ಅಪಹರಣ್ 2 ಸ್ಕ್ರೀನಿಂಗ್ನಲ್ಲಿ ಮಿಂಚಿದ ಭೋಜ್ಪುರಿ ನಟಿ.. ಮೊನಾಲಿಸಾ ಬೋಲ್ಡ್ ಲುಕ್ಗೆ ಪಡ್ಡೆ ಹೈಕ್ಳು ಫಿದಾ! - ಮೊನಾಲಿಸಾ ಹಾಟ್ ಫೋಟೋ
ಓಟಿಟಿ ಪ್ಲಾಟ್ ಫಾರ್ಮ್ನಲ್ಲಿ ಅಪಹರಣ್ - 2 ವೆಬ್ ಸಿರೀಸ್ ಚಿತ್ರ ಬಿಡುಗಡೆಯಾಗಿದ್ದು, ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ನಟಿ ಮೊನಾಲಿಸಾ ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ.
ಮುಂಬೈ: ನಟಿ ಮೊನಾಲಿಸಾ ಅವರು ತಮ್ಮ ಲುಕ್ ಬಗ್ಗೆ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇತ್ತೀಚೆಗೆ, ನಟಿ 'ಅಪಹರಣ್ 2' ವೆಬ್ ಸರಣಿಯ ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ನಟಿ ಬೋಲ್ಡ್ ಲುಕ್ನಲ್ಲಿ ಕಂಡು ಬಂದಿದ್ದು, ಆಕೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅಪಹರಣ್ 2 ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಹಲವಾರು ಬಾಲಿವುಡ್ ನಟ - ನಟಿಯರು ಭಾಗಿಯಾಗಿದ್ದರು. ಆದರೆ, ಎಲ್ಲರೂ ಕಣ್ಣು ಮಾತ್ರ ನಟಿ ಮೊನಾಲಿಸಾ ಮೇಲಿಯೇ ಇತ್ತು. ಮೊನಾಲಿಸಾ ಆಫ್ ಶೋಲ್ಡರ್ ಫ್ಲೋರಲ್ ಟಾಪ್ ಮತ್ತು ಗ್ರೀನ್ ಸೈಡ್‌ಕಟ್ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಟಿ ಹೀಲ್ಸ್ ಧರಿಸಿದ್ದಾರೆ. ನಟಿಯ ತನ್ನ ಈ ನ್ಯೂ ಲುಕ್ನಲ್ಲಿ ಸಖತ್ ಬೋಲ್ಡ್ ಆಗಿ ಕಾಣುತ್ತಿದ್ದಾರೆ.
ಓದಿ: ಹೋಳಿ ಸಂಭ್ರಮ ದುಪ್ಪಟ್ಟುಗೊಳಿಸುವ ಟಾಪ್ 5 ಸಿಹಿ ತಿನಿಸು, ಪಾನೀಯಗಳು..
ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ನಟಿ ಮೊನಾಲಿಸಾ ತನ್ನ ಪತಿ ವಿಕ್ರಾಂತ್ ಜೊತೆ ಬಂದಿದ್ದಾರೆ. ಈ ವೇಳೆ, ಕ್ಯಾಮೆರಾಗೆ ಪೋಸ್ ನೀಡಿದರು. ಇನ್ನು ವಿಕ್ರಾಂತ್ ನಿಯಾನ್ ಶರ್ಟ್ ಮತ್ತು ಕಪ್ಪು ಜೀನ್ಸ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ನಟಿಯ ಬೋಲ್ಡ್ ನೆಸ್ ನೋಡಿ ಅಭಿಮಾನಿಗಳ ಎದೆ ಝಲ್ ಎನ್ನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿಯ ಬೋಲ್ಡ್ ಫೋಟೋಗಳು ವೈರಲ್ ಆಗ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊನಾಲಿಸಾ ಪತಿ ವಿಕ್ರಾಂತ್ ಸಿಂಗ್ ರಜಪೂತ್ ಜೊತೆ 'ಸ್ಮಾರ್ಟ್ ಜೋಡಿ' ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ, ನಟಿ 'ಧಾಪಾ' ಮತ್ತು 'ರಾತ್ರಿ ಕೇ ಯಾತ್ರಿ 2' ವೆಬ್ ಸೀರಿಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಕ್ತಾ ಕಪೂರ್ ಅವರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಲ್ಟ್ ಬಾಲಾಜಿಯಲ್ಲಿ ಅಪರಾಧ ಸರಣಿ ಆಧಾರಿತ ಅಪಹರಣ್ ವೆಬ್ ಸಿರೀಸ್ 2018 ತೆರೆ ಕಂಡಿತ್ತು. ಅದರ ಎರಡನೇ ಸೀಸನ್ ಈಗ ರಿಲೀಸ್ ಆಗಿದೆ. ಒಟ್ಟು 11 ಕಂತುಗಳ ಎಪಿಸೋಡ್ ಇರುವ ಅಪಹರಣ್ 2 ವೆಬ್ ಸಿರೀಸ್ Voot ಆ್ಯಪ್ನಲ್ಲಿ ನೋಡಬಹುದಾಗಿದೆ. ಈ ಚಿತ್ರದಲ್ಲಿ ಅರುಣೋದಯ್ ಸಿಂಗ್, ನಿಧಿ ಸಿಂಗ್, ಸನಂದ್ ವರ್ಮಾ, ಸ್ನೇಹಲ್ ದೀಕ್ಷಿತ್ ಮೆಹ್ರಾ ಮತ್ತು ಜೀತೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.