ETV Bharat / sitara

ಧೋನಿ ಮತ್ತು ನನ್ನ ನಡುವಿನ ಸಂಬಂಧ ಒಂದು ಕಲೆ: ನಟಿ ಲಕ್ಷ್ಮಿ ರೈ - ನಟಿ ಲಕ್ಷ್ಮಿ ರೈ ಅವರ ಹೇಳಿಕೆ

ಧೋನಿಯೊಂದಿಗಿನ ನನ್ನ ಸಂಬಂಧವು ಒಂದು ಕಲೆಯಂತಿದ್ದು, ಅದು ದೀರ್ಘಕಾಲದವರೆಗೆ ಮಾಸುವುದಿಲ್ಲ ಎಂದು ಲಕ್ಷ್ಮಿ ರೈ ಸಂದರ್ಶನವೊಂದರಲ್ಲಿ ಹೇಳಿದ್ದ ವಿಡಿಯೋ ವೈರಲ್ ಆಗಿದೆ.

lakshmi rai speaks about her realtionship with dhoni
ಧೋನಿ ಮತ್ತು ನನ್ನ ನಡುವಿನ ಸಂಬಂಧ ಒಂದು ಕಲೆ: ನಟಿ ಲಕ್ಷ್ಮಿ ರಾಯ್ ಹೇಳಿಕೆ ವೈರಲ್
author img

By

Published : Dec 5, 2021, 1:25 PM IST

Updated : Dec 5, 2021, 3:12 PM IST

ಟೀಂ ಇಂಡಿಯಾ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಹೇಂದ್ರ ಸಿಂಗ್ ಧೋನಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಧೋನಿ ಈಗ ತಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಿದ್ದಾರೆ.

ಧೋನಿ ತಮ್ಮ ವಿವಾಹಕ್ಕೂ ಮುಂದೆ ಕೆಲವೊಂದು ವಿಚಾರಗಳಲ್ಲಿ ಸುದ್ದಿಯಲ್ಲಿದ್ದರು. ನಟಿ ಲಕ್ಷ್ಮಿ ರೈ ಅವರೊಂದಿಗೆ ಧೋನಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳೂ ಹರಿದಾಡಿದ್ದವು. 2008-2009ರ ಅವಧಿಯಲ್ಲಿ ಲಕ್ಷ್ಮಿ ರೈ ಮತ್ತು ಧೋನಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದಷ್ಟೇ ಅಲ್ಲದೇ ಧೋನಿ ತನ್ನ ಸ್ನೇಹಿತ ಸುರೇಶ್ ರೈನಾ ಜೊತೆಗೂಡಿ ಲಕ್ಷ್ಮಿ ರೈ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈಗ ಕೆಲವು ವರ್ಷಗಳ ಹಿಂದಿನ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಧೋನಿಯೊಂದಿಗಿನ ನನ್ನ ಸಂಬಂಧವು ಒಂದು ಕಲೆಯಂತಿದ್ದು, ಅದು ದೀರ್ಘಕಾಲದವರೆಗೆ ಮಾಸುವುದಿಲ್ಲ ಎಂದು ಲಕ್ಷ್ಮಿ ರಾಯ್ ಸಂದರ್ಶನವೊಂದರಲ್ಲಿ ಹೇಳಿದ್ದರು. ನಾವು ಬೇರೆಯಾಗಿ ಐದು ವರ್ಷಗಳಾಗಿದ್ದು, ನನಗೆ ಮದುವೆಯಾಗಿ ಮಕ್ಕಳಾದರೂ, ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಲಕ್ಷ್ಮಿ ರೈ ಹೇಳಿದ್ದಾರೆ.

ಇದರ ಜೊತೆಗೆ ಧೋನಿಯನ್ನು ಹೊರತುಪಡಿಸಿ ಬೇರೆಯವರು ನನ್ನನ್ನು ಸೆಳೆದಿಲ್ಲ. ಬ್ರೇಕಪ್ ಆದ ನಂತರವೂ ನಾವು ಪರಸ್ಪರ ಗೌರವ ಹೊಂದಿದ್ದೇವೆ. ಧೋನಿ ತುಂಬಾ ಸಂತೋಷದಿಂದಿರುವ ವ್ಯಕ್ತಿ ಎಂದೂ ಅವರು ಹೇಳಿದರು.

ಇದನ್ನೂ ಓದಿ: 'ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ, ರಾಷ್ಟ್ರವಾದಿಗಳ ಪರ ಪ್ರಚಾರ ಮಾಡುವೆ'

Last Updated : Dec 5, 2021, 3:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.