ETV Bharat / sitara

ಶ್ರದ್ಧೆ, ಛಲದಿಂದ ನಟನಾದ ದೊಡ್ಡ ಗುಣದ ವ್ಯಕ್ತಿ ಇರ್ಫಾನ್‌: ಶಿಷ್ಯನ ಗುಣಗಳನ್ನು ಸ್ಮರಿಸಿದ ರಂಗಕರ್ಮಿ ಪ್ರಸನ್ನ - ಶಿಷ್ಯನ ಗುಣಗಾನ ಮಾಡಿದ ರಂಗಕರ್ಮಿ ಪ್ರಸನ್ನ

'ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಅವರು ಬಹಳ ಕಷ್ಟದಲ್ಲಿದ್ದರು. ಆಗ ಎರಡು ನಾಟಕಗಳನ್ನು ಮಾಡಿಸಿದ್ದೆ. ಎನ್​​ಎಸ್​ಡಿ ಮುಗಿಸಿ ಮುಂಬೈಗೆ ಹೋದ ನಂತರವೂ ಅವರು ಬಹಳ ಕಷ್ಟಪಟ್ಟಿದ್ದಾರೆ. ನನ್ನ ಬಳಿ ಇರುವಾಗ ಏನೇ ಹೇಳಿಕೊಟ್ಟರೂ ಛಲ, ಶ್ರದ್ಧೆಯಿಂದ ಎಲ್ಲವನ್ನೂ ಕಲಿಯುತ್ತಿದ್ದರು. ನಟನೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ಆತನ ಶ್ರದ್ಧೆ, ಹಠವೇ ಇಷ್ಟು ಎತ್ತರಕ್ಕೇರಲು ಕಾರಣವಾಯ್ತು': ರಂಗಕರ್ಮಿ ಪ್ರಸನ್ನ

Irrfan
ಇರ್ಫಾನ್
author img

By

Published : Apr 29, 2020, 5:07 PM IST

Updated : Apr 29, 2020, 7:51 PM IST

ಬೆಂಗಳೂರು: ತನ್ನ ನೆಚ್ಚಿನ ಶಿಷ್ಯನ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ ರಂಗಕರ್ಮಿ ಪ್ರಸನ್ನ ಅಪರೂಪದ ನಟನಾ ಚಾತುರ್ಯವನ್ನು ಮನಸಾರೆ ಕೊಂಡಾಡಿದರು. 'ಲಾಲ್​​​​​ ಘಾಸ್ ಪರ್ ನೀಲೆ ಘೋಡೆ' ನಾಟಕದಲ್ಲಿ ಇರ್ಫಾನ್ ಬೋಳು ತಲೆಗೆ ವಿಗ್ ಹಾಕಿಕೊಳ್ಳದೆ, ಗಡ್ಡ ಅಂಟಿಸಿಕೊಳ್ಳದೆ, ವಿಶೇಷ ವೇಷ ತೊಡದೆ, ಅಭಿನಯದಲ್ಲೇ ಲೆನಿನ್ ಪಾತ್ರವನ್ನು ಕಟ್ಟಿಕೊಟ್ಟಿದ್ದರು. ಹ್ಯಾಂಡ್​ಸಮ್ ಇರುವವರು ಮಾತ್ರವಲ್ಲ, ಒಳ್ಳೆಯ ನಟನೆ ಬಂದರೂ ನಾಯಕನಾಗಬಹುದು ಎಂದು ಇರ್ಫಾನ್ ತೋರಿಸಿಕೊಟ್ಟಿದ್ದರು ಎಂದು ಪ್ರಸನ್ನ ತನ್ನ ಶಿಷ್ಯನನ್ನು ಸ್ಮರಿಸಿದರು.

ಆತ ಒಬ್ಬ ಶ್ರೇಷ್ಠ ನಟ ಮಾತ್ರವಲ್ಲ, ದೊಡ್ಡ ಗುಣ ಹೊಂದಿದ್ದ ಅಪರೂಪದ ವ್ಯಕ್ತಿತ್ವ. ಆತ ಇಂದಿನ ನಟರು ಮಾತ್ರವಲ್ಲ, ಯುವಜನರಿಗೂ ಮಾದರಿ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಅವರು ಬಹಳ ಕಷ್ಟದಲ್ಲಿದ್ದರು. ಆಗ ಎರಡು ನಾಟಕಗಳನ್ನು ಮಾಡಿಸಿದ್ದೆ. ಎನ್​​ಎಸ್​ಡಿ ಮುಗಿಸಿ ಮುಂಬೈಗೆ ಹೋದ ನಂತರವೂ ಅವರು ಬಹಳ ಕಷ್ಟಪಟ್ಟಿದ್ದಾರೆ. ನನ್ನ ಬಳಿ ಇರುವಾಗ ಏನೇ ಹೇಳಿಕೊಟ್ಟರೂ ಛಲದಿಂದ ಎಲ್ಲವನ್ನೂ ಅವರು ಕಲಿತಿದ್ದರು. ನಟನೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ಆತನ ಶ್ರದ್ಧೆ, ಹಠವೇ ಆತ ಇಷ್ಟು ಎತ್ತರಕ್ಕೇರಲು ಕಾರಣವಾಯ್ತು. ಎಷ್ಟೇ ದೊಡ್ಡ ನಟನಾದರೂ ನನ್ನನ್ನು ಆಗಾಗ್ಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಸಾಮಾಜಿಕ ಹೋರಾಟಗಳಿಗೆ ಕೂಡಾ ಜೊತೆಯಾಗಿದ್ದರು ಎಂದು ಪ್ರಸನ್ನ ಸ್ಮರಿಸಿಕೊಳ್ತಾರೆ.

Irrfan
ಪ್ರಸನ್ನ ಅವರೊಂದಿಗೆ ಇರ್ಫಾನ್ ಖಾನ್ ದಂಪತಿ

ಇರ್ಫಾನ್ ಅವರ ಮದುವೆ ಬಗ್ಗೆ ಮಾತನಾಡುತ್ತಾ, ರಾಜಸ್ಥಾನದ ರಾಜಮನೆತನದ ಹುಡುಗ, ಪತ್ನಿ ಸುತಪ ಸಿಕ್ದರ್ ಪಶ್ಚಿಮ ಬಂಗಾಳದ ಹಿಂದೂ ಹುಡುಗಿ. ಇಬ್ಬರೂ ಪ್ರೀತಿಸಿ ಮದುವೆಯಾದರು. ಧರ್ಮ ಬೇರೆಯಾಗಿದ್ದರೂ ಅವರಿಬ್ಬರೂ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಇನ್ನು ಇರ್ಫಾನ್ ಎಷ್ಟೇ ದೊಡ್ಡ ನಟನಾದರೂ ಅವರಿಗೆ ಕೃಷಿ ಮೇಲೆ ಬಹಳ ಒಲವಿತ್ತು. ಅವರು ಹಸುಗಳನ್ನು ಕೂಡಾ ಸಾಕಿದ್ದರು ಎಂದು ಇರ್ಫಾನ್ ಗುರು ರಂಗಕರ್ಮಿ ಪ್ರಸನ್ನ ಹೇಳಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗೆ ಸಾಗರಕ್ಕೆ ಬಂದಿದ್ದ ಇರ್ಫಾನ್:
2 ವರ್ಷಗಳ ಹಿಂದೆಯೇ ಇರ್ಫಾನ್ ಕ್ಯಾನ್ಸರ್ ಚಿಕಿತ್ಸೆಗೆಂದು ಶಿವಮೊಗ್ಗದ ಸಾಗರದ ಆನಂದಪುರಕ್ಕೆ ಬಂದಿದ್ದರು. ಅವರು ವಾಪಸ್ ಹೋದ ಬಳಿಕ ನನಗೊಂದು ಪತ್ರ ಬರೆದಿದ್ದರು. 'ನಾನು ಸಾವನ್ನು ಒಪ್ಪಿಕೊಂಡಿದ್ದೇನೆ. ಇನ್ಮುಂದೆ ನನ್ನ ಜೀವನದ ಪ್ರತಿ ಕ್ಷಣವನ್ನೂ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದರಂತೆ.
ನಾಟಕ ಮಾಡುವ ಕನಸು ಕಡೆಗೂ ಕೈಗೂಡಲಿಲ್ಲ:

ಇರ್ಫಾನ್ ಎನ್​ಎಸ್​​​ಡಿ ತರಬೇತಿ ಮುಗಿಸಿ ಹೋದ ನಂತರವೂ 'ಲಾಲ್ ಘಾಸ್ ಪರ್ ನೀಲೇ ಘೋಡೆ' ನಾಟಕ ರಾಷ್ಟ್ರಮಟ್ಟದಲ್ಲಿ ಟಿವಿಗಳಲ್ಲಿ ಪ್ರಸಾರವಾಗಿ ಯಶಸ್ಸು ಕಂಡಿತ್ತು. ಆ ನಾಟಕದ ಹಿನ್ನೆಲೆಗೆ ಎಂ.ಎಫ್​. ಹುಸೇನ್ ಚಿತ್ರಿಸಿದ್ದ ವಿಶೇಷವಾದ ಕುದುರೆಗಳ ಚಿತ್ರವನ್ನು ಬಳಸಿದ್ದೆವು. ಇತ್ತೀಚೆಗೆ ನನಗೆ ಕರೆ ಮಾಡಿ ಮತ್ತೆ ನಾಟಕವನ್ನು ಪ್ರದರ್ಶಿಸುವ ಆಸೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ 10 ದಿನಗಳ ಕಾಲ ಅವರ ಬೇರೆ ಕೆಲಸಗಳನ್ನು ಕ್ಯಾನ್ಸಲ್ ಮಾಡಿದ್ದರು. ನಾನೂ ಕೂಡಾ ಮುಂಬೈಗೆ ಹೋಗಿದ್ದೆ. ಆದರೆ ಸಮಯ ಸಾಕಾಗದೆ ಆ ನಾಟಕ ಪ್ರದರ್ಶನವಾಗಲಿಲ್ಲ. ನಂತರ ಇಬ್ಬರೂ ಬ್ಯುಸಿ ಆಗಿದ್ದರಿಂದ ಆ ನಾಟಕ ಮಾಡಲಾಗಲಿಲ್ಲ. ಅವರ ಆಸೆ ಹಾಗೆ ಉಳಿಯಿತು.. ಎಂದು ಬೇಸರ ವ್ಯಕ್ತಪಡಿಸಿದ್ಧಾರೆ ಪ್ರಸನ್ನ.

Last Updated : Apr 29, 2020, 7:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.