ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ಮುಂಬರುವ 'ಸಂಕಿ' ಚಿತ್ರಕ್ಕೆ ಪರಿಣಿತಿ ಛೋಪ್ರಾ ಅವರನ್ನು ಕರೆತರಲು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಚಿತ್ರಕ್ಕೆ ಈಗಾಗಲೇ ವರುಣ್ ಧವನ್ ನಾಯಕನಾಗಿ ಆಯ್ಕೆಯಾಗಿದ್ದು ಇದು ದಕ್ಷಿಣ ಭಾರತದ ಆ್ಯಕ್ಷನ್ ಸಿನಿಮಾವೊಂದರ ರೀಮೇಕ್ ಎನ್ನಲಾಗಿದೆ.
ಮೂಲಗಳ ಪ್ರಕಾರ, ಚಿತ್ರತಂಡ ಈಗಾಗಲೇ ಪರಿಣಿತಿ ಛೋಪ್ರಾ ಅವರನ್ನು ಸಂಪರ್ಕಿಸಿದ್ದು ಯಾವ ಸಿನಿಮಾವನ್ನು ರೀಮೇಕ್ ಮಾಡಲಾಗುತ್ತಿದೆ ಎಂಬ ವಿಚಾರ ಮಾತ್ರ ರಿವೀಲ್ ಆಗಿಲ್ಲ. ಒಂದು ವೇಳೆ ಪರಿಣಿತಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರೆ ವರುಣ್ ಜೊತೆ ನಾಯಕಿಯಾಗಿ ನಟಿಸಲಿರುವ ಮೊದಲ ಸಿನಿಮಾ ಇದಾಗಲಿದೆ. ಇದಕ್ಕೂ ಮುನ್ನ 2016 ರಲ್ಲಿ ಬಿಡುಗಡೆಯಾದ 'ಡಿಶುಮ್' ಚಿತ್ರದಲ್ಲಿ ವರುಣ್ ಹಾಗೂ ಪರಿಣಿತಿ ಛೋಪ್ರಾ ತೆರೆ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸಿನಿಮಾಗೆ ಬರುವುದಕ್ಕಿಂತ ಮುಂಚೆ ನಾನು ಅಪ್ಪು ಸರ್ ಅಭಿಮಾನಿ: ಸೋನುಗೌಡ
ಪರಿಣಿತಿ ಛೋಪ್ರಾ ಕೊನೆಯ ಬಾರಿಗೆ ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ದಿಬಾಕರ್ ಬ್ಯಾನರ್ಜಿ ನಿರ್ದೇಶನದಲ್ಲಿ ಪರಿಣಿತಿ ಹಾಗೂ ಅರ್ಜುನ್ ಕಪೂರ್ ನಟಿಸಿರುವ ಸಂದೀಪ್ ಔರ್ ಪಿಂಕಿ ಫರಾರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯಕ್ಕೆ ಪರಿಣಿತಿ ಛೋಪ್ರಾ ರಣಬೀರ್ ಜೊತೆ ಅನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಸಂದೀಪ್ ರೆಡ್ಡಿ ವೆಂಗ ನಿರ್ದೇಶಿಸುತ್ತಿದ್ದು ಚಿತ್ರೀಕರಣ ಲಂಡನ್ನಲ್ಲಿ ನಡೆಯುತ್ತಿದೆ.