ಸೆಲಬ್ರಿಟಿಗಳ ಬಗ್ಗೆ ನೆಟಿಜನ್ಗಳು ಆಗ್ಗಾಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಕೆಲವು ಸೆಲಬ್ರಿಟಿಗಳ ವರ್ತನೆಯನ್ನು ಜನರು ಪ್ರಶಂಸಿಸಿದರೆ ಮತ್ತೆ ಕೆಲವು ಸೆಲಬ್ರಿಟಿಗಳ ವರ್ತನೆಗೆ ಟೀಕೆಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನರು ಚರ್ಚಿಸುತ್ತಾರೆ. ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು ನೆಟಿಜನ್ಸ್ ದುರಹಂಕಾರಿ ಎಂದು ಬೈಯ್ಯುತ್ತಿದ್ದಾರೆ.
ಹೆಚ್ಚು ಕಾಲ ಶೂಟಿಂಗ್ನಲ್ಲಿ ಬ್ಯುಸಿ ಇರುವ ಕರೀನಾ ಕಪೂರ್, ನಿನ್ನೆ ಹೋಳಿ ಆಚರಣೆ ಇದ್ದಿದ್ದರಿಂದ ಶೂಟಿಂಗ್ನಿಂದ ಸ್ವಲ್ಪ ಸಮಯ ಬ್ರೇಕ್ ಪಡೆದು ಪುತ್ರ ತೈಮೂರ್ ಜೊತೆ ಸೇರಿ ವಿಶ್ರಾಂತಿ ಪಡೆಯಲು ಹೊರಗಡೆ ಬಂದಿದ್ದರು. ಈ ವೇಳೆ ಕರೀನಾರನ್ನು ನೋಡಿದ ಇಬ್ಬರು ಮಹಿಳಾ ಅಭಿಮಾನಿಗಳು ಆಕೆಗೆ ಹ್ಯಾಪಿ ಹೋಳಿ ಎಂದು ಶುಭ ಕೋರಿದ್ದಾರೆ. ಆದರೆ ಕರೀನಾ ಮಾತ್ರ ಅಭಿಮಾನಿಗಳ ಕಡೆ ಸೌಜನ್ಯಕ್ಕಾದರೂ ತಿರುಗಿ ನೋಡಲಿಲ್ಲ. ಅವರಿಗೆ ವಿಶ್ ಕೂಡಾ ಮಾಡಲಿಲ್ಲ. ಆಸೆಯಿಂದ ಕರೀನಾರನ್ನೇ ಫಾಲೋ ಮಾಡಿಕೊಂಡು ಬಂದ ಯುವತಿಯರು ಫೋಟೋಗಾಗಿ ಆಕೆ ಪಕ್ಕ ಬಂದು ನಿಂತರು. ಆ ವೇಳೆ ಕರೀನಾ ಒಬ್ಬಾಕೆಯೊಂದಿಗೆ ಏರು ಧ್ವನಿಯಲ್ಲಿ ಮಾತನಾಡುತ್ತಾ, ಫೋಟೋಗೆ ನಿಂತರೋ ಇಲ್ಲವೋ ಎಂಬಂತೆ 2 ಸೆಕೆಂಡ್ ನಿಂತು ಏನೂ ಪ್ರತಿಕ್ರಿಯಿಸದೆ ಅಲ್ಲಿಂದ ಹೊರಟು ಹೋಗಿದ್ದಾರೆ.
- " class="align-text-top noRightClick twitterSection" data="
">
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕರೀನಾ ನಡವಳಿಕೆಗೆ ನೆಟಿಜನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಭಿಮಾನಿಗಳ ಜೊತೆ ಕರೀನಾ ಆ ರೀತಿ ನಡೆದುಕೊಂಡದ್ದು ಸರಿಯಲ್ಲ. ಬಾಲಿವುಡ್ ನಟಿಯರಲ್ಲೇ ಕರೀನಾ ಬಹಳ ದುರಹಂಕಾರಿ. ಕೆಲವು ದಿನಗಳ ನಂತರ ನಿಮ್ಮ ಸೌಂದರ್ಯ ನಾಶವಾದಾಗ ನೀವು ದೊಡ್ಡ ಪಾಠ ಕಲಿಯುತ್ತೀರ ' ಎಂದೆಲ್ಲಾ ನೆಟಿಜನ್ಗಳು ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಮಾತ್ರ ಆ ಮಹಿಳಾ ಅಭಿಮಾನಿಗಳನ್ನೇ ಬೈದು ಕಮೆಂಟ್ ಮಾಡಿದ್ದಾರೆ. 'ಸಿನಿಮಾ ತಾರೆಯರಿಗೆ ಪ್ರೈವೆಸಿ ದೊರೆಯುವುದೇ ಕಷ್ಟ. ಅಂತದ್ದರಲ್ಲಿ ಸಿಗುವ ಸ್ವಲ್ಪ ಸಮಯವನ್ನು ಅಭಿಮಾನಿಗಳು ಕಸಿಯುವುದಕ್ಕೆ ನೋಡಿದರೆ ಸ್ಟಾರ್ಗಳು ತಾಳ್ಮೆ ಕಳೆದುಕೊಳ್ಳುತ್ತಾರೆ ' ಎಂದು ಕಮೆಂಟ್ ಮಾಡಿದ್ದಾರೆ.