ETV Bharat / sitara

ಡಿಸೆಂಬರ್​ನಲ್ಲಿ ಕತ್ರಿನಾ ಕೈಫ್​- ವಿಕ್ಕಿ ಕೌಶಲ್​ ಮದುವೆ ನಿಗದಿ - ರಾಜಸ್ತಾನ

ವಿಕ್ಕಿ ಕೌಶಲ್(Vikki koushal) ಮತ್ತು ಕತ್ರಿನಾ ಕೈಫ್​(Katrina kaif) ಮದುವೆ ಸಮಾರಂಭಕ್ಕಾಗಿ (Marriage ceremony) ಸಿಕ್ಸ್​ ಸೆನ್ಸೆಸ್ ಪೋರ್ಟ್​ ಹೋಟೆಲ್​ ಅನ್ನು ಬುಕ್​ ಮಾಡಲಾಗಿದ್ದು, ಡಿ.7ರಿಂದ 12 ರವರೆಗೆ ಮದುವೆ ಕಾರ್ಯಕ್ರಮಗಳು ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಹೊರ ಬೀಳಬೇಕಿದೆ.

katrina kaif vicky kaushal
ಡಿಸೆಂಬರ್​ನಲ್ಲಿ ಕತ್ರಿನಾ ಕೈಫ್​- ವಿಕ್ಕಿ ಕೌಶಲ್​ ಮದುವೆ ನಿಗದಿ
author img

By

Published : Nov 12, 2021, 12:43 PM IST

Updated : Nov 12, 2021, 1:27 PM IST

ಜೈಪುರ(ರಾಜಸ್ತಾನ): ಬಾಲಿವುಡ್​ ತಾರಾ ಜೋಡಿ ನಟಿ ಕತ್ರಿನಾ ಕೈಫ್​ (Katrina kaif)ಮತ್ತು ನಟ ವಿಕ್ಕಿ ಕೌಶಲ್​(Vikki koushal) ಅವರ ಮದುವೆ(Marriage) ರಾಜಸ್ಥಾನದ ಸವಾಯಿ ಮಧೋಪುರ ಜಿಲ್ಲೆಯ ಸಿಕ್ಸ್​ ಸೆನ್ಸೆಸ್​ ಪೋರ್ಟ್​ ಹೋಟೆಲ್​ನಲ್ಲಿ ಡಿಸೆಂಬರ್​ನಲ್ಲಿ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

ಮದುವೆ ಸಮಾರಂಭಕ್ಕಾಗಿ ಸಿಕ್ಸ್​ ಸೆನ್ಸೆಸ್ ಪೋರ್ಟ್​ ಹೋಟೆಲ್​ ಅನ್ನು ಬುಕ್​ ಮಾಡಲಾಗಿದ್ದು, ಡಿ.7ರಿಂದ 12 ರವರೆಗೆ ಮದುವೆ ಕಾರ್ಯಕ್ರಮಗಳು ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಎರಡೂ ಕುಟುಂಬಗಳಿಂದ ಅಧಿಕೃತ ಘೋಷಣೆ ಮಾತ್ರ ಹೊರಬೀಳಬೇಕಿದೆ.

ಇನ್ನೊಂದೆಡೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಕುಟುಂಬಸ್ಥರು ಮದುವೆಗೆ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 10 ಜನರ ತಂಡವೊಂದು ಸಿಕ್ಸ್​ ಸೆನ್ಸೆಸ್​ ಹೋಟೆಲ್​ಗೆ ತೆರಳಿದ್ದು, ಕೊಠಡಿಗಳ ಕಾಯ್ದಿರಿಸುವಿಕೆ ಮತ್ತು ಇನ್ನಿತರ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲಿವುಡ್​ ತಾರಾ ಜೋಡಿ ಇತ್ತೀಚೆಗಷ್ಟೇ ತಮ್ಮ ಮನೆಯಲ್ಲಿ ವಧು-ವರ ಶಾಸ್ತ್ರವನ್ನು ಮುಗಿಸಿವೆ ಎಂಬ ಸುದ್ದಿ ಹೊರ ಬಿದ್ದಿದೆ.

Last Updated : Nov 12, 2021, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.