ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಕಂಗನಾ ರಣಾವತ್ ಫೆ.16 ರಂದು ಏಕ್ತಾ ಕಪೂರ್ ನಿರ್ಮಾಣದ ಫಿಯರ್‌ಲೆಸ್ ರಿಯಾಲಿಟಿ ಶೋ ಲಾಕ್ ಅಪ್‌ನ ಟ್ರೈಲರ್ನನ್ನು ಅನಾವರಣಗೊಳಿಸಿದರು.
ಕಂಗನಾ ಟ್ರೈಲರ್ನನ್ನು ಹೋಸ್ಟ್ ಮಾಡಿದ ಬಳಿಕ ಮಾತನಾಡಿದ್ದು, ಸಂತೋಷವನ್ನು ವ್ಯಕ್ತಪಡಿಸುವುದರ ಜೊತೆಗೆ ಕಾರ್ಯಕ್ರಮದ ಪರಿಕಲ್ಪನೆಯ ಬಗ್ಗೆ ಮಾತನಾಡಿದರು. ಟ್ರೈಲರ್ ಬಿಡುಗಡೆಗೂ ಮುನ್ನ ಕಂಗನಾ ಮತ್ತು ಏಕ್ತಾ ಕಪೂರ್ ನವದೆಹಲಿಯ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದರು.
- " class="align-text-top noRightClick twitterSection" data="
">
ಈ ಟ್ರೈಲರ್ನನ್ನು ನೋಡಿದಾಗ ನಮ್ಮಲ್ಲಿ ಕುತೂಹಲ ಹೆಚ್ಚಾಗುತ್ತದೆ. ಅಲ್ಲದೇ ಇದನ್ನು ನಾನು ಅನಾವರಣಗೊಳಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇಂತಹ ವಿಶಿಷ್ಟ ಮತ್ತು ಅದ್ಭುತ ಪರಿಕಲ್ಪನೆಯೊಂದಿಗೆ OTT ವೇದಿಕೆಗೆ ಪದಾರ್ಪಣೆ ಮಾಡುತ್ತಿರುವುದರಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಕಂಗನಾ ಹೇಳಿದ್ದಾರೆ.
ಇದನ್ನೂ ಓದಿ: ಬಪ್ಪಿ ಲಹರಿ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ಕಾಜೋಲ್, ಅಲ್ಕಾ ಯಾಗ್ನಿಕ್
ಶೋದ ಟ್ರೈಲರ್‌ನಲ್ಲಿ ಕಂಗನಾ ಕೈಯಲ್ಲಿ ದೊಣ್ಣೆ ಹಿಡಿದು ತೀಕ್ಷ್ಣ ವರ್ತನೆ ತೋರಿದ್ದು ಕಂಡು ಬಂದಿದೆ. ಆಕೆ ಜೈಲಿನಲ್ಲಿ ಕೈಯಲ್ಲಿ ಕೋಲು ಹಿಡಿದು ಕೊಂಡು ಎಚ್ಚರಿಕೆ ನೀಡುತ್ತಿರುವುದನ್ನು ಕಾಣಬಹುದು. ಕಂಗನಾ ಒಂದು ಐಷಾರಾಮಿ, ವೆಲ್ವೆಟ್ ಸಿಂಹಾಸನದ ಮೇಲೆ ಐಷಾರಾಮಿ ಜೈಲಿನಲ್ಲಿ ಕುಳಿತಿರುವುದನ್ನು ಇಲ್ಲಿ ನಾವು ಗಮನಿಸಬಹುದಾಗಿದೆ.
ಅಲ್ಲದೇ 6 ವಿವಾದಾತ್ಮಕ ಸೆಲೆಬ್ರಿಟಿಗಳನ್ನು ತಿಂಗಳುಗಟ್ಟಲೆ ಲಾಕ್ ಅಪ್‌ನಲ್ಲಿ ಇರಿಸಲಾಗುತ್ತದೆ ಮತ್ತು ಅವರ ಸೌಕರ್ಯಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ಕಂಗನಾ ಟೀಸರ್‌ನಲ್ಲಿ ಹೇಳುತ್ತಾರೆ. ಫೆಬ್ರವರಿ 27 ರಿಂದ MX Player ಮತ್ತು Alt Balaji ನಲ್ಲಿ ಸಂಪೂರ್ಣವಾಗಿ ಉಚಿತವಾಗಿ. ಲಾಕ್‌ಅಪ್ ಅನ್ನು ಸ್ಟ್ರೀಮ್ ಮಾಡಲಾಗುವುದು.