ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಇತ್ತೀಚಿನ ಮ್ಯೂಸಿಕ್ ವಿಡಿಯೋ 'ಪಟ್ಲಿ ಕಮರಿಯಾ'ಗೆ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
- " class="align-text-top noRightClick twitterSection" data="
">
ಟಿ-ಸೀರೀಸ್‌ನ ಇತ್ತೀಚಿನ ಮ್ಯೂಸಿಕ್ ವಿಡಿಯೋವಾದ 'ಪಟ್ಲಿ ಕಮರಿಯಾ' ಮಂಗಳವಾರ ಬಿಡುಗಡೆಯಾಗಿದ್ದು, ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಇದೀಗ ಕೆಜಿಎಫ್ ಬೆಡಗಿ ಮೌನಿ ರಾಯ್, 'ಪಟ್ಲಿ ಕಮರಿಯಾ' ಮ್ಯೂಸಿಕ್ಗೆ ಡ್ಯಾನ್ಸ್ ಮಾಡುವ ಸಣ್ಣ ಕ್ಲಿಪ್ವೊಂದನ್ನು ತಮ್ಮ ಇನ್ಸ್ಟಾ ಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗ್ತಿದೆ.
ಈ ವಿಡಿಯೋವನ್ನು ದುಬೈನಲ್ಲಿ ಚಿತ್ರೀಕರಿಸಲಾಗಿದ್ದು, ಅರವಿಂದರ್ ಖೈರಾ ನಿರ್ದೇಶಿಸಿದ್ದಾರೆ. ಈ ಹಾಡನ್ನು ತಾನಿಷ್ ಬಾಗ್ಚಿ ಬರೆದು ಸಂಯೋಜಿಸಿದ್ದಾರೆ.