ETV Bharat / sitara

ಮಾಲ್ಡೀವ್ಸ್​​​​ನಿಂದ 'sunburnt' ಫೋಟೋ ಶೇರ್​ ಮಾಡಿದ ಪರಿಣಿತಿ ಚೋಪ್ರಾ: ಪ್ರಿಯಾಂಕಾ ಏನಂದ್ರು ಗೊತ್ತಾ? - ಪ್ರಿಯಾಂಕ ಚೋಪ್ರಾ

ಬಾಲಿವುಡ್ ನಟಿ ಹಾಗೂ ಪ್ರಿಯಾಂಕ ಚೋಪ್ರಾ ಸಹೋದರಿ ಪರಿಣಿತಿ ಚೋಪ್ರಾ ಸದ್ಯ ಮಾಲ್ಡೀವ್ಸ್​ನಲ್ಲಿ ಫ್ಯಾಮಿಲಿ ಜೊತೆ ಕಾಲಕಳೆಯುತ್ತಿದ್ದಾರೆ.

Parineeti
ಪರಿಣಿತಿ
author img

By

Published : Sep 25, 2021, 2:02 PM IST

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮಾಲ್ಡೀವ್ಸ್‌ನಲ್ಲಿ ಕುಟುಂಬದವರ ಜೊತೆ ರಜೆಯ ಮಜಾದಲ್ಲಿದ್ದಾರೆ. ತಮ್ಮ ರಜೆಯ ಸುಂದರ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್​ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ತನ್ನ ಸಹೋದರ ಶಿವಾಂಗ್ ಚೋಪ್ರಾ ಜೊತೆ ಹಾಡುವ ಸೆಶನ್‌ನ ವಿಡಿಯೋವನ್ನು ಹಂಚಿಕೊಂಡ ನಂತರ, ಪರಿಣಿತಿ ಈಗ ಬಿಸಿಲಿನ ಝಳವನ್ನು ಎಂಜಾಯ್​ ಮಾಡ್ತಿರುವ ಫೋಟೋವನ್ನು ಶೇರ್​ ಮಾಡಿದ್ದು, ಅದಕ್ಕೆ ಅಕ್ಕ ಪ್ರಿಯಾಂಕಾ ಚೋಪ್ರಾ ಜೊನಸ್ ಕಮೆಂಟ್ ಮಾಡಿದ್ದಾರೆ.

ಶುಕ್ರವಾರ, ಪರಿಣಿತಿ ಅವರು ಚೆರ್ರಿ ಕೆಂಪು ಬಣ್ಣದ ಡ್ರೆಸ್​ ಧರಿಸಿರುವ ಆಕರ್ಷಕ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ " Sunburnt" ಎಂದು ಕ್ಯಾಪ್ಷನ್​ ಬರೆದಿದ್ದಾರೆ. ತಂಗಿಯ ಪೋಸ್ಟ್ ನೋಡಿದ ತಕ್ಷಣ ಕಮೆಂಟ್​ ಮಾಡಿರುವ ಪ್ರಿಯಾಂಕಾ ಚೋಪ್ರಾ "ಆಹಾ! ಸ್ಫೂರ್ತಿ ಯಾಗಿರಬಹುದು' ಎಂದು ಹೇಳಿದ್ದಾರೆ.

ಸದ್ಯ ಪರಿಣಿತಿ ಅನಿಲ್ ಕಪೂರ್ ಮತ್ತು ರಣಬೀರ್ ಕಪೂರ್ ಅವರೊಂದಿಗೆ 'ಅನಿಮಲ್​' ಸಿನಿಮಾದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕಬೀರ್ ಸಿಂಗ್ ನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಈ ಚಿತ್ರ 2022ರ ದಸರಾಕ್ಕೆ ತೆರೆ ಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.