ಹೈದರಾಬಾದ್: ನಟಿ-ಉದ್ಯಮಿ ಮತ್ತು ಫಿಟ್ನೆಸ್ ಉತ್ಸಾಹಿ ಮಂದಿರಾ ಬೇಡಿ, ತನ್ನ ಪತಿ ರಾಜ್ ಕೌಶಲ್ ನಿಧನದ ಕೆಲ ದಿನಗಳ ಬಳಿಕ ಇದಿಗ ಸಾಮಾನ್ಯ ಜೀವನ ನಡೆಸಲು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಮಂದಿರಾ ತಮ್ಮ ಭಾವನಾತ್ಮಕ ಸವಾಲಿನ ಸಮಯದಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ ಎಂಬುದರ ಕುರಿತು ಟ್ವಿಟರ್ನಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
"ಜೀವನವನ್ನು ಮುಂದಕ್ಕೆ ಮತ್ತು ಮೇಲಕ್ಕೆ ತೆಗೆದುಕೊಳ್ಳುವ ಸಮಯ..." ಎಂದು ಮಂದಿರಾ ಟ್ವೀಟ್ ಮಾಡಿದ್ದಾರೆ.
-
Onwards and upwards. 🙏🏽 Time to take life on. 👊🏽
— mandira bedi (@mandybedi) August 3, 2021 " class="align-text-top noRightClick twitterSection" data="
">Onwards and upwards. 🙏🏽 Time to take life on. 👊🏽
— mandira bedi (@mandybedi) August 3, 2021Onwards and upwards. 🙏🏽 Time to take life on. 👊🏽
— mandira bedi (@mandybedi) August 3, 2021
ತನ್ನ ಗಂಡನ ಸಾವಿನ ಒಂದು ತಿಂಗಳ ನಂತರ ತಾನು ಕೆಲಸಕ್ಕೆ ಮರಳುತ್ತಿದ್ದಾಗ ತನ್ನ ಚಿತ್ರವನ್ನು ಮಂದಿರಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, "ಇಂದು ಕೆಲಸಕ್ಕೆ ಹಿಂತಿರುಗಿದ್ದೇನೆ" ಎಂದು ಬರೆದಿದ್ದಾರೆ.
- " class="align-text-top noRightClick twitterSection" data="
">
ಮಂದಿರಾ ಪತಿ ಚಲನಚಿತ್ರ ನಿರ್ಮಾಪಕ ರಾಜ್ ಕೌಶಲ್ ಜೂನ್ 30ರಂದು ತಮ್ಮ 49ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ರಾಜ್ ಮತ್ತು ಮಂದಿರಾ 1999ರಲ್ಲಿ ವಿವಾಹವಾಗಿದ್ದು, ದಂಪತಿಗೆ ವೀರ್ ಎಂಬ ಮಗ ಹಾಗೂ 2020ರಲ್ಲಿ ದತ್ತು ಪಡೆದ ತಾರಾ ಎಂಬ ಹೆಣ್ಣು ಮಗುವಿದೆ.