ನವದೆಹಲಿ : ಹೊಸ ವರ್ಷದಂದು ದಿವಂಗತ ತಂದೆ ಮತ್ತು ನಟ ಇರ್ಫಾನ್ ಖಾನ್ ಅವರನ್ನು ನೆನಪಿಸಿಕೊಂಡ ಪುತ್ರ ಬಾಬಿಲ್ ಖಾನ್, ತಂದೆ-ಮಗನ ಬಾಂಧವ್ಯವನ್ನು ಸೆರೆಹಿಡಿದಿರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಾಬಿಲ್ ತನ್ನ ದಿ. ತಂದೆಯೊಂದಿಗಿರುವ ಎರಡು ಕ್ಯಾಂಡಿಡ್ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಇಬ್ಬರೂ ದಣಿದಂತೆ ಕಾಣುತ್ತಿದ್ದು, ಹಾಸಿಗೆ ಮೇಲೆ ನಿದ್ರಿಸುತ್ತಿದ್ದಾರೆ.
ಎರಡನೆಯ ಚಿತ್ರದಲ್ಲಿ ಇರ್ಫಾನ್ ಮತ್ತು ಅವರ ಮಗನ ನಡುವಿನ ಅಮೂಲ್ಯ ಕ್ಷಣವನ್ನು ಸೆರೆಹಿಡಿದಿದೆ. ಯಾಕೆಂದರೆ ಇಬ್ಬರ ಸಂತೋಷವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ.
- " class="align-text-top noRightClick twitterSection" data="
">
ಶೀರ್ಷಿಕೆಯಲ್ಲಿ, "ನೀವು ಇಲ್ಲದೆ ಮುಂದಿನದಕ್ಕೆ ಪ್ರಯಾಣ, ಇನ್ನೂ ನಿಮ್ಮ ಸಹಾನುಭೂತಿಯಿಂದ. ಸಾರ್ವಜನಿಕರಿಗೆ ಹೊಸ ವರ್ಷದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು, 2021ರಲ್ಲಿ ಬಿಡುಗಡೆಯಾಗಲಿರುವ ತನ್ನ ತಂದೆ ಇರ್ಫಾನ್ ಖಾನ್ ಅವರ ಕೊನೆಯ ಚಿತ್ರ 'ದಿ ಸಾಂಗ್ ಆಫ್ ದಿ ಸ್ಕಾರ್ಪಿಯಾನ್ಸ್' ಬಗ್ಗೆ ಬಾಬಿಲ್ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ನಟ ಇರ್ಫಾನ್ ಖಾನ್ 2020ರ ಏಪ್ರಿಲ್‌ನಲ್ಲಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಅಪರೂಪದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಿಧನರಾಗಿದ್ದರು.