ಮುಂಬೈ (ಮಹಾರಾಷ್ಟ್ರ): ಏಕ್ತಾ ಕಪೂರ್ ನಿರ್ಮಾಣದ ಜನಪ್ರಿಯ ಕುಂಕುಮ ಭಾಗ್ಯ ಧಾರಾವಾಹಿಯ ನಟಿ ಪೂಜಾ ಬ್ಯಾನರ್ಜಿ ನಟನೆಯಿಂದ ಹಿಂದೆ ಸರಿದಿದ್ದಾರೆ. ತುಂಬು ಗರ್ಭಿಣಿಯಾಗಿರುವ ಅವರು, ಹೆರಿಗೆ ನಿಮಿತ್ತ ದೀರ್ಘ ಕಾಲದ ರಜೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹಾಗಾಗಿ, ಇನ್ನು ಮುಂದೆ ಕುಂಕುಮ ಭಾಗ್ಯ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
ವಿಡಿಯೋ ಮೂಲಕ ಶೋಗೆ ಹೃತ್ಪೂರ್ವಕ ವಿದಾಯ ಹೇಳಿರುವ ಪೂಜಾ ಬ್ಯಾನರ್ಜಿ, ಈ ದಿನ ಬಂದೇ ಬರುತ್ತದೆ ಎಂದು ನನಗೆ ತಿಳಿದಿತ್ತು. ಆದರೆ, ಪ್ರಾಮಾಣಿಕವಾಗಿ ನಾನು ಅದಕ್ಕೆ ಸಿದ್ಧಳಾಗಿರಲಿಲ್ಲ. ಸೆಟ್‌ನಲ್ಲಿರುವ ಪ್ರತಿಯೊಬ್ಬರ ಪ್ರೀತಿಯು ನನ್ನನ್ನು ಪ್ರತಿದಿನ ಖುಷಿಯಾಗಿ ನೋಡಿಕೊಂಡಿದೆ.
- " class="align-text-top noRightClick twitterSection" data="
">
ನನ್ನ 'ಕುಂಕುಮ ಭಾಗ್ಯ' ಕುಟುಂಬವು ನನ್ನ ಸ್ವಂತ ಕುಟುಂಬಕ್ಕಿಂತ ನನ್ನನ್ನು ಹೆಚ್ಚು ಕಾಳಜಿವಹಿಸಿದೆ. ರಿಯಾ ಮೆಹ್ರಾ ಪಾತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ಕೃತಜ್ಞಳಾಗಿದ್ದೇನೆ. ಆ ಪಾತ್ರ ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದು ಅಲ್ಲಿನ ಒಡನಾಟ ಮೆಲುಕು ಹಾಕಿದ್ದಾರೆ.
ತಮ್ಮ ಕೊನೆಯ ದಿನವನ್ನು ಸೆಟ್‌ನಲ್ಲಿ ಹೇಗೆ ಕಳೆದರು ಅನ್ನೋದರ ಬಗ್ಗೆ ಹೇಳಿರುವ ಪೂಜಾ ಬ್ಯಾನರ್ಜಿ, ಎಲ್ಲರೂ ನನ್ನನ್ನು ತುಂಬಾ ಬೇಸರದಿಂದ ಬೀಳ್ಕೊಟ್ಟರು. ಅವರ ಆತ್ಮೀಯತೆಗೆ ಕಣ್ಣೀರು ಬಂದವು. ಎಲ್ಲರಿಗೂ ವಿದಾಯ ಹೇಳಲು ನನಗೆ ಕಷ್ಟವಾಯಿತು. ಅವರ ಒಟನಾಟ ಯಾರ ಪ್ರೀತಿಗೂ ಸಮನಲ್ಲ ಎಂದಿದ್ದಾರೆ.
ಕುಂಕುಮ ಭಾಗ್ಯ ಧಾರಾವಾಹಿ ತಂಡ ನಟಿಯ ವಿದಾಯಕಕ್ಕೆ ಕೇಕ್ ಕತ್ತರಿಸಿ ಹರಸಿ ಬೀಳ್ಕೊಟ್ಟರು. 'ಕುಂಕುಮ ಭಾಗ್ಯ' ಧಾರಾವಾಹಿಯು 2014ರಿಂದ ಪ್ರಸಾರವಾಗುತ್ತಿದ್ದು ಈಗಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ಜೀಟಿವಿಯಲ್ಲಿ ಕುಂಕುಮ ಭಾಗ್ಯ ಪ್ರಸಾರವಾಗುತ್ತಿದೆ.