ETV Bharat / sitara

ಜೂಜಾಟ ಪ್ರಕರಣದಡಿ ನಟಿಯ ಪತಿ ಬಂಧನ, ಜಾಮೀನು - ನಟಿ

ಜೂಜಾಟ ಪ್ರಕರಣದಡಿ ಬಂಧಿತರಾಗಿದ್ದ ಬಾಲಿವುಡ್​ ಸಿನಿಮಾ ನಿರ್ಮಾಪಕ ಹಿಮಾಲಯ ದಾಸನಿಗೆ ಬೇಲ್ ಸಿಕ್ಕಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 3, 2019, 7:43 PM IST

ಮುಂಬೈ: ಜೂಜಾಟ​ ಪ್ರಕರಣದಡಿ 'ಮೈನೆ ಪ್ಯಾರ್​ ಕಿಯಾ' ಸಿನಿಮಾ ನಟಿ ಭಾಗ್ಯಶ್ರೀ ಪತಿ ಹಿಮಾಲಯ ದಾಸನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಬೋಲಿ ಪೊಲೀಸರು ಇತ್ತೀಚಿಗಷ್ಟೆ ಜೂಜಾಟದ ಬೃಹತ್​ ಜಾಲವೊಂದನ್ನು ಬೇಧಿಸಿದ್ದರು. ಈ ಪ್ರಕರಣದಡಿ ಬಂಧಿತರ ವಿಚಾರಣೆ ವೇಳೆ ಹಿಮಾಲಯನ ಕೈವಾಡ ಇರುವುದು ತಿಳಿದು ಬಂದಿತ್ತು. ಈ ಹಿನ್ನೆಲೆ ನಿನ್ನೆ ಈತನನ್ನು ಬಂಧಿಸಿದ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು. ಸದ್ಯಕ್ಕೆ ಹಿಮಾಲಯ ಬೇಲ್​ ತೆಗೆದುಕೊಂಡು ಹೊರಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮಿ ಆಗಿರುವ ದಾಸನಿ 1992ರಲ್ಲಿ ಪಾಯಲ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದಿದ್ದರು. ನಂತರ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.