಗಳನ್ನು ಹೊಂದಲು ಜನರಿಗೆ ಅವಕಾಶ ಮಾಡಿಕೊಡುತ್ತದೆ. ಇದಕ್ಕಿಂತ ಮೊದಲಿದ್ದ ಸಿನೆಮಾಗಳಲ್ಲಿ ಐದು ಹಾಡುಗಳು, ಫೈಟ್​ ಸೀನ್​ಗಳು ಇರುತ್ತಿದ್ದವು. ಆದರೀಗ ಆ ಆಲೋಚನೆ ಹೋಗಿದೆ. ಈಗ ಜನರು ನೈಜ ಕಥೆಗಳನ್ನು ಬಯಸುತ್ತಾರೆ ಎಂದು ನಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಯುಎಸ್​ನ ಸ್ಟ್ರೀಮಿಂಗ್ ಪ್ಲಾಟ್​​ಫಾರ್ಮ್​ ಜೀ 5ನ ಪ್ರಾರಂಭದ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಟ್ರೀಮಿಂಗ್ ಸೇವೆಗಳ ಉತ್ಕರ್ಷವು, ವಿಶೇಷವಾಗಿ ಭಾರತದಲ್ಲಿ, "ನಿರ್ದಿಷ್ಟ ಸಂಖ್ಯೆಯ ಜನರ" ಏಕಸ್ವಾಮ್ಯ ಮುರಿದುಬಿಟ್ಟಿದೆ, ಇದರ ಪರಿಣಾಮವಾಗಿ ಹೊಸ ಕಥೆ ಬರುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಇದು ಅದ್ಭುತವಾಗಿದೆ. ಏಕೆಂದರೆ ಇದು ಹೊಸ ಬರಹಗಾರರು, ನಟರು, ಚಲನಚಿತ್ರ ನಿರ್ಮಾಪಕರಿಗೆ ನಿರ್ದಿಷ್ಟ ಸಂಖ್ಯೆಯ ಜನರಿಂದ ಏಕಸ್ವಾಮ್ಯದ ಉದ್ಯಮಕ್ಕೆ ಬರಲು ಅವಕಾಶ ನೀಡುತ್ತದೆ. ಇದು ಬೆಳವಣಿಗೆ, ಮನರಂಜನೆ ಮತ್ತು ನಿರ್ದಿಷ್ಟವಾಗಿ ಭಾರತೀಯ ಚಿತ್ರರಂಗಕ್ಕೆ ಉತ್ತಮ ಸಮಯ" ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಚಲನಚಿತ್ರೋದ್ಯಮವು "ರೋಮಾಂಚಕಾರಿ ಸಮಯ" ದ ಮೂಲಕ ಸಾಗುತ್ತಿದೆ ಮತ್ತು ಜನರು ಪೂರ್ಣ ಹೃದಯದಿಂದ "ತಮಗೆ ಸಾಧ್ಯವಾದಷ್ಟು ಸ್ಟ್ರೀಮಿಂಗ್ ಅನ್ನು ಅಳವಡಿಸಿಕೊಳ್ಳಬೇಕು" ಎಂದು ಚೋಪ್ರಾ ಜೊನಾಸ್ ಹೇಳಿದ್ದು, "ಇದು ಭವಿಷ್ಯವಲ್ಲ, ವರ್ತಮಾನ" ಎಂದು ತಿಳಿಸಿದ್ದಾರೆ.

ಓದಿ: ಬಿಗ್​ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭ ; ಸ್ಪರ್ಧಿಗಳ ರೀ ಎಂಟ್ರಿಯನ್ನು ಸಂಜೆ ವೀಕ್ಷಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.