ರಕ್ತಚರಿತ್ರ, ಕಬಾಲಿ, ಪ್ಯಾಡ್ಮ್ಯಾನ್, ಅಂದಾಧುನ್ ಸೇರಿದಂತೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ಗೆಲುವು ಹಾಗೂ ಸೋಲು ಯಾವುದೇ ಆಗಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದರಲ್ಲೂ ಗೆಲುವನ್ನು ಎಂದಿಗೂ ಬೆನ್ನತ್ತಿದವಳಲ್ಲ ಎಂದು ಹೇಳಿದ್ದಾರೆ. ಈ ಗೆಲುವು, ಸೋಲು, ಚಿತ್ರರಂಗ ಎಲ್ಲವೂ ತಾತ್ಕಾಲಿಕ. ಇಲ್ಲಿ ಯಾವುದೂ ಶಾಶ್ವತವಲ್ಲ. ಗೆಲುವು ದೊರೆತಾಗ ಅದನ್ನು ಪ್ರೀತಿಸಬೇಕು, ಎಂಜಾಯ್ ಮಾಡಬೇಕು. ಅದೇ ರೀತಿ ಸೋಲು ಅನುಭವಿಸಿದಾಗ ಪಾಠ ಕಲಿಯಬೇಕು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಎರಡನ್ನೂ ಸಮನಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ರಾಧಿಕಾ ಆಪ್ಟೆ 2005 ರಲ್ಲಿ ಬಿಡುಗಡೆಯಾದ 'ಲೈಫ್ ಹೊ ತೊ ಏಸೆ' ಚಿತ್ರದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ನಂತರ ಶೋರ್ ಇನ್ ದಿ ಸಿಟಿ, ಕಬಾಲಿ, ಫೋಬಿಯಾ, ಬದ್ಲಾಪುರ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಹಲ್ಯಾ ಎಂಬ ಕಿರುಚಿತ್ರವೊಂದರಲ್ಲಿ ಕೂಡಾ ಆಕೆ ನಟಿಸಿದ್ದಾರೆ.
ಚಿತ್ರರಂಗದಲ್ಲಿ ಇಷ್ಟು ದಿನಗಳ ಅನುಭವದಲ್ಲಿ ನಾನು ಸಾಕಷ್ಟು ಪಳಗಿದ್ದೇನೆ, ಎಷ್ಟೋ ಕೆಲಸಗಳನ್ನು ಕಲಿತಿದ್ದೇನೆ. ಯಾವುದೇ ಕೆಲಸವಾದರೂ ನಾನು ಚಾಲೆಂಗ್ ಆಗಿ ಸ್ವೀಕರಿಸುತ್ತೇನೆ. ನನಗೆ ನೀಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು ನನ್ನ ಕರ್ತವ್ಯವೇ ಹೊರತು ಅದರ ಸೋಲು-ಗೆಲುವನ್ನು ನಿರೀಕ್ಷಿಸುವುದಿಲ್ಲ. ಅಥವಾ ಯಾವುದೇ ವಿಷಯದಲ್ಲಿ ಸಿಲುಕಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.
ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ರಾಧಿಕಾ ಆಪ್ಟೆ ಅಭಿನಯದ 'ರಾತ್ ಅಕೇಲಿ ಹೈ ' ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ಬಗ್ಗೆ ಮಾತನಾಡಿದ ಅವರು, ಈ ಪಾತ್ರ ನನಗೆ ಬಹಳ ಚಾಲೆಂಜಿಂಗ್ ಆಗಿತ್ತು ಎಂದು ಹೇಳಿದ್ಧಾರೆ. ಹನಿ ತ್ರೆಹಾನ್ ನಿರ್ದೇಶನದ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಆದಿತ್ಯ ಶ್ರೀವಾತ್ಸವ್, ಶ್ವೇತಾ ತ್ರಿಪಾಠಿ ಹಾಗೂ ಇನ್ನಿತರರು ನಟಿಸಿದ್ದಾರೆ.