ETV Bharat / sitara

ಹೊಸ ನೃತ್ಯ ಪ್ರಾಕಾರದತ್ತ ಆಕರ್ಷಿತರಾದ ಧಕ್ ಧಕ್ ಹುಡುಗಿ ಮಾಧುರಿ - ಕೆ ಪಾಪ್ ನೃತ್ಯ ಪ್ರಾಕಾರ

ಚಿಕ್ಕ ವಯಸ್ಸಿನಲ್ಲೇ ಕಥಕ್ ಕಲಿಯಲು ಆರಂಭಿಸಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ಅನೇಕ ಸಿನಿಮಾಗಳಲ್ಲಿ ತಾವು ಎಂಥ ಡ್ಯಾನ್ಸರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೆ-ಪಾಪ್ ಎಂಬ ಹೊಸ ನೃತ್ಯ ಪ್ರಾಕಾರದತ್ತ ಆಕರ್ಷಿತರಾಗಿರುವ ಮಾಧುರಿ ಡ್ಯಾನ್ಸ್ ದಿವಾನೆ ಸೀಸನ್ 3 ರಲ್ಲಿ ಜಡ್ಜ್ ಆಗಿ ಕೆಲಸ ಮಾಡಲಿದ್ದಾರೆ.

Madhuri
ಮಾಧುರಿ
author img

By

Published : Feb 18, 2021, 1:21 PM IST

ತೇಜಾಬ್, ಪುಕಾರ್, ದೇವ್​ದಾಸ್​, ದಿಲ್​ ತೊ ಪಾಗಲ್ ಹೈ, ಆಜಾ ನಾಚ್​ ಲೇ ಸೇರಿ ಅನೇಕ ಹಿಂದಿ ಸಿನಿಮಾಗಳ ಮೂಲಕ ಮಾಧುರಿ ದೀಕ್ಷಿತ್ ತಾವು ಉತ್ತಮ ಡ್ಯಾನ್ಸರ್ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಆಕೆ ಕಥಕ್​ ನೃತ್ಯ ಕಲಾವಿದೆ ಕೂಡಾ. ಬಿಡುವಿನ ವೇಳೆಯಲ್ಲಿ ಮಾಧುರಿ ಮನೆಯಲ್ಲಿದ್ದಾಗ ನೃತ್ಯಾಭ್ಯಾಸ ಮಾಡುವುದನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಶುರುವಾಯ್ತು ಕ್ರೇಜ್....ಕಾರಿನ ಬಾನೆಟ್ ಮೇಲೂ 'ರಾಬರ್ಟ್' ದರ್ಬಾರ್​​..!

ನೃತ್ಯವೇ ನನ್ನ ಉಸಿರು ಎನ್ನುವ ಮಾಧುರಿ ಈಗ ಪ್ರಚಲಿತದಲ್ಲಿರುವ ಕೆ-ಪಾಪ್ ನೃತ್ಯ ಪ್ರಾಕಾರದತ್ತ ಬಹಳ ಆಕರ್ಷಿತರಾಗಿದ್ದಾರಂತೆ. ನಾವು ಪ್ರತಿದಿನ ನಾನಾ ಪ್ರಾಕಾರಗಳ ನೃತ್ಯವನ್ನು ನೋಡುತ್ತಿರುತ್ತೇವೆ. ಅದರಲ್ಲಿ ಕೆಲವು ಫ್ರೀ ಸ್ಟೈಲ್ ಡ್ಯಾನ್ಸ್ ಆಗಿರುತ್ತದೆ. ಮತ್ತೆ ಕೆಲವು ಪ್ರಯೋಗಾತ್ಮಕ ನೃತ್ಯ ಪ್ರಾಕಾರಗಳಾಗಿವೆ. ಯಾವ ಪ್ರಾಕಾರಗಳಾದರೂ ಅದು ನೋಡಲು ಬಹಳ ಚೆಂದ ಎಂದು ಹೇಳುವ ಮೂಲಕ ನೃತ್ಯದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಮಾಧುರಿ ತಮ್ಮ 3ನೇ ವಯಸ್ಸಿಗೆ ನೃತ್ಯ ಮಾಡಲು ಆರಂಭಿಸಿದರು. ಅಭಿಮಾನಿಗಳಿಂದ ಪ್ರೀತಿಯಿಂದ ಧಕ್ ಧಕ್ ಹುಡುಗಿ ಎಂದೇ ಕರೆಸಿಕೊಳ್ಳುವ ಮಾಧುರಿ, 80-90 ದಶಕದಲ್ಲಿ ತಮ್ಮ ನೃತ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಗಳಿಸಿದವರು. ತೇಜಾಬ್ ಚಿತ್ರದ ಏಕ್​ ದೋ ತೀನ್.., ಬೇಟಾ ಚಿತ್ರದ ಧಕ್ ಧಕ್.. ಯಾರಾನಾ ಚಿತ್ರದ ಮೇರಾ ಪಿಯಾ ಘರ್ ಆಯಾ, ದೇವ್​ದಾಸ್ ಚಿತ್ರದ ಮಾರ್ ಡಾಲಾ, ಪುಕಾರ್ ಚಿತ್ರದ ಕೇ ಸೆರಾ ಸೆರಾ, ಖಳ್ ನಾಯಕ್ ಚಿತ್ರದ ಚೋಲಿ ಕೆ ಪೀಚೆ ಕ್ಯಾ ಹೈ ಹಾಡುಗಳಲ್ಲಿ ಮಾಧುರಿ ದೀಕ್ಷಿತ್ ಸಿನಿಮಾದಲ್ಲಿ ಮಾಧುರಿ ಮನಮೋಹಕ ನೃತ್ಯವನ್ನು ನೋಡಬಹುದು. ಶೀಘ್ರದಲ್ಲೇ ಡ್ಯಾನ್ಸ್ ದಿವಾನೆ ಸೀಸನ್ 3 ರಲ್ಲಿ ಮಾಧುರಿ ದೀಕ್ಷಿತ್ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.