ಫ್ರಾನ್ಸ್ : ಹಾಲಿವುಡ್ ನಟಿ ಗಾಲ್ ಗಡೊಟ್ ಅವರಿಗೆ ಸೆಲೆಬ್ರಿಟಿ ಕಪಲ್ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿಯಿಂದ ಕಿರಿಕಿರಿಯುಂಟಾಗಿದೆ.
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಫ್ಯಾಷನ್ ವೀಕ್ನ ಈವೆಂಟ್ವೊಂದಕ್ಕೆ ಪಿಗ್ಗಿ-ನಿಕ್ ವಿಶೇಷ ಅತಿಥಿಗಳಾಗಿದ್ದರು. ಸೋಮವಾರ ಸಂಜೆ ನಡೆದ ಈ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಹಾಗೂ ನಿಕ್ 45 ಗಂಟೆ ತಡವಾಗಿ ಹಾಜರಾಗಿದ್ದಾರಂತೆ. ಇದೇ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಾಲಿವುಡ್ನ ವಂಡರ್ ವುಮನ್ ಸಿನಿಮಾ ನಟಿ ಗಾಲ್ ಗಡೊಟ್ ಹಾಜರಾಗಿದ್ದರು. ಆದರೆ, ಸರಿಯಾದ ಸಮಯಕ್ಕೆ ಪಿಗ್ಗಿ ದಂಪತಿ ಆಗಮಿಸದ ಹಿನ್ನೆಲೆ ಎಲ್ಲರೂ ಇವರಿಗಾಗಿ ಕಾಯ್ದಿದ್ದಾರೆ. ಇದರಿಂದ ಎಲ್ಲರಿಗೂ ಕಿರಿಕಿರಿಯಾಗಿದೆ ಎಂದು ವರದಿಯಾಗಿದೆ.
- " class="align-text-top noRightClick twitterSection" data="
">
ಇನ್ನು ಅಂದೇ ಫ್ರಾನ್ಸ್ನಲ್ಲಿ ನಡೆದ ಪತಿ ನಿಕ್ ಜೋನ್ಸ್ ಸಹೋದರ ಜೋ ಜೊನ್ಸ್ ಮತ್ತು ಸೋಫಿಯಾ ಟರ್ನರ್ ಅವರ ವಿವಾಹ ಸಂಭ್ರಮದಲ್ಲಿ ಪ್ರಿಯಾಂಕಾ ಛೋಪ್ರಾ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಹೆಚ್ಚು ಹೊತ್ತು ಕಾಲ ಕಳೆದ ಹಿನ್ನೆಲೆ ಪ್ಯಾರಿಸ್ ಫ್ಯಾಷನ್ ವೀಕ್ಗೆ ತಡವಾಗಿ ಹಾಜರಾಗಿದ್ದರು.