ETV Bharat / sitara

'ಲಾಕ್​ ಅಪ್​'ನಲ್ಲಿ ಬಂಧಿಯಾದ ಪೂನಂ ಪಾಂಡೆ : ರಣಾವತ್​​ ಶೋಗೆ ಎಂಟ್ರಿ ಕೊಟ್ಟ ಬೋಲ್ಡ್​ ಬ್ಯೂಟಿ - ಲಾಕ್ ಅಪ್ ರಿಯಾಲಿಟಿ ಶೋ ಪೂನಂ ಪಾಂಡೆ ಸ್ಪರ್ಧಿ

ಬಾಲಿವುಡ್​ ನಟಿ ಕಂಗನಾ ರಣಾವತ್​ ಹೋಸ್ಟ್​​ ಮಾಡಲಿರುವ ಲಾಕ್​ಅಪ್​ ರಿಯಾಲಿಟಿ ಶೋಗೆ ಮೂರನೇ ಸ್ಪರ್ಧಿಯಾಗಿ ನಟಿ, ಮಾಡೆಲ್​ ಪೂನಂ ಪಾಂಡೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋ, ಫೆಬ್ರವರಿ.27ರಿಂದ ಎಎಲ್‌ಟಿ ಬಾಲಾಜಿ ಮತ್ತು MX Player ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗಲಿದೆ..

Poonam Pandey In Kangana Ranaut's Lock Upp
ಲಾಕ್ ಅಪ್ ರಿಯಾಲಿಟಿ ಶೋಗೆ ಪೂನಂ ಪಾಂಡೆ ಸ್ಪರ್ಧಿ
author img

By

Published : Feb 23, 2022, 3:59 PM IST

ಹೈದರಾಬಾದ್ : ಬಾಲಿವುಡ್​ ನಟಿ ಕಂಗನಾ ರಣಾವತ್​ ನಿರೂಪಣೆಯಲ್ಲಿ ಮೂಡಿ ಬರಲಿರುವ 'ಲಾಕ್ ಅಪ್'​​ ರಿಯಾಲಿಟಿ ಶೋಗೆ ಬೋಲ್ಡ್​​ ಬ್ಯೂಟಿ ಪೂನಂ ಪಾಂಡೆ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಪ್ರೋಮೋ ಬಿಡುಗಡೆ ಮಾಡಿದ್ದಾರೆ.

ಫೆಬ್ರವರಿ 27ರಿಂದ ಏಕ್ತಾ ಕಪೂರ್ ಅವರ ಹೋಮ್ ಪ್ರೊಡಕ್ಷನ್ ಎಎಲ್‌ಟಿ ಬಾಲಾಜಿಯಲ್ಲಿ (ALT Balaji) ಮತ್ತು MX Player ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ದಿನದ 24 ಗಂಟೆಗಳ ಕಾಲ ವೀಕ್ಷಿಸಲು ಸಾಧ್ಯವಾಗುತ್ತದೆ.

ಈ ಮೊದಲು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರುಕಿ ಮತ್ತು ನಟ ನಿಶಾ ರಾವಲ್ ಶೋಗೆ ಆಯ್ಕೆಯಾಗಿದ್ದು, ಇದೀಗ ಮೂರನೇ ಸ್ಪರ್ಧಿಯಾಗಿ ಪೂನಂ ಕಾಣಿಸಿಕೊಂಡಿದ್ದಾರೆ.

Poonam Pandey In Kangana Ranaut's Lock Upp
ಲಾಕ್ ಅಪ್ ರಿಯಾಲಿಟಿ ಶೋಗೆ ಪೂನಂ ಪಾಂಡೆ ಸ್ಪರ್ಧಿ

ಪೂನಂ ಪಾಂಡೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಬೋಲ್ಟ್​​ ಹೇಳಿಕೆ ನೀಡುವ ಮೂಲಕ ವಿವಾದಾತ್ಮಕ ನಟಿಯಾಗಿದ್ದಾರೆ. ಸದ್ಯ ಪಾಂಡೆ ಹೊಂದಿರುವ ಇಮೇಜ್​ ಆಧಾರಿಸಿ ಶೋಗೆ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನೂ ಒಳಗೊಂಡ ಪೋರ್ನ್ ಚಿತ್ರಗಳ ದಂಧೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪೂನಂಗೆ ಬಂಧನ ಪೂರ್ವ ಜಾಮೀನು ನೀಡಿತ್ತು.

ಇದರ ಜೊತೆಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು. ಮದುವೆಯಾಗಿ ಕೇವಲ 10-12 ದಿನಗಳಲ್ಲಿಯೇ ಪತಿ ಆಕೆಯನ್ನು ತೀವ್ರವಾಗಿ ಥಳಿಸಿದ ಸುದ್ದಿ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲ, ಪತಿ ವಿರುದ್ಧ ಪೊಲೀಸ್ ದೂರು ಕೂಡ ನೀಡಿದ್ದರು. ಆದರೆ, ನಂತರ ವಿಷಯ ಇತ್ಯರ್ಥವಾಯಿತು ಹಾಗೂ ಇಬ್ಬರೂ ರಾಜಿಯಾಗಿದ್ದರು.

ಲಾಕ್‌ಅಪ್ ರಿಯಾಲಿಟಿ ಶೋಗೆ ಪೂನಂ ಪಾಂಡೆ ಸ್ಪರ್ಧಿ

ಲಾಕ್ ಅಪ್ ರಿಯಾಲಿಟಿ ಶೋ 2 ತಿಂಗಳುಗಳ ಕಾಲ ನಡೆಯಲಿದ್ದು, 16 ವಿವಾದಾತ್ಮಕ ಸೆಲೆಬ್ರಿಟಿಗಳನ್ನು ತಿಂಗಳುಗಟ್ಟಲೆ ಜೈಲಿನಲ್ಲಿ ಇರಿಸಲಾಗುತ್ತದೆ. ಇದರಲ್ಲಿ ಭಾಗವಹಿಸುವವರೆಲ್ಲರೂ ಮನೆಯಲ್ಲಿ ಸೆರೆಯಲ್ಲಿರುತ್ತಾರೆ. ಎಲ್ಲೆಂದರಲ್ಲಿ ಕ್ಯಾಮೆರಾ ಇರಲಿದೆ. ಸ್ಪರ್ಧಿಗಳು ಮನೆಯಲ್ಲಿ ಉಳಿಯಲು ವಿಭಿನ್ನ ಮತ್ತು ಕಷ್ಟಕರವಾದ ಟಾಸ್ಕ್‌ಗಳನ್ನು ಪೂರೈಸಬೇಕಾಗುತ್ತದೆ.

ಇದನ್ನೂ ಓದಿ: ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್‌, ಡ್ಯಾನ್ಸ್‌: ತಾಂಜಾನಿಯಾ ಪ್ರಜೆಗೆ ಅಭಿನಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.