ETV Bharat / sitara

ಪ್ರೀತಿ ಜಿಂಟಾಗೆ 'ಮಮ್ಮಿ ವೈಬ್ಸ್' ಫೋಟೋಗಳು ಸಖತ್​ ವೈರಲ್​.. ತನ್ನ ಮಕ್ಕಳ ಬಗ್ಗೆ ಹೇಳಿದ್ದು ಹೀಗೆ! - ಪ್ರೀತಿ ಜಿಂಟಾಗೆ ಅವಳಿ ಮಕ್ಕಳು

ಬಾಲಿವುಡ್ ನಟಿ ಪ್ರೀತಿ ಜಿಂಟಾ ನವೆಂಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಜೈ ಮತ್ತು ಜಿಯಾ ಎಂಬ ಅವಳಿ ಮಕ್ಕಳನ್ನು ಪಡೆದಿರುವ ವಿಷಯ ಗೊತ್ತಿದೆ. ಆಗಿನಿಂದಲೂ ಪ್ರೀತಿ ಜಿಂಟಾ ತನ್ನ ತಾಯ್ತನದ ಮತ್ತು ತನ್ನ ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

bollywood actor preity zinta  preity zinta twins  gene goodenough  Priety Zinta gives mommy vibes  ಪ್ರೀತಿ ಜಿಂಟಾ 'ಮಮ್ಮಿ ವೈಬ್ಸ್' ಫೋಟೋಗಳು ಸಖತ್​ ವೈರಲ್​.  ಪ್ರೀತಿ ಜಿಂಟಾಗೆ ಅವಳಿ ಮಕ್ಕಳು  ಬಾಲಿವುಡ್ ನಟಿ ಪ್ರೀತಿ ಜಿಂಟಾ ಮದುವೆ
ತನ್ನ ಮಕ್ಕಳ ಬಗ್ಗೆ ಹೇಳಿದ್ದು ಹೀಗೆ
author img

By

Published : Jan 15, 2022, 7:03 AM IST

ನಟಿ ಇತ್ತೀಚೆಗೆ ತನ್ನ ಮಗುವನ್ನು ಪ್ರೀತಿಯಿಂದ ತಬ್ಬಿಕೊಂಡಿರುವ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಜೊತೆಗೆ ಎರಡು ಹೃದಯದ ಎಮೋಜಿಗಳೊಂದಿಗೆ 'ಮಮ್ಮಿ ವೈಬ್ಸ್' ಎಂದು ಬರೆದಿದ್ದಾರೆ.

ಫೋಟೊದಲ್ಲಿ ನಗುಮುಖದಿಂದಿರುವ ಪ್ರೀತಿ, ಹಸಿರು ಪುಲ್‌ಓವರ್‌ ಧರಿಸಿದ್ದಾರೆ. ಅವರ ಕೈಯಲ್ಲಿರುವ ಚಿಕ್ಕ ಮಗು ಪಿಂಕ್ ಸ್ವೆಟರ್ ಅನ್ನು ಧರಿಸಿರುವುದು ಕಂಡು ಬಂದಿದೆ. ಆದರೆ ಮುಖವನ್ನು ತೋರಿಸಿಲ್ಲ.

ಪ್ರೀತಿ ಜಿಂಟಾ ಫೋಟೋ ವೈರಲ್​

2021ರ ನವೆಂಬರ್‌ನಲ್ಲಿ ತಾನು ಮತ್ತು ಅವರ ಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿರುವುದಾಗಿ ಪ್ರೀತಿ ದಂಪತಿ ತಿಳಿಸಿತ್ತು. ಆಗ ತಮ್ಮ ಫೋಟೋವನ್ನು ಹಂಚಿಕೊಂಡಿದ್ದ ಅವರು, ಎಲ್ಲರಿಗೂ ನಮಸ್ಕಾರ, ನಾನು ಇಂದು ನಮ್ಮ ಅದ್ಭುತ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

ಓದಿ: ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಕ್ಕೆ ಸಿಕ್ತು ಕಾರಣ!: ತನಿಖಾ ವರದಿಯಿಂದ ಬಹಿರಂಗ

ಜೀನ್ ಮತ್ತು ನಾನು ತುಂಬಾ ಸಂತೋಷದಿಂದ್ದೇವೆ. ನಮ್ಮ ಟ್ವೀನ್ಸ್​ಗಳಾದ ಜೈ ಜಿಂಟಾ ಗುಡೆನಫ್ ಮತ್ತು ಜಿಯಾ ಜಿಂಟಾ ಗುಡೆನಫ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ. ಈ ಹೊಸ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದಿದ್ದಾರೆ.

ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದ ವೈದ್ಯರು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ಪ್ರೀತಿ ಜಿಂಟಾ ಧನ್ಯವಾದ ಸಲ್ಲಿಸಿದ್ದಾರೆ. ಪ್ರೀತಿ ಜಿಂಟಾ 2016 ರಲ್ಲಿ ಅಮೆರಿಕದ ಜೀನ್ ಗುಡೆನಫ್‌ ಅವರನ್ನು ವಿವಾಹವಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.