ETV Bharat / sitara

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಟೈಗರ್ ಶ್ರಾಫ್-ದಿಶಾ ವಿರುದ್ಧ ಪ್ರಕರಣ ದಾಖಲು - ದಿಶಾ ಪಟಾನಿ ವಿರುದ್ಧ ಕೇಸ್​ ದಾಖಲು

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಮಧ್ಯಾಹ್ನ 2 ಗಂಟೆಯ ಮೇಲೆಯೂ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುತ್ತಿದ್ದ ಆರೋಪದಡಿ ಬಾಲಿವುಡ್​ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಟಾನಿ ವಿರುದ್ಧ ಪ್ರಕರಣ ದಾಖಲಾಗಿದೆ.

Bandra
ಟೈಗರ್ ಶ್ರಾಫ್ - ದಿಶಾ ಪಟಾನಿ
author img

By

Published : Jun 3, 2021, 8:59 AM IST

ಮುಂಬೈ (ಮಹಾರಾಷ್ಟ್ರ): ಕೋವಿಡ್​ ಲಾಕ್​ಡೌನ್​ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಬಾಲಿವುಡ್​ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಟಾನಿ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಿನ್ನೆ ಮಧ್ಯಾಹ್ನ 2 ಗಂಟೆಯ ಮೇಲೆ ಬ್ಯಾಂಡ್‌ಸ್ಟ್ಯಾಂಡ್ ಬಳಿ ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ತಿರುಗಾಡುತ್ತಿರುವುದು ಕಂಡುಬಂದಿದೆ. ಯಾವುದೇ ಸರಿಯಾದ ಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಸ್​ ದಾಖಲಿಸಿಕೊಳ್ಳಲಾಗಿದೆ. ಆದರೆ ಇದು ಜಾಮೀನು ಸಹಿತ ಅಪರಾಧವಾಗಿದ್ದರಿಂದ ಇವರನ್ನು ಬಂಧಿಸಿಲ್ಲ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಕಷ್ಟದಲ್ಲಿ ಸಹಾಯ ಮಾಡಿದ ನಿಜ ಜೀವನದ ರಿಯಲ್ ಸ್ಟಾರ್ಸ್ ಇವ್ರು

ಕೋವಿಡ್​ ನಿಯಂತ್ರಿಸಲು ರಾಜ್ಯದಲ್ಲಿ ಹೇರಲಾಗಿರುವ ಲಾಕ್​ಡೌನ್​ಅನ್ನು 15 ದಿನಗಳವರೆಗೆ ವಿಸ್ತರಿಸಿರುವ ಮಹಾರಾಷ್ಟ್ರ ಸರ್ಕಾರ, ಪಾಸಿಟಿವಿಟಿ ರೇಟ್ ಕಡಿಮೆ ಇರುವ ಕೆಲ ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಅಗತ್ಯ ಸಂಚಾರಕ್ಕೆ ಅನುಮತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.