ETV Bharat / sitara

ಸಡಕ್​-2 ಟ್ರೈಲರ್​ಗೆ ಲೈಕ್​ಗಿಂತ ದುಪ್ಪಟ್ಟು ಡಿಸ್​ಲೈಕ್​: ಸಂಜಯ್​ ಕ್ಷಮೆಯಾಚಿಸಿದ ಟ್ರೋಲಿಗರು - ಸಡಕ್ 2 ಟ್ರೈಲರ್ ಡಿಸ್​ಲೈಕ್​

ಮಹೇಶ್ ಭಟ್ ನಿರ್ದೇಶನದ ಸಡಕ್ 2 ಚಿತ್ರದ ಟ್ರೈಲರ್ ಜೂನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ನಿನ್ನೆ ಚಿತ್ರದ ಟ್ರೈಲರ್ ಸಹ ಬಿಡುಗಡೆ ಆಗಿದ್ದು, ಟ್ರೋಲಿಗರ ಕೆಂಗಣ್ಣಿಗೆ ಗರಿಯಾಗಿದೆ. ಯೂಟ್ಯೂಬ್‌ನಲ್ಲಿ ಹೆಚ್ಚಿನ ನೆಟಿಜನ್‌ಗಳು ಥಂಬ್ಸ್ ಡೌನ್ ಬಟನ್ ಒತ್ತಿದ್ದಾರೆ. ಆದರೆ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ನಟ ಸಂಜಯ್ ದತ್‌ಗೆ ಟ್ರೋಲರ್‌ಗಳು ಕ್ಷಮೆಯಾಚಿಸಿದ್ದಾರೆ.

dsds
ಸಡಕ್​-2 ಟ್ರೈಲರ್​ಗೆ ಲೈಕ್​ಗಿಂತ ದುಪ್ಪಟ್ಟು ಡಿಸ್​ಲೈಕ್
author img

By

Published : Aug 13, 2020, 11:57 AM IST

ಮುಂಬೈ: ಮಹೇಶ್ ಭಟ್ ನಿರ್ದೇಶನದ ಸಡಕ್ 2 ಚಿತ್ರದ ಟ್ರೈಲರ್ ಬುಧವಾರ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಟ್ರೈಲರ್​ಗೆ ಲೈಕ್​ ಸಂಖ್ಯೆಗಿಂತ ಡಿಸ್​ಲೈಕ್​ ಸಂಖ್ಯೆಯೇ ಹೆಚ್ಚಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ ಚಿತ್ರದಲ್ಲಿ ನಟಿಸಿರುವ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಂಜಯ್ ದತ್‌ಗೆ ಕ್ಷಮೆಯಾಚಿಸುವುದರೊಂದಿಗೆ ಅನೇಕ ನೆಟಿಜನ್‌ಗಳು ಟ್ರೈಲರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಮಹೇಶ್ ಭಟ್ ಚಿತ್ರದಲ್ಲಿ ಅವರ ಮಕ್ಕಳಾದ ಪೂಜಾ ಮತ್ತು ಆಲಿಯಾ ಭಟ್ ಜೊತೆಗೆ ಆದಿತ್ಯ ರಾಯ್ ಕಪೂರ್, ಬಿಗ್ ವಿಗ್ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಕಿರಿಯ ಸಹೋದರ ನಟಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಈ ಚಿತ್ರವು ಬಾಲಿವುಡ್​ನ ಸ್ವಜನಪಕ್ಷಪಾತಕ್ಕೆ ಉದಾಹರಣೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳು ಕೇಳಿಬರುತ್ತಿವೆ.

  • " class="align-text-top noRightClick twitterSection" data="">

ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯೊಂದಿಗೆ ಮಹೇಶ್ ಭಟ್ ಸಂಪರ್ಕದ ಬಗ್ಗೆ ಅನೇಕ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಶಾಂತ್​ ತಂದೆ ಕೆ.ಕೆ. ಸಿಂಗ್ ಎಫ್‌ಐಆರ್‌ನಲ್ಲಿ ಈ ಬಗ್ಗೆ ಆರೋಪಿಸಿದ್ದಾರೆ. ಸಡಕ್ 2 ಟ್ರೈಲರ್ ಬಿಡುಗಡೆಯಾದ ಕೂಡಲೇ ಇಷ್ಟಪಡದವರ ಮೇಮ್ಸ್​ಗಳು ದಿನವಿಡೀ ಟ್ವಿಟ್ಟರ್​ ಮತ್ತು ಫೇಸ್‌ಬುಕ್‌ಗಳಲ್ಲಿ ತುಂಬಿ ಹೋಗಿವೆ.

ಅದೇನೆ ಇರಲಿ, ನೆಟಿಜನ್​ಗಳು ಭಟ್ ಕುಟುಂಬವನ್ನು ಟಾರ್ಗೆಟ್​ ಮಾಡಿದ್ದರೆ, ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿರುವ ನಟ ಸಂಜಯ್ ದತ್ ಬಗ್ಗೆ ಸಹಾನುಭೂತಿ ತೋರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.