ಕಳೆದ ಜುಲೈ 29 ರಂದು 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಿವುಡ್ ನಟ ಸಂಜಯ್ ದತ್ಗೆ ಅಭಿಮಾನಿಗಳು ಶುಭ ಕೋರಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂಬ ವಿಚಾರ ಅಭಿಮಾನಿಗಳಿಗೆ ಹಾಗೂ ಸಂಜಯ್ ದತ್ ಕುಟುಂಬದವರಿಗೆ ಶಾಕ್ ನೀಡಿತ್ತು.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಜಯ ದತ್ಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂದು ತಿಳಿಯಿತು. ನಂತರ ಸ್ವಲ್ಪವೂ ತಡ ಮಾಡದೆ ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ದತ್ ಅಮೆರಿಕಾಗೆ ತೆರಳಿದರು. ಪತಿಗೆ ಕ್ಯಾನ್ಸರ್ ಇದೆ ಎಂದು ತಿಳಿಯುತ್ತಿದ್ದಂತೆ ಸಂಜಯ್ ದತ್ ಬಗ್ಗೆ ಸಕಾರಾತ್ಮಕ ಪೋಸ್ಟ್ ಹಂಚಿಕೊಂಡಿದ್ದ ಮಾನ್ಯತಾ ದತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ತಮ್ಮ ಹಳೆಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಮಾನ್ಯತಾ ದತ್, "ಭಯಕ್ಕೆ ಎರಡು ಅರ್ಥವಿದೆ. ಎಲ್ಲವನ್ನೂ ಮರೆತು ಮುನ್ನುಗ್ಗಿ ಅಥವಾ ಎಲ್ಲವನ್ನೂ ಎದುರಿಸಿ ಮತ್ತೆ ಮೈ ಕೊಡವಿ ಏಳಿ", ಆಯ್ಕೆ ನಿಮಗೆ ಬಿಟ್ಟದ್ದು" ಎಂದು ಬರೆದುಕೊಂಡಿದ್ದಾರೆ. ಆದರೆ ಮಾನ್ಯತಾ ಸಂಜಯ್ ದತ್ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಇದಕ್ಕೂ ಮುನ್ನ ಕೂಡಾ ಮಾನ್ಯತಾ ದತ್ ಸಂಜಯ್ ದತ್ ಆರೋಗ್ಯದ ಬಗ್ಗೆ ಪ್ರಾರ್ಥಿಸುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು.
ಸಂಜಯ್ ದತ್, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ದತ್ಗೆ ಕ್ಯಾನ್ಸರ್ ಇದ್ದು ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದ ಇತರ ಚಿತ್ರಗಳ ನಿರ್ಮಾಪಕರು ಸ್ವಲ್ಪ ಕಳವಳಗೊಂಡಿದ್ದು ನಿಜ. ಆದರೆ 'ಕೆಜಿಎಫ್-2' ನಲ್ಲಿ ಸಂಜಯ್ ದತ್ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ಒಂದು ದಿನದ ಚಿತ್ರೀಕರಣವಷ್ಟೇ ಬಾಕಿ ಇದೆ ಒಂದು ವೇಳೆ ಅದು ಇಲ್ಲದಿದ್ದರೂ ಚಿತ್ರಕ್ಕೆ ಏನೂ ತೊಂದರೆಯಾಗುವುದಿಲ್ಲ ಎಂದು ಚಿತ್ರತಂಡ ಪ್ರತಿಕ್ರಿಯಿಸಿದೆ.