ETV Bharat / sitara

ಪದ್ಮಾವತ್​ ರಿಲೀಸ್​ ಆಗಿ 3 ವರ್ಷ: ಶೂಟಿಂಗ್​ನಲ್ಲಿ​ ದೀಪಿಕಾ ಕಣ್ಣೀರಿಟ್ಟ ವಿಡಿಯೋ ಹಂಚಿಕೊಂಡ ಬನ್ಸಾಲಿ - ಸಂಜಯ್ ಲೀಲಾ ಬನ್ಸಾಲಿ ಪ್ರೊಡಕ್ಷನ್ ಹೌಸ್ ಲೇಟೆಸ್ಟ್​ ನ್ಯೂಸ್​

'ಪದ್ಮಾವತ್'‌ನ ಮೂರನೇ ವಾರ್ಷಿಕೋತ್ಸವದ ಹಿನ್ನೆಲೆ ಬನ್ಸಾಲಿ ಪ್ರೊಡಕ್ಷನ್ಸ್ ಪದ್ಮಾವತಿಯ ಶೌರ್ಯ ಮತ್ತು ಅನುಗ್ರಹ, ಯೋಧ ರಾಜ ರತನ್ ಸಿಂಗ್ ಕುರಿತಾದ ಮೂರು ವೀಡಿಯೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ. ಅದರಲ್ಲಿನ ಒಂದು ವಿಡಿಯೋದಲ್ಲಿ ಶೂಟಿಂಗ್​ನ ಕೊನೆಯ ದಿನ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್ ಅವರು ಸೆಟ್‌ನಲ್ಲಿ ಮಾತನಾಡಿದ ದೃಶ್ಯಗಳಿವೆ.

BTS video shows Deepika tearing up on last day of shoot
ಶೂಟಿಂಗ್​ ಕೊನೆಯ ದಿನ ಕಣ್ಣೀರಿಟ್ಟ ದೀಪಿಕಾ ವಿಡಿಯೋ ಹಂಚಿಕೊಂಡ ಬನ್ಸಾಲಿ
author img

By

Published : Jan 25, 2021, 8:13 PM IST

ಹೈದ್ರಾಬಾದ್: ಬಾಲಿವುಡ್​ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ 2018ರ ಬ್ಲಾಕ್​ ಬಸ್ಟರ್​ ಚಿತ್ರ ಪದ್ಮಾವತ್ ಸಿನಿಮಾದ ಅನ್​ಸೀನ್​ ತುಣುಕನ್ನು ತಮ್ಮ ಪ್ರೊಡಕ್ಷನ್ ಹೌಸ್​ನ ಸೋಷಿಯಲ್ ಮೀಡಿಯಾ ಪೇಜ್​ನಲ್ಲಿ ಹಂಚಿಕೊಂಡಿದ್ದಾರೆ.

ಬನ್ಸಾಲಿಯವರು ಸೋಷಿಯಲ್ ಮೀಡಿಯಾ ಖಾತೆ ಹೊಂದಿಲ್ಲದಿದ್ರೂ, ಅವರ ಪ್ರೊಡಕ್ಷನ್ ಹೌಸ್‌ನ ಇನ್‌ಸ್ಟಾಗ್ರಾಮ್ ಅಕೌಂಟ್​​ನಲ್ಲಿ, ಪದ್ಮಾವತ್​ ಸೆಟ್​ನಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಅವರು ಶೂಟಿಂಗ್​ನ ಒಂದು ವರ್ಷದ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ದೀಪಿಕಾ, "ನಾನು ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಯಾಗುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ, ಈಗ ನಾನು ಅವರೊಂದಿಗೆ ಮೂರು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ. ಇನ್ನು ನಟ ರಣವೀರ್​ ವಿಡಿಯೋದಲ್ಲಿ ಅಳುವುದು ಕಂಡುಬರುತ್ತದೆ. ಏಕೆಂದರೆ ಅವರು ಪದ್ಮಾವತ್​ ಚಿತ್ರಕ್ಕಾಗಿ ಶ್ರಮಿಸಿದ ಇಡೀ ಕಲಾವಿದರು ಮತ್ತು ಮತ್ತು ಸಿಬ್ಬಂದಿಗೆ ಧನ್ಯವಾದ ಹೇಳುತ್ತಾ ಭಾವುಕರಾಗಿರುವುದು ಕಂಡುಬರುತ್ತದೆ. ಹಾಗೆಯೇ ರಣವೀರ್​ ಪ್ರೊಡಕ್ಷನ್​ ಟೀಮ್​ ಅನ್ನು ಉದ್ದೇಶಿಸಿ, "ನೀವು ಪದ್ಮಾವತ್ ಸಿನಿಮಾ ಮೇಕಿಂಗ್​ನ ಭಾಗವಾಗಿದ್ದೀರಿ ಎಂದು ಹೇಳಲು ಹೆಮ್ಮೆಯಾಗುತ್ತದೆ.'' ಎಂದು ಹೇಳಿದ್ದಾರೆ.

ಕೆಲವು ರಾಜಕೀಯ ವಿರೋಧಗಳ ನಡುವೆಯೂ 2018 ರಲ್ಲಿ ತೆರೆಕಂಡ ಪದ್ಮಾವತ್​ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿತ್ತು.

ಇದನ್ನೂ ಓದಿ:ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಆರ್​​ಆರ್​​ಆರ್'​​ ಬಿಡುಗಡೆಗೆ ದಿನಾಂಕ ಫಿಕ್ಸ್​​​​​​​​​​​​​​​​​​​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.